AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಹನ ಮಾಲೀಕರಿಗೆ ಶಾಕ್: ಸದ್ಯದಲ್ಲೇ ವಾಹನಗಳ ಎಮಿಷನ್ ಟೆಸ್ಟಿಂಗ್ ದರ ಹೆಚ್ಚಳ ಸಾಧ್ಯತೆ

Emission Test Price Hike: ಬೆಲೆ ಏರಿಕೆ ಅಂದರೆ ಜನ ಬೆಚ್ಚಿ ಬೀಳುವಂತಾಗಿದೆ. ಇಂತಹ ಸಂದರ್ಭದಲ್ಲಿ ಈಗ ಮತ್ತೊಂದು ಬೆಲೆ ಏರಿಕೆಗೆ ವೇದಿಕೆ ಸಜ್ಜಾಗುತ್ತಿದೆ. ಇದು ವಾಹನಗಳಿಗೆ ಸಂಬಂಧಪಟ್ಟ ಬೆಲೆ ಏರಿಕೆ. ವಾಹನ ಮಾಲೀಕರಿಗೆ ಸರ್ಕಾರ ಶೀಘ್ರವೇ ಶಾಕಿಂಗ್ ನ್ಯೂಸ್ ನೀಡುವ ಸಾಧ್ಯತೆ ಇದ್ದು, ಆ ಕುರಿತ ವರದಿ ಇಲ್ಲಿದೆ.

ವಾಹನ ಮಾಲೀಕರಿಗೆ ಶಾಕ್: ಸದ್ಯದಲ್ಲೇ ವಾಹನಗಳ ಎಮಿಷನ್ ಟೆಸ್ಟಿಂಗ್ ದರ ಹೆಚ್ಚಳ ಸಾಧ್ಯತೆ
ಎಮಿಷನ್ ಟೆಸ್ಟಿಂಗ್ (ಸಾಂದರ್ಭಿಕ ಚಿತ್ರ)
Kiran Surya
| Updated By: Ganapathi Sharma|

Updated on: Jul 25, 2024 | 7:29 AM

Share

ಬೆಂಗಳೂರು, ಜುಲೈ 25: ದ್ವಿಚಕ್ರ ವಾಹನ, ಆಟೋ, ಕಾರು, ಲಾರಿ, ಬಸ್ಸು ಯಾವುದೇ ವಾಹನದ ಚಾಲಕರಾಗಿರಲಿ, ಮಾಲೀಕರಾಗಿರಲಿ ಎಮಿಷನ್ ಟೆಸ್ಟ್ ಮಾಡಿಸಿರುವುದು ಅನಿವಾರ್ಯ. ಇದೀಗ ಯಾವುದೇ ಸಮಯದಲ್ಲಿ ಎಮಿಷನ್ ಟೆಸ್ಟ್ ದರ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ಸುಳಿವು ದೊರೆತಿದೆ. 2021 ರಲ್ಲಿ ಎಮಿಷನ್ ಟೆಸ್ಟಿಂಗ್ ದರವನ್ನ ಹೆಚ್ಚು ಮಾಡಲಾಗಿತ್ತು. ಈಗ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ದರ ಏರಿಕೆ ಮಾಡುವಂತೆ ಸಾರಿಗೆ ಸಚಿವರಿಗೆ ಕರ್ನಾಟಕ ಎಮಿಷನ್ ಟೆಸ್ಟಿಂಗ್ ಸೆಂಟರ್ ಓನರ್ ಅಸೋಸಿಯೇಷನ್ ಒತ್ತಾಯ ಮಾಡಿದೆ. ಸರ್ಕಾರ ಹಿಂದಿನ ದರಕ್ಕಿಂತ ನಾಲ್ಕರಷ್ಟು ಹೆಚ್ಚು ಪಡೆಯಲು ತೀರ್ಮಾನ ಮಾಡಿದೆ ಎನ್ನಲಾಗಿದೆ. ಪೆಟ್ರೋಲ್, ಡಿಸೇಲ್ ದರ ಹೆಚ್ಚಳವಾಗಿದೆ. ಕೆಲಸಗಾರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಹೀಗಾಗಿ ಸರ್ಕಾರ ದರ ಏರಿಕೆ ಮಾಡಬೇಕೆಂದು ಎಮಿಷನ್ ಟೆಸ್ಟಿಂಗ್ ಸೆಂಟರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಯೋಗೀಶ್ ಮನವಿ ಮಾಡಿದ್ದಾರೆ.

