AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Diwali Special Train: ಮುಜಫರ್‌ಪುರ – ಹುಬ್ಬಳ್ಳಿ, ದಾನಾಪುರ – ಯಶವಂತಪುರ ನಡುವೆ ವಿಶೇಷ ರೈಲು, ಇಲ್ಲಿದೆ ವೇಳಾಪಟ್ಟಿ

ದೀಪಾವಳಿ ಮತ್ತು ಛತ್ ಹಬ್ಬಗಳ ಸಂದರ್ಭ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಭಾಯಿಸಲು ಪೂರ್ವ ಕೇಂದ್ರ ರೈಲ್ವೆಯು ಮುಜಫರ್‌ಪುರ–ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ದಾನಾಪುರ–ಯಶವಂತಪುರ ನಡುವೆ ವೀಕ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಘೋಷಿಸಿದೆ. ಈ ರೈಲುಗಳು ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಸಂಚರಿಸಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ವೇಳಾಪಟ್ಟಿ, ನಿಲುಗಡೆ ಮತ್ತು ಬೋಗಿಗಳ ವಿವರ ಇಲ್ಲಿದೆ.

Diwali Special Train: ಮುಜಫರ್‌ಪುರ - ಹುಬ್ಬಳ್ಳಿ, ದಾನಾಪುರ – ಯಶವಂತಪುರ ನಡುವೆ ವಿಶೇಷ ರೈಲು, ಇಲ್ಲಿದೆ ವೇಳಾಪಟ್ಟಿ
ಮುಜಫರ್‌ಪುರ - ಹುಬ್ಬಳ್ಳಿ, ದಾನಾಪುರ – ಯಶವಂತಪುರ ನಡುವೆ ವಿಶೇಷ ರೈಲು (ಸಾಂದರ್ಭಿಕ ಚಿತ್ರ)
ಸಂಜಯ್ಯಾ ಚಿಕ್ಕಮಠ
| Updated By: Ganapathi Sharma|

Updated on:Oct 07, 2025 | 11:34 AM

Share

ಹುಬ್ಬಳ್ಳಿ, ಅಕ್ಟೋಬರ್ 7: ಮುಂಬರುವ ದೀಪಾವಳಿ (Deepavali) ಮತ್ತು ಛತ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ಪೂರ್ವ ಕೇಂದ್ರ ರೈಲ್ವೆಯು (East Central Railway) ಮುಜಫರ್‌ಪುರ–ಎಸ್‌ಎಸ್‌ಎಸ್ ಹುಬ್ಬಳ್ಳಿ ಹಾಗೂ ದಾನಾಪುರ–ಯಶವಂತಪುರ ನಡುವೆ ವೀಕ್ಲಿ ವಿಶೇಷ ಎಕ್ಸ್​​ಪ್ರೆಸ್ (Weekly Special Trains) ರೈಲುಗಳನ್ನು ಘೋಷಿಸಿದೆ. ಈ ರೈಲುಗಳ ವಿವರಗಳು ಹೀಗಿವೆ. ರೈಲು ಸಂಖ್ಯೆ 05543/05544 ಮುಜಫರ್‌ಪುರ–ಎಸ್‌ಎಸ್‌ಎಸ್ ಹುಬ್ಬಳ್ಳಿ–ಮುಜಫರ್‌ಪುರ ವಿಶೇಷ ರೈಲು ಒಟ್ಟು 6 ಟ್ರಿಪ್ ಸಂಚಾರ ಮಾಡಲಿದೆ.

