ಹುಬ್ಬಳ್ಳಿಯಲ್ಲಿ ಬೀದಿ ಕಾಮಣ್ಣ ಮಕ್ತುಂ ಹುಸೇನ ಕಥೆ..!
ಬೆಂಗಳೂರು ಆಯ್ತು, ಈಗ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೀದಿ ಕಾಮಣ್ಣರ ಕಿಟಲೇ ಜಾಸ್ತಿಯಾಗಿದೆ. ಕಾರಿನಲ್ಲಿ ಹೋಗುತ್ತಿದ್ದ ಯುವತಿಗೆ ಹಿಂಬಾಲಿಸಿಕೊಂಡು ಅವಾಚ್ಯವಾಗಿ ಚುಡಾಯಸಿದ್ದ ರೋಡ್ ರೋಮಿಯೋ ಒಬ್ಬ ಈಗ ಅಂದರ್ ಆಗಿದ್ದಾನೆ. ಇತನಿಗೆ ಮಾಡಿದ ತಪ್ಪಿನ ಅರಿವು ಸಹ ಆಗಿದೆ. ಆದರೆ, ಗಂಡ ಮಾಡಿದ ತಪ್ಪಿಗೆ ಹೆಂಡತಿ ಬೆಲೆ ತರಬೇಕಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.
ಹುಬ್ಬಳ್ಳಿ, ಅ.01: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ರಾತ್ರಿ ತನ್ನ ಮನೆಗೆ KA25 EM0446 ನೊಂದಣಿ ಸಂಖ್ಯೆಯ ಬೈಕ್ನಲ್ಲಿ ಮಕ್ತುಂ ತೆರಳುತ್ತಿದ್ದ, ಈ ವೇಳೆ ಕಾರಿನಲ್ಲಿ ಕೃತಿಕಾ ಎಂಬ ಯುವತಿ ಪ್ರಯಾಣ ಮಾಡುತ್ತಿದ್ದಳು. ಕಾರಿನಲ್ಲಿದ್ದ ಕೃತಿಕಾಳನ್ನು ಕಂಡ ಮಕ್ತುಂ ಅಸಭ್ಯವಾಗಿ ಸನ್ನೆ ಮಾಡಿದ್ದಾನೆ. ಅಲ್ಲದೆ ಬೈರಿದೇವರಕೊಪ್ಪದಿಂದ ಸಹನಾ ಕಾಲೇಜಿನ ತನಕ ಕೃತಿಕಾ ಕಾರನ್ನು ಫಾಲೋ ಮಾಡಿದ್ದಾನೆ. ಕಾರ್ ಸ್ಲೋ ಮಾಡಿದ ಕೃತಿಕಾ ಏನು ಎಂದು ಕೇಳಿದ್ದಾಳೆ. ಆಗ ನೀನು ತುಂಬಾ ಚೆನ್ನಾಗಿದ್ದಿಯಾ ಎಂದು ಮಕ್ತುಂ ಹೇಳಿದ್ದಾನೆ. ವಾಪಾಸ್ಸು ಕೃತಿಕಾ ಗದರಿದಾಗ ಅಸಭ್ಯ ಶದ್ಧದಿಂದ ನಿಂದಿಸಿದ ಮಕ್ತುಂ, ಅಲ್ಲಿಂದ ಎಸ್ಕೆಪ್ ಆಗಿದ್ದ. ಮಕ್ತುಂ ಈ ಪುಂಡಾಟಿಕೆಯನ್ನು ಕೃತಿಕಾ ತನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದಳು.‘
ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಕ್ತುಂ
ಇನ್ನು ಕೃತಿಕಾ ವಿಡಿಯೋ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತ ಹುಬ್ಬಳ್ಳಿ ನವನಗರ ಪೊಲೀಸರು, ಮಕ್ತುಂ ಹುಸೇನನ್ನು ಇಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಘಟನೆ ಬಗ್ಗೆ ಮಾಹಿತಿ ಪಡೆಯಲು ಸಂತ್ರಸ್ತೆ ಕೃತಿಕಾಳನ್ನು ಸಹ ಠಾಣೆ ಕರೆಸಿದ್ದರು. ಈ ವೇಳೆ ತನ್ನ ತಪ್ಪಿನ ಅರಿವಾಗಿ ಮಕ್ತುಂ ಪೊಲೀಸರ ಎದುರು ಕೃತಿಕಾ ಕಾಲಿಗೆ ಬಿದ್ದು ಕ್ಷಮೆಯಾಚನೆ ಮಾಡಿದ್ದಾನೆ.
ಇದನ್ನೂ ಓದಿ:ನೆಲಮಂಗಲ: ಯುವತಿಯ ಎದೆ ಭಾಗ ಮುಟ್ಟಿ ಪರಾರಿಯಾಗಿದ್ದ ಆರೋಪಿ ಬಂಧನ
ಈ ಪುಂಡ ಮಕ್ತುಂ ಗೌಂಡಿ ಕೆಲಸ ಮಾಡುತ್ತಿದ್ದಾನೆ. ವಿಪರ್ಯಾಸವೆಂದರೆ ಮಕ್ತುಂ ಹಿಂದೂ ಯುವತಿ ಮೀನಾ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಮಕ್ತುಂ ಮೇಲಿನ ಪ್ರೀತಿಗೆ ಮೀನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಇಷ್ಟು ಸುಂದರ ಸಂಸಾರ ಇದ್ದರೂ ಮಕ್ತುಂ ಚಪಲ ಮಾತ್ರ ಕಡಿಮೆ ಆಗಿಲ್ಲ, ಗಂಡ ಮಾಡಿದ ತಪ್ಪಿಗೆ ಪತ್ನಿ ಮೀನಾ ಶಿಕ್ಷೆ ಅನುಭವಿಸುತ್ತಿದ್ದಾಳೆ. ಕೃತಿಕಾ ಬಳಿ ದೂರು ದಾಖಲಿಸಿದಂತೆ ಬೇಡಿಕೊಂಡಿದ್ದಾಳೆ. ಇನ್ನು ಕೃತಿಕಾ ಸಹ ಮಕ್ತುಂ ಕ್ಷಮಾಪಣೆಗೆ ಒಪ್ಪಿದ್ದು, ಯಾವುದೇ ದೂರು ದಾಖಲಿಸದರಿಲು ನಿರ್ಧಾರ ಮಾಡಿದ್ದಾಳೆ.
ಸದ್ಯ ನವನಗರ ಪೊಲೀಸ್ ಠಾಣೆಯಲ್ಲಿ ಮಕ್ತುಂ ವಿಚಾರಣೆ ನಡೆಯುತ್ತಿದೆ. ದಾರಿಯಲ್ಲಿ ಹೋಗುವ ಹೆಣ್ಣು ಮಕ್ಕಳಿಗೆ ಕಾಟ ನೀಡುವ ಪೋಲಿ, ಪುಂಡರಿಗೆ ಮಕ್ತುಂ ಮೂಲಕ ಹುಬ್ಬಳ್ಳಿ-ಧಾರವಾಡ ಪೊಲೀಸರು ಖಡಕ್ ವಾರ್ನಿಂಗ್ ನೀಡುತ್ತಾರಾ?. ಅಥವಾ ಸಂತ್ರಸ್ತೆ ಕೃತಿಕಾ, ಮಕ್ತುಂ ಪತ್ನಿ ನಿರ್ಧಾರಕ್ಕೆ ಮನ್ನಣೆ ನೀಡಿ, ಬುದ್ಧಿವಾದ ಹೇಳಿ ಬಿಟ್ಟು ಕಳುಹಿಸುತ್ತಾರಾ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