AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್​ನಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಕುತ್ತು: ನೀಲಕಂಠೇಶ್ವರ ಸ್ವಾಮೀಜಿ ಭವಿಷ್ಯ

ವೀರಶೈವ ಲಿಂಗಾಯತ ಮಠಾಧೀಶರ ಸೂಚನೆ ಮಧ್ಯೆಯೂ ಬಸವ ಸಂಸ್ಕೃತಿ ಅಭಿಯಾನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾದ ಹಿನ್ನೆಲೆ ಹೇಳಿಕೆ ನೀಡಿರುವ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ಅಮರೇಶ್ವರ ಮಠದ ನೀಲಕಂಠೇಶ್ವರ ಸ್ವಾಮೀಜಿ, 'ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದರೆ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ. ಎಂದಿದ್ದಾರೆ.

ನವೆಂಬರ್​ನಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಕುತ್ತು:  ನೀಲಕಂಠೇಶ್ವರ ಸ್ವಾಮೀಜಿ ಭವಿಷ್ಯ
ಸಿಎಂ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಯಿದೆ ಎಂದ ನೀಲಕಂಠೇಶ್ವರ ಸ್ವಾಮೀಜಿ
ಭಾವನಾ ಹೆಗಡೆ
|

Updated on:Oct 07, 2025 | 11:18 AM

Share

ಬೆಂಗಳೂರು, ಅಕ್ಟೋಬರ್ 7:  ‘ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದರೆ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ. ಕೆಲವು ಸಚಿವರು ಆ ಕಡೆ, ಕೆಲವು ಸಚಿವರು ಈ ಕಡೆ ಇದ್ದಾರೆ. ನವೆಂಬರ್​ನಲ್ಲಿ ಇದರಿಂದಲೇ ಸಿಎಂ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ’ ಎಂದು ಬಸವ ಸಂಸ್ಕೃತಿ ಅಭಿಯಾನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾದ ಹಿನ್ನೆಲೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ಅಮರೇಶ್ವರ ಮಠದ ನೀಲಕಂಠೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಬಸವ ಸಂಸ್ಕೃತಿ ಅಭಿಯನದಲ್ಲಿ ಸಿಎಂ ಭಾಗಿ ಹಿನ್ನೆಲೆ ಸ್ವಾಮೀಜಿಗಳ ಬೇಸರ

ವೀರಶೈವ ಲಿಂಗಾಯತ ಮಠಾಧೀಶರ ಸೂಚನೆ ಮಧ್ಯೆಯೂ ಬಸವ ಸಂಸ್ಕೃತಿ ಅಭಿಯಾನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾದ ಹಿನ್ನೆಲೆ ಹೇಳಿಕೆ ನೀಡಿರುವ ಸ್ವಾಮೀಜಿ, ‘ಸಿಎಂ ಪ್ರತ್ಯೇಕ ಲಿಂಗಾಯತ ಧರ್ಮ ಸಮಾರಂಭಕ್ಕೆ ಹೋಗಿರುವುದು ಒಂದು ಕಡೆ ಸಂತೋಷ , ಒಂದು ಕಡೆಗೆ ದುಃಖ ಆಗಿದೆ. ಬಸವಣ್ಣನ ಹೆಸರು ನಮ್ಮ ಮೆಟ್ರೋಗೆ ಇಡುವುದು, ಬಸವ ಕಲ್ಯಾಣದಲ್ಲಿ ವಚನ ವಿವಿ ಸ್ಥಾಪನೆ ಸೇರಿ ಕೆಲವು ವಿಷಯ ಸ್ವಾಗತಾರ್ಹವಾಗಿದೆ.

ಈ ಹಿಂದೆ ಸಿದ್ದರಾಮಯ್ಯನವರು ಒಂದುಗೂಡಿದ ಧರ್ಮ ಇಬ್ಬಾಗ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದರು. ಈಗ ಜೇನು ಗೂಡಿಗೆ ಕೈ ಹಾಕಿ ಜೇನಿನಿಂದ ಕಚ್ಚಿಸಿಕೊಳ್ಳುವುದು ಬೇಡ ಎಂದು ಹೇಳಿದ್ದೆವು. ಆದರೂ ಆ ಸಭೆ (ಪ್ರತ್ಯೇಕ ಲಿಂಗಾಯತರ ಸ್ವಾಮೀಜಿಗಳ ಸಭೆ) ಗೆ ಹೋಗಿ ಪ್ರತ್ಯೇಕ ಧರ್ಮದ ಬಗ್ಗೆ ಹೇಳಿಕೆ ನೀಡದೇ ಜಾಣ ನಡೆ ಅನುಸರಿಸಿದ್ದಾರೆ. ಆದರೂ ಸಹ ಆ ಸಭೆಗೆ ಹೋಗಿದ್ದರಿಂದ ಸರ್ಕಾರಕ್ಕೆ ಸ್ವಲ್ಫ ಗೊಂದಲ ಉಂಟಾಗಿದೆ.

