
ಚಿಕ್ಕಬಳ್ಳಾಪುರ, (ಅಕ್ಟೋಬರ್ 06): ಚಿಕ್ಕಬಳ್ಳಾಪುರ ಕಾಂಗ್ರೆಸ್ನಲ್ಲಿ ಶಾಸಕ ಕಿತ್ತಾಟ ತಾರಕಕ್ಕೇರಿದೆ. ಶಾಸಕರಾದ ಪ್ರದೀಪ್ ಈಶ್ವರ್ ಹಾಗೂ ಎಂ.ಸಿ. ಸುಧಾಕರ್ ನಡುವಿನ ಆರೋಪ ಪ್ರತ್ಯಾರೋಪಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಿನ್ನೆ ಅಷ್ಟೇ ಸಮಾಜಿಕ ಜಾಲತಾಣಗಳ ಮೂಲಕ ಸುಧಾಕರ್ಗೆ ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ಇದೀಗ ಸುಧಾಕರ್ ಬೆಂಬಲಿಗರು ಪ್ರದೀಪ್ ಈಶ್ವರ್ ವಿರುದ್ಧ ಮುಗಬಿದ್ದಿದ್ದು, ಪ್ರದೀಪ್ ಈಶ್ವರ್ ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಪ್ರದೀಪ್ ಈಶ್ವರ್ ವಿರುದ್ದ ಪೊಲೀಸರು ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಚಿಂತಾಮಣಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಮುಂದಿನ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್‌ಗೆ ಟಿಕೆಟ್ ನೀಡಬಾರದು. ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಜಾತಿ ಸಂಘರ್ಷ ಇಲ್ಲ. ಸವರ್ಣೀಯರು, ದಲಿತರು, ಅಲ್ಪಸಂಖ್ಯಾತರು ಸಾಮರಸ್ಯದಿಂದ ಇದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಉಂಡ ಮನೆಗೆ ದ್ರೋಹ ಬಗೆಯುತ್ತಿದ್ದಾರೆ. ಪ್ರದೀಪ್ ಈಶ್ವರ್ ಶಿಕ್ಷಣ ಸಂಸ್ಥೆಯನ್ನು ಕಟ್ಟುವುದರಿಂದ ಹಿಡಿದು ಅವರು ಶಾಸಕರು ಆಗುವವರೆಗೂ ಡಾ.ಎಂ.ಸಿ.ಸುಧಾಕರ್ ಸಹಾಯವಿದೆ. ಪ್ರದೀಪ್ ಈಶ್ವರ್ ವಿರುದ್ಧ ಪೊಲೀಸರು ಕೇಸ್ ದಾಖಲಿಸುವಂತೆ ಆಗ್ರಹಿಸಿದ್ದಾರೆ.
ದೊಣ್ಣೆ ನಾಯಕನಿಗೆ ಹೇಳಲು ಬಯಸುತ್ತೇನೆ, ಕೆ.ಎಚ್. ಮುನಿಯಪ್ಪನವರಷ್ಟು ಸೌಮ್ಯ ಸ್ವಭಾವದ ವ್ಯಕ್ತಿ ನಾನಲ್ಲ. ಒಂದು ಕಲ್ಲು ಬಿದ್ದರೆ ಹತ್ತು ಕಲ್ಲು ಬಿಸಾಕಿ ಮಾತುಕತೆಗೆ ಬರುವ ವ್ಯಕ್ತಿತ್ವ ನನ್ನದು. ನಿಮ್ಮ ತಾಕತ್ತು ಎಷ್ಟಿದೆಯೋ ಅಷ್ಟು ಬಿಸಾಕಿ. ನಾನು ಹತ್ತರಷ್ಟು ತಿರುಗಿಸಿ ಕೊಡುವುದು ನನಗೆ ಗೊತ್ತಿದೆ. ದೊಣ್ಣೆ ನಾಯಕನಿಗೆ ಮತ್ತೊಮ್ಮೆ ಹೇಳುತ್ತಿದ್ದೇನೆ ನಿಮ್ಮ ವಿರುದ್ಧ ಸಮರ ನಿರಂತರ ಎಂದು ಹೆಸರು ಹೇಳದೆ ಎಂ.ಸಿ ಸುಧಾಕರ್ ಗೆ ಎಚ್ಚರಿಕೆ ನೀಡಿದ್ದರು.
ಅಲ್ಲದೇ ಮಾಜಿ ಸಚಿವ, ಹಾಲಿ ಚಿಂತಾಮಣಿ ಶಾಸಕ ಸುಧಾಕರ್ ವಿರುದ್ಧ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಹಿರಂಗವಾಗಿ ಸಮರ ಸಾರಿದ್ದು, ಆಸ್ತಿ ಬಗ್ಗೆ ಸ್ಫೋಟಕ ಮಾಹಿತಿ ಹೊರಗೆ ಹಾಕ್ತೀನಿ ಅಂತಾ ನಿನ್ನೆ ಟ್ವೀಟ್ ಮಾಡಿದ್ದು, ಕಿತ್ತಾಟ ಇನ್ನಷ್ಟು ಜೋರಾಗಲು ಕಾರಣವಾಗಿದೆ.
ಈ ಕಿತ್ತಾಟ ಕಾಂಗ್ರೆಸ್ಗೆ ಇರುಸುಮುರುಸು ಉಂಟು ಮಾಡಿದ್ದು, ಈ ಇಬ್ಬರ ನಾಯಕರ ನಡುವಿನ ಗಲಾಟೆ ವಿಚಾರ ಸಿಎಂ ಡಿಕೆ ಶಿವಕುಮಾರ್ ಹಾಗೂ ಬಿಕೆ ಹರಿಪ್ರಸಾದ್ ಗಮನಕ್ಕೂ ಇದೆ. ಯಾವುದೇ ಸಂದರ್ಭದಲ್ಲಿ ಇಬ್ಬರನ್ನು ಕರೆದು ಮಾತುಕತೆ ನಡೆಸುವ ಸಾಧ್ಯತೆಗಳಿವೆ.