ಅರೆಬರೆ ರಸ್ತೆ ಕಾಮಗಾರಿಯಿಂದ ವಾಹನ ಸವಾರರಿಗೆ ಸಂಕಷ್ಟ: ಹೊರಮಾವು ರಸ್ತೆಯಲ್ಲಿ ಧೂಳೋ ಧೂಳು!

| Updated By: ಗಂಗಾಧರ​ ಬ. ಸಾಬೋಜಿ

Updated on: Aug 18, 2024 | 8:13 PM

ಬೆಂಗಳೂರಿನ ಹೊರಮಾವಿನ ವಿಜಯಬ್ಯಾಂಕ್ ಕಾಲೋನಿ ಪಕ್ಕದಲ್ಲಿರುವ ಸರ್ವೀಸ್ ರಸ್ತೆಯ ದುಸ್ಥಿತಿ ಹೇಳತಿರದು. ಗುಂಡಿಗಳಿಂದ ತುಂಬಿದ್ದ ರಸ್ತೆಗೆ ಟಾರ್ ಹಾಕುತ್ತೇವೆ ಅಂತಾ ಅಗೆದುಹೋಗಿದ್ದ ಪಾಲಿಕೆ ಮೂರು ತಿಂಗಳಾದರೂ ಇತ್ತ ತಿರುಗಿ ನೋಡಿಲ್ಲವಂತೆ. ಇದರಿಂದ ರಸ್ತೆ ತುಂಬ ಧೂಳು, ಕಲ್ಲು ತುಂಬಿ ವಾಹನ ಸವಾರರಿಗೆ ನಿತ್ಯ ನರಕ ದರ್ಶನವಾಗುತ್ತಿದೆ.

ಅರೆಬರೆ ರಸ್ತೆ ಕಾಮಗಾರಿಯಿಂದ ವಾಹನ ಸವಾರರಿಗೆ ಸಂಕಷ್ಟ: ಹೊರಮಾವು ರಸ್ತೆಯಲ್ಲಿ ಧೂಳೋ ಧೂಳು!
ಅರೆಬರೆ ರಸ್ತೆ ಕಾಮಗಾರಿಯಿಂದ ವಾಹನ ಸವಾರರಿಗೆ ಸಂಕಷ್ಟ: ಹೊರಮಾವು ರಸ್ತೆಯಲ್ಲಿ ಧೂಳೋ ಧೂಳು!
Follow us on

ಬೆಂಗಳೂರು, ಆಗಸ್ಟ್​ 18: ರಾಜಧಾನಿಯಲ್ಲಿ ರಸ್ತೆ (road) ಸಮಸ್ಯೆ ಮುಗಿಯೋ ಲಕ್ಷಣ ಕಾಣುತ್ತಿಲ್ಲ. ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳ (potholes) ಮಧ್ಯೆ ಪರದಾಡಿ ಸುಸ್ತಾಗಿದ್ದ ಜನರಿಗೆ ಇದೀಗ ರಸ್ತೆ ಕಾಮಗಾರಿಗಳ ಅರ್ಧಂಬರ್ಧ ಕಾಮಗಾರಿ ಜನರ ನಿದ್ದೆಗೆಡಿಸಿದೆ. ಗುಂಡಿ ಬಿದ್ದಿದ್ದ ರಸ್ತೆ ಸರಿಮಾಡುತ್ತೇವೆ ಅಂತಾ ಅಗೆದು ಬಿಟ್ಟ ಪಾಲಿಕೆ, ಇದೀಗ ಅರೆಬರೆ ಕಾಮಗಾರಿ ನಡೆಸಿ ನಿಲ್ಲಿಸಿರುವುದು ವಾಹನ ಸವಾರರಿಗೆ ಸಂಕಷ್ಟ ತಂದಿಟ್ಟಿದೆ.

ಸವಾರರಿಗೆ ನಿತ್ಯ ನರಕ ದರ್ಶನ

ನಗರದ ಹೊರಮಾವಿನ ವಿಜಯಬ್ಯಾಂಕ್ ಕಾಲೋನಿ ಪಕ್ಕದಲ್ಲಿರುವ ಸರ್ವೀಸ್ ರಸ್ತೆಯ ದುಸ್ಥಿತಿ ಹೇಳತಿರದು. ಗುಂಡಿಗಳಿಂದ ತುಂಬಿದ್ದ ರಸ್ತೆಗೆ ಟಾರ್ ಹಾಕುತ್ತೇವೆ ಅಂತಾ ಅಗೆದುಹೋಗಿದ್ದ ಪಾಲಿಕೆ ಮೂರು ತಿಂಗಳಾದರೂ ಇತ್ತ ತಿರುಗಿ ನೋಡಿಲ್ಲವಂತೆ. ಇದರಿಂದ ರಸ್ತೆ ತುಂಬ ಧೂಳು, ಕಲ್ಲು ತುಂಬಿ ವಾಹನ ಸವಾರರಿಗೆ ನಿತ್ಯ ನರಕ ದರ್ಶನವಾಗುತ್ತಿದೆ.

