ಸಿಎಂ ವಿರುದ್ಧ ಪ್ರಾಸಿಕ್ಯೂಸಷನ್​ಗೆ ಅನುಮತಿ: ಪ್ರತಿಭಟನೆ ಕಾವು, ನಗರದಾದ್ಯಂತ ಪೊಲೀಸ್​ ಕಟ್ಟೆಚ್ಚರ

ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದೊಡ್ಡಿದೆ. ಸಿಎಂ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದೇ ತಡ ಕಾಂಗ್ರೆಸ್‌ ಹಾಗೂ ಬೆಂಬಲಿಗರು ರೊಚ್ಚಿಗೆದ್ದಿದ್ದಾರೆ. ಇನ್ನು ಸೋಮವಾರ ಕರ್ನಾಟಕದಾದ್ಯಂತ ಪ್ರತಿಭಟನೆ ನಡೆಯಲಿದೆ. ಹೀಗಾಗಿ ಎಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಸಿಎಂ ವಿರುದ್ಧ ಪ್ರಾಸಿಕ್ಯೂಸಷನ್​ಗೆ ಅನುಮತಿ: ಪ್ರತಿಭಟನೆ ಕಾವು, ನಗರದಾದ್ಯಂತ ಪೊಲೀಸ್​ ಕಟ್ಟೆಚ್ಚರ
ಸಿಎಂ ವಿರುದ್ಧ ಪ್ರಾಸಿಕ್ಯೂಸಷನ್​ಗೆ ಅನುಮತಿ: ಪ್ರತಿಭಟನೆ ಕಾವು, ನಗರದಾದ್ಯಂತ ಪೊಲೀಸ್​ ಕಟ್ಟೆಚ್ಚರ
Follow us
ರಾಚಪ್ಪಾಜಿ ನಾಯ್ಕ್
| Updated By: ಗಂಗಾಧರ​ ಬ. ಸಾಬೋಜಿ

Updated on: Aug 18, 2024 | 7:33 PM

ಬೆಂಗಳೂರು, ಆಗಸ್ಟ್​ 18: ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಸಷನ್​ಗೆ (Prosecution) ಅನುಮತಿ ನೀಡುತ್ತಿದ್ದಂತೆ ಹಲವು ವಿರೋಧಗಳು ವ್ಯಕ್ಯವಾಗುತ್ತಿದೆ. ಸದ್ಯ ಅದರ ಮುಂದುವರಿದ ಭಾಗವೆಂಬತೆ ಇದೀಗ ಪ್ರತಿಭಟನೆಯ ಕಾವು ಹೆಚ್ಚಾಗುವಂತಹ ಸಾಧ್ಯತೆಗಳು ಕೂಡ ಇದೆ. ಹಾಗಾಗಿ ಪೊಲೀಸರು (police) ಕಟ್ಟೆಚ್ಚರ ವಹಿಸಿದ್ದಾರೆ. ಮುಖ್ಯಂಮತ್ರಿ ಸಿದ್ದರಾಮಯ್ಯ ಮುಡಾ ಹಗರಣ ಸಂಬಂಧ ರಾಜೀನಾಮೆ ನೀಡಬೇಕು ಅನ್ನೋ ವಿರೋಧ ಪಕ್ಷಗಳ ಒತ್ತಾಯದ ಬೆನ್ನಲ್ಲೆ ಈಗ ಪ್ರತಿಭಟನೆಗಳೂ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ನಗರದಾದ್ಯಂತ ಸಾಕಷ್ಟು ಕಡೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಆಯಾ ವಿಭಾಗದ ಡಿಸಿಪಿಗಳಿಗೆ ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ‌.

