
ಬೆಂಗಳೂರು, (ಸೆಪ್ಟೆಂಬರ್ 23): ತಮ್ಮ ಕ್ಷೇತ್ರವನ್ನು ಬರಗಾಲ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಯಶವಂತರಾಯಗೌಡ ಪಾಟೀಲ್ ಅವರು ಇಂದು (ಸೆಪ್ಟೆಂಬರ್ 23) ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಯಶವಂತರಾಯಗೌಡ ಪಾಟೀಲ್ ಸದನದಲ್ಲಿ ಕೋಲಾಹಲ ಎಬ್ಬಿಸಿದೆ. ಹೌದು…ವಿಪಕ್ಷ ಬಿಜೆಪಿ ಇದನ್ನೇ ಅಸ್ತ್ರ ಮಾಡಿಕೊಂಡು ಸದನದಲ್ಲಿ ಯಶವಂತರಾಯಗೌಡ ರಾಜೀನಾಮೆ ವಿಚಾರವನ್ನು ಪ್ರಸ್ತಾಪಿಸಿ ಈ ಬಗ್ಗೆ ಸ್ಪೀಕರ್ ಸ್ಪಷ್ಟೀಕರಣ ನೀಡುವಂತೆ ಎಂದು ಆಗ್ರಹಿಸಿದೆ.
ಸದನದಲ್ಲಿ ಯಶವಂತರಾಯಗೌಡ ರಾಜೀನಾಮೆ ವಿಚಾರವನ್ನು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಪ್ರಸ್ತಾಪಿಸಿದ್ದು, ಶಾಸಕರ ರಾಜೀನಾಮೆ ವಿಚಾರದ ಬಗ್ಗೆ ಸ್ಪೀಕರ್ ಸ್ಪಷ್ಟೀಕರಣ ನೀಡಲಿ ಎಂದು ಒತ್ತಾಯಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್ ವಿರುದ್ಧ ಆಕ್ರೋಶಗೊಂಡಿದ್ದು, ಪತ್ರ ಬರೆದಿರುವುದು ಹಾಲಿ ಸ್ಪೀಕರ್ ಗೆ, ಮಾಜಿ ಸ್ಪೀಕರ್ ಗೆ ಅಲ್ಲ. ನೀವು ಯಾಕೆ ಎದ್ದು ನಿಲ್ಲುತ್ತೀರಾ? ಎಂದರು. ಆದರೂ ಖಾದರ್ ಸುಮ್ಮನಿರದೇ ಅವರು ನಿಮಗೆ ಪತ್ರ ಬರೆದಿದ್ದಾರಾ ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ವಿಪಕ್ಷ ನಾಯಕ ಆರ್ ಅಶೋಕ್, ನಾನು ಈ ಸದನದ ವಿಪಕ್ಷ ನಾಯಕ, ಶಾಸಕರ ಬಗ್ಗೆ ಮಾತಾಡ್ತಿದ್ದೇನೆ ಎಂದು ತಿರುಗೇಟು ನೀಡಿದರು.
ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಪತ್ರ ನಮ್ಮ ಕೈಯಲ್ಲಿದೆ. ಯಾರಾದರೂ ರಾಜೀನಾಮೆ ಕೊಟ್ಟರೆ ಅಂಗೀಕಾರ ಮಾಡ್ತೇನೆ ಎಂದಿದ್ದರು ಮಂತ್ರಿ ಮಂಡಲ ರಚನೆ ವೇಳೆ ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ರಾಜೀನಾಮೆ ಅಂಗೀಕಾರ ಮಾಡಿದ್ದಾರಾ? ಹಾಗಾದರೆ ಡಿ.ಕೆ.ಶಿವಕುಮಾರ್ ಮಾತಿಗೆ ಮೂರು ಕಾಸಿನ ಬೆಲೆ ಇಲ್ವಾ? ಧಮ್ ಇದ್ದರೆ, ತಾಕತ್ ಇದ್ದರೆ ರಾಜೀನಾಮೆ ಅಂಗೀಕಾರ ಮಾಡಿ ಎಂದು ಸವಾಲು ಹಾಕಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ವಿಪಕ್ಷದವರು ಗಾಬರಿಯಾಗುವುದು ಬೇಡ. ಜನರ ಬದುಕಿಗೋಸ್ಕರ ಕೊಟ್ಟಿರುವ ರಾಜೀನಾಮೆ ಅದು.ಬರಗಾಲದ ಬಗ್ಗೆ ನಮಗೆಲ್ಲ ಪ್ರಧಾನಮಂತ್ರಿ ಎಚ್ಚರಿಕೆ ಕೊಟ್ಟಿದ್ದಾರೆ. ಯಶವಂತರಾಯಗೌಡ ಪಾಟೀಲ್ ಸಂಪರ್ಕಿಸಲು ಪ್ರಯತ್ನಿಸಿದರು. ಗೃಹಸಚಿವರ ಜೊತೆ ಬೇರೆ ಕಾರ್ಯಕ್ರಮದ ಬಗ್ಗೆ ಚರ್ಚೆಯಲ್ಲಿದ್ದೆ. ಯಶವಂತರಾಯಗೌಡ ಪಾಟೀಲ್ ಭಾವನಾತ್ಮಕವಾಗಿ ಹೇಳಿದ್ದಾರೆ. ಅವರ ಕ್ಷೇತ್ರದಲ್ಲಿ ಜನ ಸಾಲಸೋಲ ಮಾಡಿ ಬೆಳೆ ಬೆಳೆದಿದ್ದಾರೆ. ಬರಪೀಡಿತ ಅಂತಾ ಘೋಷಣೆ ಮಾಡಲು ಮಾರ್ಗಸೂಚಿ ಇದೆ. ಏಕಾಏಕಿ ಘೋಷಣೆ ಮಾಡಲು ಪರಮೇಶ್ವರ್ಗೆ ಅವಕಾಶ ಇಲ್ಲ. ಹೆಚ್.ಕೆ.ಪಾಟೀಲ್ ಅವರಂತಹ ಹಿರಿಯ ನಾಯಕರಿಗೇ ಅಷ್ಟು ಒತ್ತಡ. ಯಶವಂತರಾಯಗೌಡ ಪಾಟೀಲ್ಗೂ ಒತ್ತಡ ಇರುವುದು ತಪ್ಪಲ್ಲ.ನನ್ನ ಕ್ಷೇತ್ರದಲ್ಲೂ ಬರ ಇದೆ, ನಾನೇನೂ ಕೇಳಲು ಹೋಗಿಲ್ಲ. ಪಾಟೀಲ್ ನನ್ನ ಬಳಿ ಬಂದಿದ್ದರು, ಸಮಾಧಾನ ಮಾಡಿ ಕಳಿಸಿದ್ದೇನೆ. ಇದು ಬೇರೆ ರೀತಿಯ ರಾಜೀನಾಮೆ ಅಲ್ಲ. ಇದು ಕೆ.ಎಸ್.ಈಶ್ವರಪ್ಪ, ನಾಗೇಂದ್ರ ತರಹದ ರಾಜೀನಾಮೆ ಅಲ್ಲ. ಜನರ ಬದುಕಿಗೋಸ್ಕರ ಕೊಟ್ಟಿರುವ ರಾಜೀನಾಮೆ ಅದು ಎಂದು ಸ್ಪಷ್ಟಪಡಿಸಿದರು.

ಈ ಎಲ್ಲಾ ವಾದ ಪ್ರತಿವಾದ ಮಧ್ಯೆ ಸ್ಪೀಕರ್ ಜಿ.ಎಸ್. ಪಾಟೀಲ್ ಅವರು ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಬಗ್ಗೆ ಮಾತನಾಡಿದ್ದು, ಶಾಸಕರ ರಾಜೀನಾಮೆ ನಿಯಮಾನುಸಾರ ಇಲ್ಲದ ಕಾರಣ ನಾನು ಅಂಗೀಕಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
Published On - 3:03 pm, Wed, 23 September 26