ಮೂರು ತಿಂಗಳಲ್ಲಿ ಬರೋಬ್ಬರಿ 12 ಲಕ್ಷ ರೂ ವಿದ್ಯುತ್ ಬಿಲ್: ದಂಗಾದ ಮನೆ ಮಾಲೀಕ
ಪ್ರತಿ ತಿಂಗಳು ನೂರೋ ಇನ್ನೂರೋ ವಿದ್ಯುತ್ ಬಿಲ್ ಬರುತ್ತಿದ್ದ ಮನೆಗೆ, ಏಕಾಏಕಿ ಹನ್ನೆರಡು ಲಕ್ಷ ರೂ. ವಿದ್ಯುತ್ ಬಿಲ್ ಬಂದರೆ ಆ ಮನೆ ಮಾಲೀಕನ ಪರಿಸ್ಥಿತಿ ಏನಾಗಬೇಡ ಹೇಳಿ. ಸದ್ಯ ಇಂತಹದ್ದೇ ಒಂದು ಘಟನೆ ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವಿದ್ಯಾರಣ್ಯಪುರದ ತಿಂಡ್ಲುವಿನಲ್ಲಿ ನಡೆದಿದೆ. ಮೂರು ತಿಂಗಳಲ್ಲಿ ಬರೋಬ್ಬರಿ 12 ಲಕ್ಷ ರೂ. ವಿದ್ಯುತ್ ಬಿಲ್ ಬಂದಿದೆ.
ಬೆಂಗಳೂರು, ಆಗಸ್ಟ್ 18: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿ ತಿಂಗಳು ಮನೆಗಳಿಗೆ ಜೀರೋ ವಿದ್ಯುತ್ ಬಿಲ್ (Electricity bill) ಬರುತ್ತಿದೆ. ಆದರೆ ಇಲ್ಲೊಂದು ಮನೆಗೆ ಪ್ರತಿ ತಿಂಗಳು ಬರೋಬ್ಬರಿ ಐದು ಲಕ್ಷ ರೂ. ವಿದ್ಯುತ್ ಬಿಲ್ ಬರುತ್ತಿದ್ದು, ಇದರಿಂದ ಮನೆ ಮಾಲೀಕ ಶಾಕ್ ಆಗಿರುವಂತಹ ಘಟನೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವಿದ್ಯಾರಣ್ಯಪುರದ ತಿಂಡ್ಲುವಿನಲ್ಲಿ ನಡೆದಿದೆ.
ಮಾಲೀಕ ಪ್ರಸನ್ನ ಕುಮಾರ್ ಅವರದು ಮಧ್ಯಮ ವರ್ಗದ ಮನೆ. ಮನೆಯ ಟೆರಸ್ ಮೇಲೆ ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಿರುವುದರಿಂದ ಪ್ರತಿ ತಿಂಗಳು 200 ರಿಂದ 250 ರೂ. ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ ಇದೀಗ ಏಕಾಏಕಿ ಜೂನ್ ಮತ್ತು ಆಗಸ್ಟ್ ತಿಂಗಳಲ್ಲಿ 12 ಲಕ್ಷ ರೂ. ವಿದ್ಯುತ್ ಬಿಲ್ ಬಂದಿದೆ. ಜೂನ್ ತಿಂಗಳಲ್ಲಿ 5,91,087 ಲಕ್ಷ ರೂ. ಬಿಲ್ ಬಂದಿದ್ದರೆ, ಆಗಸ್ಟ್ನಲ್ಲಿ 5,86,736 ಲಕ್ಷ ರೂ. ಬಿಲ್ ಬಂದಿದ್ರೆ, ಜುಲೈ ತಿಂಗಳಲ್ಲಿ ಕೇವಲ 214 ರೂ. ಬಂದಿದೆ ಅಂತೆ. ಈಗಾಗಲೇ ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿರುವ ಮನೆ ಮಾಲೀಕ ಪ್ರಸನ್ನ ಕುಮಾರ್, ಮಧ್ಯಮ ವರ್ಗದ ಜನರಿಗೆ ಬೆಸ್ಕಾಂ ಈ ರೀತಿ ಶಾಕ್ ನೀಡಿದರೆ ಹೇಗೆ ನಾವು ಇರೋದು ಅಂತಾರೇ.
ಇದನ್ನೂ ಓದಿ: ಬಿಸಿಲು-ಸೆಕೆ, ಮಳೆ-ಚಳಿ: ಬೆಂಗಳೂರಿನಲ್ಲಿ ವಿಚಿತ್ರ ಹವಾಮಾನಕ್ಕೆ ಹೆದರಿದ ಸಿಟಿ ಮಂದಿ
ಇನ್ನೂ ಈ ಬಗ್ಗೆ ನಾಳೆ ಮನೆ ಮಾಲೀಕ ಪ್ರಸನ್ನ ಕುಮಾರ್ ಬೆಸ್ಕಾಂ ಮುಖ್ಯ ಕಚೇರಿಗೆ ದೂರು ನೀಡಲು ಮುಂದಾಗಿದ್ದಾರೆ. ಇಷ್ಟು ಬಿಲ್ ಕಟ್ಟಲು ಹೇಳಿದರೆ ನಾವು ಮನೆ ಮಾರಾಟ ಮಾಡಬೇಕಾಗುತ್ತದೆ. ಈ ಬಿಲ್ ನೋಡಿದ್ದೆ ಹಾರ್ಟ್ ಅಟ್ಯಾಕ್ ಆಗಿ ಹೋಗ್ತಾನೆ ಮನುಷ್ಯ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ಬೆಸ್ಕಾಂ ಜೂನಿಯರ್ ಇಂಜಿನಿಯರ್ ಉಮಾಶಂಕರ್ ಅವರನ್ನು ಕೇಳಿದರೆ, ನನಗೆ ಬಿಲ್ ಕಳಿಸಲು ಹೇಳಿ ನಾನು ಪರಿಶೀಲನೆ ಮಾಡುತ್ತೇನೆ. ನಾನು ರಜೆಯಲ್ಲಿ ಇದ್ದೀನಿ ನಾಳೆ ಚೆಕ್ ಮಾಡುತ್ತೇನೆ. ಟೆಕ್ನಿಕಲ್ ಸಮಸ್ಯೆಯಿಂದ ಆಗಿರಬಹುದು, ತಪಾಸಣೆ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ; ನಾಗಸಂದ್ರ ಟು ಮಾದಾವರ ಮೆಟ್ರೋ ಟ್ರಯಲ್ ರನ್ ಆರಂಭ
ಪ್ರತಿ ತಿಂಗಳು ನೂರೋ ಇನ್ನೂರೋ ವಿದ್ಯುತ್ ಬಿಲ್ ಬರುತ್ತಿದ್ದ ಮನೆಗೆ, ಏಕಾಏಕಿ ಹನ್ನೆರಡು ಲಕ್ಷ ರೂ. ವಿದ್ಯುತ್ ಬಿಲ್ ಬಂದರೆ ಆ ಮನೆ ಮಾಲೀಕನ ಪರಿಸ್ಥಿತಿ ಏನಾಗಬೇಡ ಹೇಳಿ, ಕೂಡಲೇ ಬೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.