ಹೆಚ್ಚುವರಿ ಪೊಲೀಸ್​ ನಿಯೋಜನೆಗೆ ಸೂಚನೆ

ನಗರದಾದ್ಯಂತ ಪ್ರತಿಭಟನೆ ನಡೆಸಿದರೆ ಸಹಜವಾಗಿಯೇ ಲಾ ಅಂಡ್ ಆರ್ಡರ್ ಹದಗೆಡುವ ಸಾಧ್ಯತೆ ತೀರ ಹೆಚ್ಚಿದೆ. ಹೀಗಾಗಿ ಪ್ರತಿಭಟನೆಯನ್ನ ಹತ್ತಿಕ್ಕಲು ಪೊಲೀಸರೂ ಕೂಡ ಮುಂದಾಗಿದ್ದಾರೆ. ಸಭೆ ನಡೆಸಿದ ಪೊಲೀಸ್ ಆಯುಕ್ತರು ಆಯಾ ವಿಭಾಗದ ಡಿಸಿಪಿಗಳಿಗೆ ಸೂಚನೆ ನೀಡಿ ಯಾವ ಭಾಗದಲ್ಲಿ ಹೆಚ್ಚು ಪ್ರತಿಭಟನೆ ಸಾಧ್ಯತೆ ಇದೆಯೋ ಅಲ್ಲಿ ಹೆಚ್ಚುವರಿ ಪೊಲೀಸರನ್ನ ನಿಯೋಜನೆ ಮಾಡಲು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಆಗಸ್ಟ್ 23 ಸಿದ್ದರಾಮಯ್ಯ ದೆಹಲಿಗೆ, ಕುತೂಹಲ ಮೂಡಿಸಿದ ಸಿಎಂ ರಾಜಕೀಯ ನಡೆ!

ಈಗಾಗಲೆ ಕಾಂಗ್ರೆಸ್ ಮುಖಂಡರು, ಬ್ಲಾಕ್ ವೈಸ್ ಮುಖಂಡರ ಜೊತೆ ಆಯಾ ವಿಭಾಗದ ಡಿಸಿಪಿಗಳು ಚರ್ಚೆಯನ್ನ ನಡೆಸಿದ್ದಾರೆ. ಈಗಾಗಲೇ ಹೈಕೋರ್ಟ್ ಆದೇಶದ ಹಿನ್ನಲೆ ಎಲ್ಲೆಂದರಲ್ಲಿ‌ ಪ್ರತಿಭಟನೆ ಮಾಡುವಂತಿಲ್ಲ. ನಿಗದಿತ ಸ್ಥಳದಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶವಿದೆ ಎಂದು ಅವರಿಗೆ ತಿಳಿ ಹೇಳಲಾಗಿದೆ‌. ಅಷ್ಟೇ ಅಲ್ಲದೆ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆಗೆ ಅವಕಾಶವಿದ್ದು ಅಲ್ಲಿ ಪ್ರತಿಭಟನೆ ಮಾಡಬಹುದು ಎಂದು ಸೂಚನೆ ನೀಡಿದ್ದಾರೆ.

ಇನ್ನು ಆಡಳಿತ ಪಕ್ಷದಲ್ಲಿರುವ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಬೆಂಬಲಿಗರು ಪ್ರತಿಭಟನೆ ಮಾಡುತ್ತಿರುವುದರಿಂದ ಪೊಲೀಸರೂ ಕೂಡ ಎಲ್ಲೆಂದರಲ್ಲಿ ಪ್ರತಿಭಟನೆಯನ್ನ ಹತ್ತಿಕ್ಕಲು ಹರಸಾಹಸ ಪಡಬೇಕಾಗಿದೆ‌. ಆದರೆ ಕೋರ್ಟ್ ಆದೇಶ ಮೀರಿದವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲೇಬೇಕಾಗಿದೆ‌.

ಇದನ್ನೂ ಓದಿ: ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟ: ಕೇಂದ್ರದ ಚೆಕ್ ಲಿಸ್ಟ್​ ಸಿಎಂ ಪರ ವಕೀಲರಿಗೆ ಅಸ್ತ್ರ

ಇನ್ನು ಈಗಾಗಲೆ ಕಾಂಗ್ರೆಸ್ ಪ್ರಾಬಲ್ಯವಿರುವ ನಗರದ ಏರಿಯಾಗಳಲ್ಲಿ ಕೆಎಸ್​ಆರ್​ಪಿ ತುಕಡಿಗಳನ್ನ ನಿಯೋಜನೆ ಮಾಡುವ ಮೂಲಕ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಮುಂದಾಗಿದ್ದಾರೆ. ಸದ್ಯ ಸೋಮವಾರ ನಗರದ ಅಷ್ಟೂ ಕಡೆ ಪೊಲೀಸರು ರಸ್ತೆಗಿಳಿಯಲಿದ್ದಾರೆ. ಸೋಮವಾರವಾದ್ದರಿಂದ ಸಾಕಷ್ಟು ವಾಹನದಟ್ಟಣೆ ಕೂಡ ಇರುತ್ತದೆ. ಪ್ರತಿಭಟನೆ ನಡೆದರೆ ಸಂಚಾರಿ ಪೊಲೀಸರಿಗೂ ಕೂಡ ಸಂಚಾರ ನಿಯಂತ್ರಣ ಕಷ್ಟವಾಗಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.