ಅರುಣ್ ಈ ಕ್ರಿಮಿನಲ್ ಹಿನ್ನೆಲೆಗಳನ್ನ ಅಫಿಡವಿಟ್ನಲ್ಲಿ ಉಲ್ಲೇಖಿಸ್ತಾರಾ?
ಹಾವೇರಿ: ಉಪಚುನಾವಣೆಗೆ ಟಿಕೆಟ್ ಸಿಗುತ್ತಿದ್ದಂತೆ ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ ಮೇಲಿನ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಒಂದೇ ತಿಂಗಳ ಅಂತರದಲ್ಲಿ 2 ಎಫ್ಐಆರ್ ದಾಖಲಾಗಿದ್ದು, ಚುನಾವಣಾ ಸಂದರ್ಭದಲ್ಲಿಯೇ ಪ್ರಕರಣಗಳು ಹೊರ ಬರುತ್ತಿವೆ. ಅಭ್ಯರ್ಥಿ ಅರುಣ್ ಕುಮಾರ್ ಸೋಮವಾರ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ. ನೋಡಬೇಕು ಆ ವೇಳೆ ಅವರು ಸಲ್ಲಿಸುವ ಅಫಿಡವಿಟ್ನಲ್ಲಿ ಈ ಕ್ರಿಮಿನಲ್ ಹಿನ್ನೆಲೆಗಳನ್ನು ಉಲ್ಲೇಖಿಸುತ್ತಾರಾ? ಹರಿಹರ ಪಾಲಿಫೈಬರ್ಸ್ ಕಾರ್ಖಾನೆಗೆ ನುಗ್ಗಿ ದಾಂಧಲೆ: ರಾಣೆಬೆನ್ನೂರು ತಾಲೂಕಿನ ಕುಮಾರಪಟ್ಟಣಂ ಹರಿಹರ ಪಾಲಿಫೈಬರ್ಸ್ ಪ್ರೈ. […]
ಹಾವೇರಿ: ಉಪಚುನಾವಣೆಗೆ ಟಿಕೆಟ್ ಸಿಗುತ್ತಿದ್ದಂತೆ ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ ಮೇಲಿನ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಒಂದೇ ತಿಂಗಳ ಅಂತರದಲ್ಲಿ 2 ಎಫ್ಐಆರ್ ದಾಖಲಾಗಿದ್ದು, ಚುನಾವಣಾ ಸಂದರ್ಭದಲ್ಲಿಯೇ ಪ್ರಕರಣಗಳು ಹೊರ ಬರುತ್ತಿವೆ. ಅಭ್ಯರ್ಥಿ ಅರುಣ್ ಕುಮಾರ್ ಸೋಮವಾರ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ. ನೋಡಬೇಕು ಆ ವೇಳೆ ಅವರು ಸಲ್ಲಿಸುವ ಅಫಿಡವಿಟ್ನಲ್ಲಿ ಈ ಕ್ರಿಮಿನಲ್ ಹಿನ್ನೆಲೆಗಳನ್ನು ಉಲ್ಲೇಖಿಸುತ್ತಾರಾ?
ಹರಿಹರ ಪಾಲಿಫೈಬರ್ಸ್ ಕಾರ್ಖಾನೆಗೆ ನುಗ್ಗಿ ದಾಂಧಲೆ:
ರಾಣೆಬೆನ್ನೂರು ತಾಲೂಕಿನ ಕುಮಾರಪಟ್ಟಣಂ ಹರಿಹರ ಪಾಲಿಫೈಬರ್ಸ್ ಪ್ರೈ. ಲಿಮಿಟೆಡ್ ಕಾರ್ಖಾನೆಗೆ ನುಗ್ಗಿ ದಾಂಧಲೆ ನಡೆಸಿದ ಆರೋಪವಿದೆ. ಆಗಸ್ಟ್ 22ರಂದು ಅರುಣ್ ಕುಮಾರ್ ಪೂಜಾರ ಮತ್ತು ಸಹಚರರು ಕಂಪನಿಗೆ ನುಗ್ಗಿ ಗಲಾಟೆ ಮಾಡಿ, ಆಸ್ತಿ ಹಾನಿ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈ ಸಂಬಂಧ ನವೆಂಬರ್ 4ರಂದು ಸೆಕ್ಷನ್ 1860 ರಡಿ ಫ್ಯಾಕ್ಟರಿ ಮೇಲಧಿಕಾರಿಗಳು ದೂರು ದಾಖಲಿಸಿದ್ದಾರೆ.
