ಯಶಸ್ವಿಯಾದ ಕಾರ್ಯಾಚರಣೆ, ಶಿರ್ಲೆ ಫಾಲ್ಸ್ ಪ್ರವಾಸಕ್ಕೆ ಬಂದಿದ್ದ ಆರು ಮಂದಿ ಯುವಕರು ಪತ್ತೆ

ಶಿರ್ಲೆ ಫಾಲ್ಸ್ ಬಳಿ ಕಾಡಲ್ಲಿ ಕಾಣೆಯಾಗಿದ್ದ 6 ಯುವಕರು ಇಂದು ಪತ್ತೆಯಾಗಿದ್ದಾರೆ. ಯಲ್ಲಾಪುರದ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಯುವಕರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಸದ್ಯ ನಿನ್ನೆಯಿಂದ ನಡೆದಿದ್ದ ಸರ್ಚಿಂಗ್ ಆಪರೇಷನ್ ಇಂದು ಅಂತ್ಯವಾಗಿದೆ.

ಯಶಸ್ವಿಯಾದ ಕಾರ್ಯಾಚರಣೆ, ಶಿರ್ಲೆ ಫಾಲ್ಸ್  ಪ್ರವಾಸಕ್ಕೆ ಬಂದಿದ್ದ ಆರು ಮಂದಿ ಯುವಕರು ಪತ್ತೆ
ಪ್ರವಾಸಕ್ಕೆ ಬಂದಿದ್ದ ಆರು ಮಂದಿ ಯುವಕರು ಪತ್ತೆ

ಹುಬ್ಬಳ್ಳಿ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಶಿರ್ಲೆ ಫಾಲ್ಸ್ ಬಳಿ ಕಾಡಲ್ಲಿ ಕಾಣೆಯಾಗಿದ್ದ 6 ಯುವಕರು ಇಂದು ಪತ್ತೆಯಾಗಿದ್ದಾರೆ. ಯಲ್ಲಾಪುರದ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಯುವಕರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಸದ್ಯ ನಿನ್ನೆಯಿಂದ ನಡೆದಿದ್ದ ಸರ್ಚಿಂಗ್ ಆಪರೇಷನ್ ಇಂದು ಅಂತ್ಯವಾಗಿದೆ. ಹುಬ್ಬಳ್ಳಿಯ ಆಸಿಫ್ ಡಲಾಯತ್, ಅಹ್ಮದ್ ಶೇಕ್, ಅಫ್ತಾಬ್ ಶಿರಹಟ್ಟಿ, ಮಾಬುಸಾಬ್ ಶಿರಹಟ್ಟಿ, ಶಾನು ಬಿಜಾಪುರಿ, ಇಮ್ತಿಯಾಜ್ ಮುಲ್ಲಾನವರ್ ಪತ್ತೆಯಾದ ಯುವಕರು.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿರ್ಲೆಗೆ ಹುಬ್ಬಳ್ಳಿಯಿಂದ 6 ಮಂದಿ ಯುವಕರು ಮೂರು ಡಿಯೋ ಬೈಕ್ಗಳಲ್ಲಿ ಆಗಮಿಸಿದ್ರು. ಅರಣ್ಯ ಇಲಾಖೆ ಸಿಬ್ಬಂದಿ ಫಾಲ್ಸ್‌ ಬಳಿ ಬಿಡೋದಿಲ್ಲ ಅಂದ್ರೂ ಯುವಕರು ಗಲಾಟೆ ಮಾಡಿ ಫಾಲ್ಸ್ ಬಳಿ ಹೋಗಿದ್ರು. ಬಳಿಕ ಬೈಕ್​ಗಳು ಮಾತ್ರ ಫಾಲ್ಸ್ ದಾರಿಯಲ್ಲಿ ಸಿಕ್ಕಿದ್ವು. ಸದ್ಯ ಇಂದು 6 ಜನ ಯುವಕರು ಸಿಕ್ಕಿದ್ದಾರೆ.

ಮತ್ತೊಂದ್ಕಡೆ, ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗುತ್ತಲೇ ಇದೆ. ಇದ್ರಿಂದ ಕಾಳಿ ನದಿಗೆ ನಿರ್ಮಿಸಲಾಗಿದ್ದ ಕದ್ರಾ ಮತ್ತು ಕೊಡಸಳ್ಳಿ ಜಲಾಶಗಳು ಭರ್ತಿಯಾಗುವ ಹಂತಕ್ಕೆ ತಲುಪಿದೆ. ಹೀಗಾಗಿ ಕೊಡಸಳ್ಳಿ ಜಲಾಶಯದ 4 ಗೇಟ್‌ಗಳ ಮೂಲಕ 22,393 ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಮತ್ತೊಂದ್ಕಡೆ, ಕದ್ರಾ ಜಲಾಶಯದಿಂದ ಒಟ್ಟು 8 ಗೇಟ್ಗಳ ಮೂಲಕ 42,175 ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಬಿಡಲಾಗಿದೆ. ಪರಿಣಾಮ ಕಾಳಿ ನದಿ ತೀರದ ಮಲ್ಲಾಪುರ ಚರ್ಚ್ ವಾಡ, ಕದ್ರಾ, ಮಹಮ್ಮಾಯಿ ದೇವಸ್ಥಾನ ವ್ಯಾಪ್ತಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಇದನ್ನೂ ಓದಿ: ಕೆಲವೆಡೆ 35 ಸೆಂ.ಮೀ ದಾಟಿದ ಮಳೆ ಪ್ರಮಾಣ.. ಗೋಡೆ ಕುಸಿದು ವೃದ್ಧ ಸಾವು, ದೋಣಿ ಮಗುಚಿ ವೃದ್ಧೆ ಕೊನೆಯುಸಿರು

Click on your DTH Provider to Add TV9 Kannada