ಮುಜಫರ್‌ಪುರ–ಎಸ್‌ಎಸ್‌ಎಸ್ ಹುಬ್ಬಳ್ಳಿ–ಮುಜಫರ್‌ಪುರ ವಿಶೇಷ ರೈಲು ವೇಳಾಪಟ್ಟಿ

ರೈಲು ಸಂಖ್ಯೆ 05543 ಮುಜಫರ್‌ಪುರ–ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್​ಪ್ರೆಸ್ ರೈಲು ಅಕ್ಟೋಬರ್ 10 ರಿಂದ ನವೆಂಬರ್ 14 ರವರೆಗೆ ಪ್ರತಿ ಶುಕ್ರವಾರ 12:45 ಗಂಟೆಗೆ ಮುಜಫರ್‌ಪುರದಿಂದ ಹೊರಡುತ್ತದೆ ಮತ್ತು ಸೋಮವಾರ ಮಧ್ಯಾಹ್ನ 12:20 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿ ತಲುಪುತ್ತದೆ. ರಿಟರ್ನ್​ ಟ್ರಿಪ್​​ನಲ್ಲಿ ಈ ರೈಲು (05544) ಅಕ್ಟೋಬರ್ 14 ರಿಂದ ನವೆಂಬರ್ 18 ರವರೆಗೆ ಪ್ರತಿ ಮಂಗಳವಾರ ಬೆಳಿಗ್ಗೆ 09:00 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಡುತ್ತದೆ ಮತ್ತು ಶುಕ್ರವಾರ ಬೆಳಿಗ್ಗೆ 05:00 ಗಂಟೆಗೆ ಮುಜಫರ್‌ಪುರ ತಲುಪುತ್ತದೆ. ಈ ರೈಲು ಒಟ್ಟು ಆರು ಟ್ರಿಪ್‌ಗಳು ಸಂಚರಿಸಲಿದೆ.

ಹುಬ್ಬಳ್ಳಿ–ಮುಜಫರ್‌ಪುರ ವಿಶೇಷ ರೈಲಿಗೆ ಎಲ್ಲೆಲ್ಲಿ ನಿಲುಗಡೆ?

ಹುಬ್ಬಳ್ಳಿ–ಮುಜಫರ್‌ಪುರ ವಿಶೇಷ ರೈಲು ಮೋತಿಪುರ, ಚಕಿಯಾ, ಬಾಪುಧಾಮ್ ಮೋತಿಹಾರಿ, ಸಗೌಲಿ ಜಂ., ಬೆತ್ತಿಯಾ, ನರ್ಕಟಿಯಾಗಂಜ್ ಜಂ., ಬಗಹಾ, ಕಪ್ತಾನಗಂಜ್ ಜಂ., ಗೋರಖ್‌ಪುರ ಜಂ., ಗೋಂಡಾ ಜಂ., ಐಶ್‌ಬಾಗ್, ಕಾನ್ಪುರ ಸೆಂಟ್ರಲ್, ಓರೈ, ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ, ಬೀನಾ ಜಂ., ಭೋಪಾಲ್ ಜಂ., ಇಟಾರ್ಸಿ ಜಂ., ಆಮ್ಲಾ ಜಂ., ನಾಗ್ಪುರ, ಚಂದ್ರಪುರ, ಬಲ್ಲಾರ್ಷಾ, ರಾಮಗುಂಡಂ, ಕಾಜೀಪೇಟ್ ಜಂ., ಕಾಚೇಗುಡ, ಮಹೆಬೂಬ್‌ನಗರ, ಧೋಣ, ಧರ್ಮಾವರಂ ಜಂ., ಹಿಂದೂಪುರ, ಯಲಹಂಕ ಜಂ., ತುಮಕೂರು, ಅರಸೀಕೆರೆ ಜಂ., ಬೀರೂರು ಜಂ., ಚಿಕ್ಕಜಾಜೂರು ಜಂ., ದಾವಣಗೆರೆ, ರಾಣೇಬೆನ್ನೂರು, ಮತ್ತು ಎಸ್‌ಎಂಎಂ ಹಾವೇರಿ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆ ಹೊಂದಿರಲಿದೆ.

ಹುಬ್ಬಳ್ಳಿ–ಮುಜಫರ್‌ಪುರ ವಿಶೇಷ ರೈಲು ಬೋಗಿಗಳ ವಿವರ

ಈ ರೈಲು 22 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ 2 ಎಸಿ 2-ಶ್ರೇಣಿ, 2 ಎಸಿ 3-ಶ್ರೇಣಿ, 12 ಸ್ಲೀಪರ್ ವರ್ಗ, 4 ಸಾಮಾನ್ಯ ದ್ವಿತೀಯ ದರ್ಜೆ, ಮತ್ತು 2 ದ್ವಿತೀಯ ದರ್ಜೆ ಕಮ್ ಲಗೇಜ್-ಕಮ್-ಬ್ರೇಕ್ ವ್ಯಾನ್ (ದಿವ್ಯಾಂಗಜನ ಕೋಚ್ ಸಹಿತ) ಹೊಂದಿರಲಿದೆ.