ನಕಲಿ ದಾಖಲೆ ನೀಡಿ ವಂಚನೆ: ಲಾರಿ ಮಾರಾಟದ ಪ್ರಕರಣದಲ್ಲಿ ಚೋಳಮಂಡಲ ಫೈನಾನ್ಸ್‌ಗೆ ನಕಲಿ ದಾಖಲೆ ನೀಡಿ ವಂಚನೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಲಾರಿ ಮೇಲೆ ಸಾಲವಿದ್ದರೂ ನಕಲಿ ದಾಖಲೆ ನೀಡಿದ ಆರೋಪದಡಿ ಹುಬ್ಬಳ್ಳಿ ಕಚೇರಿಯ ಚೋಳಮಂಡಲ ಫೈನಾನ್ಸ್ ವ್ಯವಸ್ಥಾಪಕ ಮಹಾಂತೇಶ ಹುಲ್ಲಾರ್ ಕೇಸ್ ದಾಖಲಿಸಿದ್ದರು. ಈ ಸಂಬಂಧ ಹಾವೇರಿ ಸಿಜೆಎಂ ಕೋರ್ಟ್ ಆದೇಶದ ಮೇರೆಗೆ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹರಿಹರದ ತುಂಗಭದ್ರಾ ಸಹಕಾರ ಸಂಘದಲ್ಲಿ ಸಾಲ ಮಾಡಿ ಅರುಣ್ ಕುಮಾರ್ ಲಾರಿ ಖರೀದಿಸಿದ್ದರು. ಲಾರಿಯ ಸಾಲ 15 ಲಕ್ಷ ರೂ. ಬಾಕಿಯಿತ್ತು. ಬಳಿಕ ಆಪ್ತ ಸ್ನೇಹಿತ ನಾಗರಾಜಗೆ ಲಾರಿಯನ್ನು ಮಾರಾಟ ಮಾಡಿದ್ದರು. ಆದ್ರೆ, ಚೋಳಮಂಡಲ ಫೈನಾನ್ಸ್‌ನಲ್ಲಿ ನಾಗರಾಜ ಸಾಲ ಮಾಡಿದ್ದರು. ಹೀಗಾಗಿ ಸಹಕಾರ ಸಂಘದ ಸಾಲ ಫೈನಾನ್ಸ್‌ಗೆ ವರ್ಗಾವಣೆಯಾಗಿತ್ತು. ಸಹಕಾರ ಸಂಘದಲ್ಲಿ ಎನ್ಒಸಿ ಪಡೆದ ಅರುಣ್ ಕುಮಾರ್ ಸಾಲ ಬಾಕಿಯಿದ್ದರೂ ತನ್ನ ಹೆಸರಿಗೆ ಲಾರಿಯನ್ನು ವರ್ಗಾವಣೆ ಮಾಡಿಕೊಂಡಿದ್ದರು.
ಇದನ್ನು ಪ್ರಶ್ನಿಸಿ ಚೋಳಮಂಡಲ ಫೈನಾನ್ಸ್‌ನವರು ನ್ಯಾಯಾಲಯದ ಮೊರೆ ಹೋಗಿದ್ದರು. ಬಳಿಕ ನ್ಯಾಯಾಲಯದ ಸೂಚನೆ ಮೇರೆಗೆ ಪ್ರಕರಣದಲ್ಲಿ 3ನೇ ಆರೋಪಿಯಾಗಿ ನವೆಂಬರ್ 13ರಂದು ಎಫ್ಐಆರ್ ದಾಖಲಾಗಿದೆ.
Published On - 1:34 pm, Sat, 16 November 19