ಇದನ್ನೂ ಓದಿ: ಮೂರು ತಿಂಗಳಲ್ಲಿ ಬರೋಬ್ಬರಿ 12 ಲಕ್ಷ ರೂ ವಿದ್ಯುತ್ ಬಿಲ್: ದಂಗಾದ ಮನೆ ಮಾಲೀಕ

ಇನ್ನು ಈ ರಸ್ತೆಯಲ್ಲಿ ಸಿಮೆಂಟ್ ರೀತಿಯ ಧೂಳು ಬರುತ್ತಿದ್ದು, ಇದರಿಂದ ಅಕ್ಕಪಕ್ಕದ ಮನೆಗಳು, ಅಂಗಡಿಗಳಲ್ಲಿರುವ ಜನರು ನಿತ್ಯ ಸಂಕಷ್ಟ ಅನುಭವಿಸ್ತಿದ್ದಾರೆ. ಫುಟ್ ಪಾತ್, ರಸ್ತೆಬದಿ ನಿಲ್ಲಿಸಿದ ವಾಹನಗಳ ಜೊತೆಗೆ ರಸ್ತೆ ಬದಿಯ ಗಿಡ, ಮರಗಳು ಕೂಡ ಧೂಳಿನಿಂದ ತುಂಬಿಹೋಗಿದ್ದು, ಅತ್ತ ರಸ್ತೆ ಮೇಲೆ ಓಡಾಡಲು ವಾಹನ ಸವಾರರು ಪರದಾಡ್ತಿದ್ರೆ, ಇತ್ತ ಉಸಿರಾಟದ ಸಮಸ್ಯೆಯಿಂದ ನಿವಾಸಿಗಳು ಹೈರಾಣಾಗಿಬಿಟ್ಟಿದ್ದಾರೆ.

ರಸ್ತೆ ಕಾಮಗಾರಿ ಶುರು ಮಾಡಿ ಅಂತಾ ಹಲವು ಭಾರೀ ಪಾಲಿಕೆಗೆ ದೂರು ನೀಡಿದ್ರೂ ಕಾಮಗಾರಿ ಆರಂಭವಾಗದೇ ಇರೋದು ಜನರನ್ನ ಸಂಕಷ್ಟಕ್ಕೆ ದೂಡಿದೆ. ಕಾಮಗಾರಿಗೆ ತಂದಿದ್ದ ಬುಲ್ಡೋಜರ್ ರಸ್ತೆ ಬದಿಯೇ ನಿಂತಿದೆ. ಅತ್ತ ಜಲ್ಲಿ ತುಂಬಿದ ರಸ್ತೆಯಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯವಾಗ್ತಿದ್ರೆ, ಮತ್ತೊಂದೆಡೆ ಟ್ರಾಫಿಕ್ ಕಿರಿಕಿರಿಯಿಂದ ಒದ್ದಾಡ್ತಿರೋ ಜನರು ಆದಷ್ಟು ಬೇಗ ರಸ್ತೆ ಸರಿಮಾಡಿ ಅಂತಿದ್ದಾರೆ.

ಇದನ್ನೂ ಓದಿ: ಬಿಸಿಲು-ಸೆಕೆ, ಮಳೆ-ಚಳಿ: ಬೆಂಗಳೂರಿನಲ್ಲಿ ವಿಚಿತ್ರ ಹವಾಮಾನಕ್ಕೆ ಹೆದರಿದ ಸಿಟಿ ಮಂದಿ

ಅದೆಷ್ಟೋ ಭಾರೀ ಗುಂಡಿ ಗಂಡಾಂತರದಿಂದ ಸಿಟಿಮಂದಿ ಸಂಕಷ್ಟ ಅನುಭವಿಸಿದರೂ, ಎಷ್ಟೇ ದೂರು ಬಂದ್ರೂ ಪಾಲಿಕೆ ಮಾತ್ರ ಸೈಲೆಂಟ್ ಆಗಿರೋದು ಸಿಟಿಮಂದಿಯನ್ನ ಕಂಗಾಲಾಗಿಸಿದೆ. ಸದ್ಯ ಧೂಳು, ಟ್ರಾಫಿಕ್ ನಿಂದ ಕಂಗೆಟ್ಟಿರೋ ನಿವಾಸಿಗಳಿಗೆ ರಸ್ತೆ ಸಮಸ್ಯೆಯಿಂದ ಪಾಲಿಕೆ ಇನ್ನಾದ್ರೂ ಮುಕ್ತಿ ಕೊಡುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:10 pm, Sun, 18 August 24