ಫ್ಲೈಓವರ್ ಕಾಮಗಾರಿ ವೇಳೆ ASI ತಲೆ ಮೇಲೆ ಬಿದ್ದ ರಾಡ್; ​​21 ಗಂಟೆ ಕಳೆದರೂ ಪ್ರಜ್ಞಾಹೀನ ಸ್ಥಿತಿ, 16 ಜನರ ವಿರುದ್ಧ ದೂರು

ಮಂಗಳವಾರ ಸಂಜೆ 4 ಗಂಟೆಗೆ ಕೋರ್ಟ್ ವೃತ್ತದಲ್ಲಿ ಫ್ಲೈ ಓವರ್​ ಕಾಮಗಾರಿಯ ಸಂದರ್ಭದಲ್ಲಿ ರಾಡ್​ ಬಿದ್ದು ಹುಬ್ಬಳ್ಳಿಯ ಉಪನಗರ ಠಾಣೆಯ ASI ನಾಭಿರಾಜ್ ದಯಣ್ಣವರವರು ಗಂಭೀರವಾಗಿ ಗಾಯಗೊಂಡಿದ್ದರು. ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲೇ ನಾಭಿರಾಜ್ ಇದ್ದಾರೆ. 48 ಗಂಟೆಗಳ ಕಾಲ ಏನೂ ಹೇಳೋಕೆ ಆಗಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಫ್ಲೈಓವರ್ ಕಾಮಗಾರಿ ವೇಳೆ ASI ತಲೆ ಮೇಲೆ ಬಿದ್ದ ರಾಡ್; ​​21 ಗಂಟೆ ಕಳೆದರೂ ಪ್ರಜ್ಞಾಹೀನ ಸ್ಥಿತಿ, 16 ಜನರ ವಿರುದ್ಧ ದೂರು
ASI ನಾಭಿರಾಜ್ ದಯಣ್ಣವರ
Follow us
| Updated By: ಆಯೇಷಾ ಬಾನು

Updated on: Sep 11, 2024 | 12:56 PM

ಹುಬ್ಬಳ್ಳಿ, ಸೆ.11: ಫ್ಲೈಓವರ್ ಕಾಮಗಾರಿಯ ಸಂದರ್ಭದಲ್ಲಿ ರಾಡ್​​ ಬಿದ್ದು ಎಎಸ್​ಐ (ASI) ಗಂಭೀರ ಗಾಯಗೊಂಡ ಪ್ರಕರಣಕ್ಕೆ ‌ಸಂಬಂಧಿಸಿದಂತೆ ಫ್ಲೈ ಓವರ್​ ಕಾಮಗಾರಿಯ ಝಂಡು ಕನ್​ಸ್ಟ್ರಕ್ಷನ್​ ಎಂಡಿ ಸೇರಿ 16 ಜನರ ವಿರುದ್ಧ ದೂರು ದಾಖಲಾಗಿದೆ. ಮಹಾರಾಷ್ಟ್ರ ಮೂಲದ ಝಂಡು ಕನ್​ಸ್ಟ್ರಕ್ಷನ್ ವಿರುದ್ಧ ಹುಬ್ಬಳ್ಳಿಯ ಉಪನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಮಂಗಳವಾರ ಸಂಜೆ ರಾಡ್​ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ASI ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದಾರೆ.

ಮಂಗಳವಾರ ಸಂಜೆ 4 ಗಂಟೆಗೆ ಕೋರ್ಟ್ ವೃತ್ತದಲ್ಲಿ ಫ್ಲೈ ಓವರ್​ ಕಾಮಗಾರಿಯ ಸಂದರ್ಭದಲ್ಲಿ ರಾಡ್​ ಬಿದ್ದು ಹುಬ್ಬಳ್ಳಿಯ ಉಪನಗರ ಠಾಣೆಯ ASI ನಾಭಿರಾಜ್ ದಯಣ್ಣವರವರು ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ನಾಭಿರಾಜ್​ಗೆ ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲೇ ನಾಭಿರಾಜ್ ಇದ್ದಾರೆ. 48 ಗಂಟೆಗಳ ಕಾಲ ಏನೂ ಹೇಳೋಕೆ ಆಗಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Viral: ಸಹಪಾಠಿಯ ಹುಟ್ಟುಹಬ್ಬ, ಶಾಲೆಯಲ್ಲಿ ಭರ್ಜರಿ ಬೀಯರ್‌ ಪಾರ್ಟಿ ಮಾಡಿದ ಹೈಸ್ಕೂಲ್‌ ಹುಡುಗೀರು

ತಲೆಗೆ ಗಂಭೀರ ಗಾಯ ಹಿನ್ನೆಲೆ ನಾಭಿರಾಜ್ ದಯಣ್ಣವರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ತಲೆಗೆ ಗಂಭೀರ ಗಾಯವಾಗಿದೆ, ಎಎಸ್ಐಗೆ ಇನ್ನೂ ಪ್ರಜ್ಞೆ ಬಂದಿಲ್ಲ. ವೈದ್ಯರು ASI ನಾಭಿರಾಜ್​ಗೆ ಎಲ್ಲ ರೀತಿಯ ಚಿಕಿತ್ಸೆ ನೀಡ್ತಿದ್ದಾರೆ ಎಂದು ಟಿವಿ9ಗೆ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಕಮ್ಮಾರ್ ಮಾಹಿತಿ ನೀಡಿದ್ದಾರೆ.

ಇನ್ನು ಮತ್ತೊಂದೆಡೆ ಘಟನೆ ಸಂಬಂಧ ನಾಭಿರಾಜ್ ಸಂಬಂಧಿಕರು ಉಪನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸುಮಾರು 320 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಗುತ್ತಿಗೆದಾರರ ನಿರ್ಲಕ್ಷ್ಯ ಹಿನ್ನೆಲೆ ಅವಘಡ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಸಂಬಂಧಿಕರ ದೂರಿನನ್ವಯ ಕಂಪನಿಯ ಎಂಡಿ ಸೇರಿ 16 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಚಹಾ ಕುಡಿಯುತ್ತಾ ಒಡಿಶಾದ ಮಹಿಳೆಯರ ಜೊತೆ ಪ್ರಧಾನಿ ಮೋದಿ ಸಂವಾದ
ಚಹಾ ಕುಡಿಯುತ್ತಾ ಒಡಿಶಾದ ಮಹಿಳೆಯರ ಜೊತೆ ಪ್ರಧಾನಿ ಮೋದಿ ಸಂವಾದ
ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