ಸ್ವಾಮಿಜಿಗಳ ಹೇಳಿಕೆ ಇಲ್ಲಿದೆ

ಎಲ್ಲರನ್ನು ಒಂದುಗೂಡಿಸುವ ಕೆಲಸ ಮಾಡಿದರೆ ಸಿಎಂ ಸ್ಥಾನ ಶಾಶ್ವತವೆಂದ ಸ್ವಾಮಿಗಳು

ಸರ್ಕಾರದ ಸಚಿವರು ಕೆಲವರು ಆ ಕಡೆ, ಕೆಲವರು ಈ ಕಡೆ ಮಾತನಾಡುವುದು ಕೇಳಿ ನವೆಂಬರ್​ನಲ್ಲಿ ಸಿದ್ದರಾಮಯ್ಯನವರಿಗೆ ಕುತ್ತು ಬರುತ್ತದೆಯೇನೋ ಎಂದು ನಮಗೆ ಎನಿಸುತ್ತಿದೆ. ಮೊನ್ನೆಯೇ ಸಿದ್ದರಾಮಯ್ಯನವರಿಗೆ ಆ ಸಭೆಗೆ ಹೋದರೆ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು ಅಂತ ಹೇಳಿದ್ದೆವು. ಸಿದ್ದರಾಮಯ್ಯನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.ವೀರಶೈವ ಲಿಂಗಾಯತರೆಲ್ಲಾ ಒಂದು ಎನ್ನುವುದನ್ನು ಹೇಳುತ್ತಾ ಬಂದಿದ್ದೇವೆ. ಸಿದ್ದರಾಮಯ್ಯನವರು ಇಬ್ಭಾಗ ಮಾಡುವುದು ಬಿಟ್ಟು ಒಂದು ಮಾಡಿದ್ರೆ ಒಳ್ಳೆಯದಾಗುತ್ತದೆ.

ಇದನ್ನೂ ಓದಿ ಮತ್ತೆ ಮುನ್ನೆಲೆಗೆ ಬಂದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು: ‘ಕೈ’ ಸಚಿವರಲ್ಲೇ ದ್ವಂದ್ವ ನಿಲುವು

ನಾವೆಲ್ಲಾ ಹಿಂದೂ ಧರ್ಮದ ಆಚರಣೆಯಲ್ಲಿರುವುದರಿಂದ ಒಟ್ಟುಗೂಡಿ ಹೋಗಬೇಕು.ಎರಡೂ ಕಡೆ ಇರುವ ಸಚಿವರೆಲ್ಲಾ ಒಂದೇ ಪಕ್ಷದವರೇ ಇರುವುದರಿಂದ ನೀವೆಲ್ಲಾ ಒಂದು ಕಡೆ ಕೂತು ನಿರ್ಧಾರ ಮಾಡಿದರೆ ಸಮಾಜಕ್ಕೆ ಒಂದು ಹೆಸರು ಬರಲಿದೆ. ನಿಮ್ಮ ಸಚಿವ ಸ್ಥಾನ, ಸಿಎಂ ಸ್ಥಾನ ಉಳಿಬೇಕಾದರೆ ಒಂದುಗೂಡಿಸುವ ಕೆಲಸ ಮಾಡಬೇಕು.ಮುಖ್ಯವಾಗಿ ಸಿದ್ದರಾಮಯ್ಯನವರಿಗೆ ಹೇಳುವುದಾದರೆ ಧರ್ಮ ಒಡೆಯುವುದು ಬಿಟ್ಟು ಎಲ್ಲರನ್ನು ಒಂದುಗೂಡಿಸುವ ಕೆಲಸ ಮಾಡಿದರೆ ನಿಮ್ಮ ಸ್ಥಾನ ಶಾಶ್ವತವಾಗಿ ಉಳಿಯುತ್ತದೆ ಎಂದಿದ್ದಾರೆ. ಎಂದ ಸ್ವಾಮೀಜಿ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:28 am, Tue, 7 October 25