ಆಪರೇಷನ್ ಬಗ್ಗೆ ಕೈಕಟ್ ಬಾಯ್ ಮುಚ್ ಎಂದು ಅನರ್ಹರಿಗೆ ಗದರಿದ ಬಿಜೆಪಿ

|

Updated on: Nov 16, 2019 | 2:46 PM

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಕ್ಕೆ ಪ್ಲಾನ್ ರೂಪಿಸಿದ್ದ ಬಗ್ಗೆ ನಿನ್ನೆಯಷ್ಟೇ ಹೆಚ್​.ವಿಶ್ವನಾಥ್ ಮತ್ತು ರಮೇಶ್ ಜಾರಕಿಹೊಳಿ ಸ್ಫೋಟಕ ಮಾಹಿತಿ ಹೊರಹಾಕಿದ್ದರು. ಒಂದೊಂದಾಗೇ ಆಪರೇಷನ್ ಕಮಲದ ಗುಟ್ಟನ್ನು ಅನರ್ಹ ಶಾಸಕರು ಬಿಚ್ಚಿಡುತ್ತಿದ್ದರು. ಇದೇ ಬೆನ್ನಲ್ಲೇ ಆಪರೇಷನ್ ಕಮಲದ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಅನರ್ಹ ಶಾಸಕರಿಗೆ ಬಿಜೆಪಿ ನಾಯಕರು ಸೂಚನೆ ನೀಡಿದ್ದಾರೆ. ಅನರ್ಹರ ಹೇಳಿಕೆಗಳೇ ಕಾಂಗ್ರೆಸ್​ಗೆ ಅಸ್ತ್ರ: ಆಪರೇಷನ್ ಕಮಲದ ಬಗ್ಗೆ ಅನರ್ಹ ಶಾಸಕರ ಹೇಳಿಕೆಗಳನ್ನೇ ಉಪ ಚುನಾವಣೆಯಲ್ಲಿ ಬಳಸಿಕೊಳ್ಳಲು ಕಾಂಗ್ರೆಸ್‌ ಮುಂದಾಗಿತ್ತು. ಈ ಬಗ್ಗೆ ನಿನ್ನೆ ಮೈಸೂರಿನಲ್ಲಿ […]

ಆಪರೇಷನ್ ಬಗ್ಗೆ ಕೈಕಟ್ ಬಾಯ್ ಮುಚ್ ಎಂದು ಅನರ್ಹರಿಗೆ ಗದರಿದ ಬಿಜೆಪಿ
Follow us on

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಕ್ಕೆ ಪ್ಲಾನ್ ರೂಪಿಸಿದ್ದ ಬಗ್ಗೆ ನಿನ್ನೆಯಷ್ಟೇ ಹೆಚ್​.ವಿಶ್ವನಾಥ್ ಮತ್ತು ರಮೇಶ್ ಜಾರಕಿಹೊಳಿ ಸ್ಫೋಟಕ ಮಾಹಿತಿ ಹೊರಹಾಕಿದ್ದರು. ಒಂದೊಂದಾಗೇ ಆಪರೇಷನ್ ಕಮಲದ ಗುಟ್ಟನ್ನು ಅನರ್ಹ ಶಾಸಕರು ಬಿಚ್ಚಿಡುತ್ತಿದ್ದರು. ಇದೇ ಬೆನ್ನಲ್ಲೇ ಆಪರೇಷನ್ ಕಮಲದ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಅನರ್ಹ ಶಾಸಕರಿಗೆ ಬಿಜೆಪಿ ನಾಯಕರು ಸೂಚನೆ ನೀಡಿದ್ದಾರೆ.

ಅನರ್ಹರ ಹೇಳಿಕೆಗಳೇ ಕಾಂಗ್ರೆಸ್​ಗೆ ಅಸ್ತ್ರ:
ಆಪರೇಷನ್ ಕಮಲದ ಬಗ್ಗೆ ಅನರ್ಹ ಶಾಸಕರ ಹೇಳಿಕೆಗಳನ್ನೇ ಉಪ ಚುನಾವಣೆಯಲ್ಲಿ ಬಳಸಿಕೊಳ್ಳಲು ಕಾಂಗ್ರೆಸ್‌ ಮುಂದಾಗಿತ್ತು. ಈ ಬಗ್ಗೆ ನಿನ್ನೆ ಮೈಸೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸುಳಿವು ನೀಡಿದ್ದರು. ಅನರ್ಹ ಶಾಸಕರು ಆಪರೇಷನ್ ಕಮಲ ಎಂದು ಬಹಿರಂಗವಾಗಿ ಹೇಳಿದ್ದಾರೆ. ಅಲ್ಲದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೆಸರು ಪ್ರಸ್ತಾಪವಾಗುತ್ತಿರುವುದಕ್ಕೂ ಬಿಜೆಪಿಯಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಅಲರ್ಟ್ ಆದ ಬಿಜೆಪಿ ಇನ್ನು ಮುಂದೆ ಆಪರೇಷನ್ ಕಮಲದ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಸಂದೇಶ ರವಾನಿಸಿದೆ.

ಇಷ್ಟು ದಿನ ಆಪರೇಷನ್ ಕಮಲ‌ ನಡೆಸಿಲ್ಲ, ಶಾಸಕರ ರಾಜೀನಾಮೆಗೂ ತಮಗೂ ಸಂಬಂಧ ಇಲ್ಲ ಎಂದೇ ಬಿಜೆಪಿ ಪ್ರತಿಪಾದಿಸುತ್ತಾ ಬಂದಿತ್ತು. ಇದೀಗ ಅನರ್ಹ ಶಾಸಕರ ಹೇಳಿಕೆಯಿಂದ ಬಿಜೆಪಿ‌ ಮುಜುಗರ ಅನುಭವಿಸುವಂತಾಗಿದೆ.

Published On - 2:43 pm, Sat, 16 November 19