Hubballi Power Cut: ಹುಬ್ಬಳ್ಳಿಯ ಈ ಪ್ರದೇಶಗಳಲ್ಲಿ ಜ.5 ರಿಂದ ಜ.14 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ
Hubli Power Outage: ಹುಬ್ಬಳ್ಳಿ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ತಾಲೂಕಿನ ಅಂಚಟಗೇರಿ, ಬ್ಯಾಹಟ್ಟಿ, ಶಿರಗುಪ್ಪಿ ಮತ್ತು ನೂಲ್ವಿ ಶಾಖೆಗಳ ವ್ಯಾಪ್ತಿಯಲ್ಲಿನ ಫೀಡರ್‌ಗಳ ತುರ್ತು ನಿರ್ವಹಣಾ ಕಾರ್ಯ ಜ. 5ರಿಂದ 14ರ ವರೆಗೆ ನಡೆಯಲಿದ್ದು, ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹುಬ್ಬಳ್ಳಿ: ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು; ಜ. 5ರಂದು ವರೂರ, ಅರಳಿಕಟ್ಟಿ, ಅಗಡಿ, ಶೆರೆವಾಡ, ತಿರುಮಲ ಕೊಪ್ಪ, ಪಾಲಿಕೊಪ್ಪ, ಕಂಪ್ಲಿಕೊಪ್ಪ, ಕುರಡಿಕೇರಿ, ಕರಡಿಕೊಪ್ಪ, ಪಾಳೆ. ಜ. 6 ರಂದು ದೇವರಗುಡಿಹಾಳ, ರೇವಡಿ ಹಾಳ, ಪರಸಾಪುರ. ಜ. 7ರಂದು ಕೊಟಗುಂಡಹುನಸಿ, ಕುಂದಗೋಳ ಅದರಗುಂಚಿ, ನೂಲ್ವಿ, ಶೆರೆವಾಡ. ಜ. 8ರಂದು ರಾಯನಾಳ, ಗಂಗಿವಾಳ, ಅಂಚಟಗೇರಿ, ದೇವರ ಗುಡಿಹಾಳ, ರೇವಡಿಹಾಳ, ಪರಸಾಪುರ ಹಾಗೂ ಕೈಗಾರಿಕಾ ಪ್ರದೇಶ. ಜ. 9ರಂದು ಬ್ಯಾಹಟ್ಟಿ, ಎಲ್‌ಫಿನ್ ಬಡಾವಣೆ, ಸುಳ್ಯ.
ಜ. 10ರಂದು ಕುಸುಗಲ್, ಹೆಬಸೂರ, ಕಿರೇಸೂರ, ಮಾರುತಿ ನಗರ, ವೈಭವ ನಗರ, ದುಂದೂರ, ಬೈದೂರು, ಸನ್ ಸಿಟಿ ಬಡಾವಣೆ. ಜ. 11ರಂದು ಶಿರಗುಪ್ಪಿ, ‘ನಾಗರಹಳ್ಳಿ, ಮಂಟೂರ, ಬಂಡಿವಾಡ, ಬಮ್ಮಾಪುರ, ಕುಸುಗಲ್ ಸ್ಟೇಷನ್. ಜ. 12ರಂದು ಕೋಳಿವಾಡ, ಮಲ್ಲಿಗವಾಡ, ಉಮಚಗಿ, ಇಂಗಳಹಳ್ಳ. ಜ. 13ರಂದು ಕುಂದಗೋಳ ಕ್ರಾಸ್, ಬುಡರಸಿಂಗಿ, ಬೆಳಗಲಿ, ಇನಾಂವೀರಾಪುರ, ಶೆರೆವಾಡ ಕ್ರಾಸ್, ಬೆಳಗಲಿ, ಕ್ರಾಸ್ ಮತ್ತು ಜ. 14ರಂದು ಚೆವರಗುಡ್ಡ, ಚೆನ್ನಾಪುರ, ರಾಮಾಪುರ, ಮಾವನೂರ, ಕಟ್ಟೂರ, ಗಿರಿಯಾಲ, ಅಂಚಟಗೇರಿ ಸುತ್ತಮುತ್ತಲಿನ ಪ್ರದೇಶಗಳು.
ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9, ಧಾರವಾಡ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:22 am, Wed, 4 January 23