ದಾನಾಪುರ–ಯಶವಂತಪುರ–ದಾನಾಪುರ ವಿಶೇಷ ರೈಲು ವೇಳಾಪಟ್ಟಿ

ರೈಲು ಸಂಖ್ಯೆ 03261 ದಾನಾಪುರ–ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ 11 ರಿಂದ ಡಿಸೆಂಬರ್ 27 ರವರೆಗೆ ಪ್ರತಿ ಶನಿವಾರ ಬೆಳಿಗ್ಗೆ 10:00 ಗಂಟೆಗೆ ದಾನಾಪುರದಿಂದ ಹೊರಡುತ್ತದೆ ಮತ್ತು ಮಂಗಳವಾರ ರಾತ್ರಿ 09:30 ಗಂಟೆಗೆ ಯಶವಂತಪುರ ತಲುಪುತ್ತದೆ. ರಿಟರ್ನ್ ಟ್ರಿಪ್​​ನಲ್ಲಿ ಈ ರೈಲು (03262) ಅಕ್ಟೋಬರ್ 14 ರಿಂದ ಡಿಸೆಂಬರ್ 30 ರವರೆಗೆ ಪ್ರತಿ ಮಂಗಳವಾರ ಬೆಳಿಗ್ಗೆ 07:00 ಗಂಟೆಗೆ ಯಶವಂತಪುರದಿಂದ ಹೊರಡುತ್ತದೆ ಮತ್ತು ಗುರುವಾರ ಮಧ್ಯಾಹ್ನ 12:00 ಗಂಟೆಗೆ ದಾನಾಪುರ ತಲುಪುತ್ತದೆ. ಈ ರೈಲು ಪ್ರತಿ ದಿಕ್ಕಿನಲ್ಲಿಯೂ ಒಟ್ಟು ಹನ್ನೆರಡು ಟ್ರಿಪ್‌ಗಳ ಸಂಚಾರ ಮಾಡಲಿವೆ.

ದಾನಾಪುರ–ಯಶವಂತಪುರ ವಿಶೇಷ ರೈಲು ನಿಲುಗಡೆಗಳು

ದಾನಾಪುರ–ಯಶವಂತಪುರ ವಿಶೇಷ ರೈಲುಅರಾ ಜಂ., ಬಕ್ಸರ್, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂ., ಪ್ರಯಾಗ್‌ರಾಜ್ ಛೆವೋಕಿ ಜಂ., ಮಾಣಿಕ್‌ಪುರ ಜಂ., ಸತ್ನಾ, ಕಟ್ನಿ ಜಂ., ಜಬಲ್‌ಪುರ, ನರಸಿಂಗ್‌ಪುರ, ಪಿಪರಿಯಾ, ಇಟಾರ್ಸಿ ಜಂ., ಆಮ್ಲಾ ಜಂ., ನಾಗ್ಪುರ, ಚಂದ್ರಪುರ, ಬಲ್ಲಾರ್ಷಾ, ರಾಮಗುಂಡಂ, ಕಾಜೀಪೇಟ್ ಜಂ., ಕಾಚೇಗುಡ, ಮಹೆಬೂಬ್‌ನಗರ, ಧೋಣ, ಧರ್ಮಾವರಂ ಜಂ., ಹಿಂದೂಪುರ, ಮತ್ತು ಯಲಹಂಕ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆ ಹೊಂದಿರಲಿದೆ.

ದಾನಾಪುರ–ಯಶವಂತಪುರ ವಿಶೇಷ ರೈಲು ಬೋಗಿಗಳ ವಿವರ

ಈ ರೈಲು ಸಹ 20 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ 2 ಎಸಿ 2-ಶ್ರೇಣಿ, 2 ಎಸಿ 3-ಶ್ರೇಣಿ, 9 ಸ್ಲೀಪರ್ ವರ್ಗ, 5 ಸಾಮಾನ್ಯ ದ್ವಿತೀಯ ದರ್ಜೆ, ಮತ್ತು 2 ದ್ವಿತೀಯ ದರ್ಜೆ ಕಮ್ ಲಗೇಜ್-ಕಮ್-ಬ್ರೇಕ್ ವ್ಯಾನ್ (ದಿವ್ಯಾಂಗಜನ ಕೋಚ್ ಸಹಿತ) ಇರಲಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:16 am, Tue, 7 October 25