AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ ವಿರುದ್ಧ ಮತ್ತೆ ತೊಡೆ ತಟ್ಟಿದ ಬಿಜೆಪಿ: ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ

ಕಾಂಗ್ರೆಸ್ ಪಕ್ಷ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಅಂತ ಹೊರಟಿದೆ. ಸದನದಲ್ಲಿ ಚರ್ಚೆಗೆ ಅನುಮತಿ ಕೊಡದೆ ಪಲಾಯನ ಮಾಡಿದಾಗಲೇ ಜನರಿಗೆ ಅನುಮಾನ ಬಂತು. ಮುಡಾ ತನಿಖೆಗೆ ನೀಡಿದ್ದಾರೆ. ಹಿಂದೆ ಅರ್ಕಾವತಿ, ರೀಡೂ ಮುಚ್ಚಿದಂತೆ ಮುಚ್ಚಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಅವರ ಪರವಾಗಿ ನಿಂತಿದೆಯಂತೆ. ಇದನ್ನು ಖಂಡಿಸಿ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡುವುದಾಗಿ ಆರ್​ ಅಶೋಕ್ ಹೇಳಿದ್ದಾರೆ.

ಕಾಂಗ್ರೆಸ್​ ವಿರುದ್ಧ ಮತ್ತೆ ತೊಡೆ ತಟ್ಟಿದ ಬಿಜೆಪಿ: ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ
ಕಾಂಗ್ರೆಸ್​ ವಿರುದ್ಧ ಮತ್ತೆ ತೊಡೆ ತಟ್ಟಿದ ಬಿಜೆಪಿ: ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ
Sunil MH
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 18, 2024 | 3:42 PM

Share

ಬೆಂಗಳೂರು, ಆಗಸ್ಟ್​ 18: ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ತನಿಖೆಗೆ ಆದೇಶ ನೀಡಿದ್ದು, ಕಾಂಗ್ರೆಸ್ ಪಾಳಯದಲ್ಲಿ ತಳಮಳ ಸೃಷ್ಟಿಯಾಗಿದೆ. ಆದರೂ ಜಗ್ಗದ ಕಾಂಗ್ರೆಸ್​ ಪಡೆ ಕಾನೂನು ಸಮರ ಸಾರಿದೆ. ಜೊತೆಗೆ ನಾಳೆ ಕರ್ನಾಟಕದಾದ್ಯಂತ ಪ್ರತಿಭಟನೆಗೆ ಮುಂದಾಗಿದೆ. ಇತ್ತ ಬಿಜೆಪಿ ಕೂಡ ಪ್ರತಿಭಟನೆಗೆ ಮುಂದಾಗಿದ್ದು, ಇದನ್ನ ಖಂಡಿಸಿ ಸೋಮವಾರ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashoka) ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ಎಂಪಿಗಳು ಪ್ರತಿಭಟನೆಗೆ ಆಹ್ವಾನಿಸಿದ್ದೇನೆ. ಜೆಡಿಎಸ್‌ ಶಾಸಕರೂ ಕೂಡ ಬರುತ್ತಾರೆ. ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರ ಜೊತೆಯೂ ಚರ್ಚೆ ಮಾಡಿದ್ದೇನೆ. ಸಿದ್ದರಾಮಯ್ಯ ಒಂದು ಕ್ಷಣವೂ ನೀವು ಸಿಎಂ ಆಗಿ ಮುಂದುವರೆಯಲು ನೈತಿಕತೆ ಇಲ್ಲ. ನೀವು ಅಧಿಕಾರದಲ್ಲಿದ್ದರೆ ಸತ್ಯಾಸತ್ಯತೆ ಹೊರಬರಲ್ಲ. ಹಾಗಾಗಿ ನೀವು ಕೂಡಲೇ ರಾಜೀನಾಮೆ ಕೊಡಿ ಎನ್ನುವುದು ನಮ್ಮ ಆಗ್ರಹ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟೀಕಿಸುವ ಭರದಲ್ಲಿ ರಾಜ್ಯಪಾಲರ ವಿರುದ್ಧ ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಶಾಸಕ

ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ 15 ತಿಂಗಳಿಂದ ಆಡಳಿತ ಮಾಡುತ್ತಿದೆ. ಕಾಂಗ್ರೆಸ್ ನಡಿಗೆ, ಭ್ರಷ್ಟಾಚಾರದ ಕಡೆಗೆ ಈ ಘೋಷಣೆಯನ್ನ ರಾಜ್ಯದ ಜನ ಮಾತಾಡಲು ಶುರು ಮಾಡಿದ್ದಾರೆ. ಗ್ಯಾರಂಟಿ ಕೊಡುತ್ತಾರೆ, ಭ್ರಷ್ಟಾಚಾರ ಮುಕ್ತ ಆಡಳಿತದ ಗ್ಯಾರಂಟಿ ಅಂತ ನಂಬಿದ್ದರು. ದಲಿತರ ಸಾವಿನ ಗ್ಯಾರಂಟಿ ಆಗಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಭ್ರಷ್ಟಾಚಾರದ ಜನಕ,​ ಭ್ರಷ್ಟರಿಗೆ ರಕ್ಷಣೆ ನೀಡುವ ಪಕ್ಷ ಕಾಂಗ್ರೆಸ್: ಪ್ರಹ್ಲಾದ್​ ಜೋಶಿ

ಸಿದ್ದರಾಮಯ್ಯ ನಾನು ಕ್ಲೀನ್, ಕ್ಲೀನ್ ಅಂತಾರೆ. ರೀಡೂ, ಹ್ಯೂಬ್ಲೋಟ್ ವಾಚ್ ಎಲ್ಲಾ ಸೇರಿಸಿ ಕಳೆದ ಬಾರಿ ಸಿಎಂ‌ ಆಗಿದ್ದಾಗ 65 ಕೇಸ್ ಬಿದ್ದಿತ್ತು. ಅದನ್ನ ಎಸಿಬಿಗೆ ಕೊಟ್ಟು ಕ್ಲೀನ್ ಮಾಡಿಕೊಂಡರು. ಇವರ ವಿರುದ್ಧ ಎನ್.ಆರ್ ರಮೇಶ್ ಅವರು ಅನೇಕ‌ ದೂರು ಸಲ್ಲಿಸಿದ್ದರು. ಕ್ಲೀನ್ ಆಗಿದ್ದರೆ ಯಾವುದೇ ಆರೋಪ ಇಲ್ಲದೆ ಹೊರಗೆ ಬಂದಿದ್ದರೆ ಕ್ಲೀನ್ ಅಂತ ಹೇಳಬಹುದಿತ್ತು ಎಂದಿದ್ದಾರೆ.

ಇದೇ ಕಾಂಗ್ರೆಸ್​, ಬಿಜೆಪಿ ಹೈಕಮಾಂಡ್ ನಡುವೆ ಇರುವ ವ್ಯತ್ಯಾಸ

ಕಾಂಗ್ರೆಸ್ ಪಕ್ಷ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಅಂತ ಹೊರಟಿದೆ. ಸದನದಲ್ಲಿ ಚರ್ಚೆಗೆ ಅನುಮತಿ ಕೊಡದೆ ಪಲಾಯನ ಮಾಡಿದಾಗಲೇ ಜನರಿಗೆ ಅನುಮಾನ ಬಂತು. ಮುಡಾ ತನಿಖೆಗೆ ನೀಡಿದ್ದಾರೆ. ಹಿಂದೆ ಅರ್ಕಾವತಿ, ರೀಡೂ ಮುಚ್ಚಿದಂತೆ ಮುಚ್ಚಿಕೊಳ್ಳಲು ಕಾಂಗ್ರೆಸ್ ಇಡೀ ಹೈಕಮಾಂಡ್ ಅವರ ಪರವಾಗಿ ನಿಂತಿದೆಯಂತೆ. ಇದೇ ಬಿಜೆಪಿ‌ ಹೈಕಮಾಂಡ್ ಯಡಿಯೂರಪ್ಪ ಅವರ ಮೇಲೆ ಆರೋಪ ಮಾಡಿದಾಗ ರಾಜೀನಾಮೆ ಕೊಡಿ ಎಂದು ಹೇಳಿತ್ತು. ಇದೇ ಅವರ ಹೈಕಮಾಂಡ್ ನಮ್ಮ ಹೈಕಮಾಂಡ್ ನಡುವೆ ಇರುವ ವ್ಯತ್ಯಾಸ. ಭ್ರಷ್ಟಾಚಾರಕ್ಕೆ ನಮ್ಮ ಬೆಂಬಲ ಇದೆ ಅಂತ‌ ಕಾಂಗ್ರೆಸ್ ಹೈಕಮಾಂಡ್ ನಿಂತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.