ಯಾವುದೇ ವಾಹನವಾದರೂ ಪ್ರತಿ ಆರು ತಿಂಗಳು, ವರ್ಷಕ್ಕೆ ಒಮ್ಮೆ ಎಮಿಷನ್ ಟೆಸ್ಟ್ ಮಾಡಿಸಬೇಕು. ರಾಜ್ಯದಲ್ಲಿ ಒಟ್ಟು ಮೂರು ಕೋಟಿಗೂ ಹೆಚ್ಚು ವಾಹನಗಳಿವೆ. ರಾಜಧಾನಿ ಬೆಂಗಳೂರಲ್ಲೇ ಒಂದು ಕೋಟಿ ಮೂವತ್ತು ಲಕ್ಷ ವಾಹನಗಳಿವೆ‌. ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ಇಲ್ಲವಾದರೆ ಟ್ರಾಫಿಕ್ ಪೋಲಿಸರು 500 ರೂ.ನಿಂದ 1000 ರೂಪಾಯಿವರೆಗೆ ದಂಡ ವಿಧಿಸುತ್ತಾರೆ. ಎಮಿಷನ್ ಸರ್ಟಿಫಿಕೇಟ್ ಇಲ್ಲಾಂದರೆ ಆರ್ಟಿಓ ಅಧಿಕಾರಿಗಳು ವಾಹನಗಳಿಗೆ ಎಫ್ಸಿ ಮಾಡುವುದಿಲ್ಲ. ಎಮಿಷನ್ ಟೆಸ್ಟ್ ವರದಿ ಇಲ್ಲ ಅಂದರೆ ಇನ್ಸೂರೆನ್ಸ್ ಕ್ಲೈಮ್ ಆಗುವುದಿಲ್ಲ.

ಎಷ್ಟು ಹೆಚ್ಚಾಗಬಹುದು ಎಮಿಷನ್ ಟೆಸ್ಟ್ ದರ?

ಸದ್ಯ ಒಂದು ಬೈಕ್ ಎಮಿಷನ್ ಟೆಸ್ಟ್ ಮಾಡಲು 65 ರುಪಾಯಿ ತೆಗೆದುಕೊಳ್ಳುತ್ತಾರೆ. ಇದನ್ನು 110 ರುಪಾಯಿಗೆ ಏರಿಕೆ ಮಾಡುವಂತೆ ಮನವಿ ಮಾಡಲಾಗಿದೆ. ತ್ರಿಚಕ್ರ ವಾಹನಗಳಿಗೆ (ಆಟೋ, ಗೂಡ್ಸ್ ಆಟೋ) ಸದ್ಯ 75 ರೂಪಾಯಿ ಇದ್ದು, 100 ರುಪಾಯಿ ಮಾಡುವಂತೆ ಮನವಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ತುಮಕೂರು ಬಳಿಕ ರಾಮನಗರಕ್ಕೂ ನಮ್ಮ ಮೆಟ್ರೋ ಸಂಚಾರ; ಟೆಂಡರ್ ಕರೆದ ಬಿಎಂಆರ್​ಸಿಎಲ್

ನಾಲ್ಕು ಚಕ್ರದ ಪೆಟ್ರೋಲ್ ಕಾರುಗಳ ಎಮಿಷನ್ ಟೆಸ್ಟ್​ಗೆ ಪ್ರಸ್ತುತ 115 ರೂಪಾಯಿ ಇದ್ದು, 200 ರೂಪಾಯಿ ಮಾಡುವಂತೆ ಕೋರಲಾಗಿದೆ. ಎಲ್ಲಾ ಮಾದರಿಯ ಡಿಸೇಲ್ ವಾಹನಗಳಿಗೆ (ಲಾರಿ, ಬಸ್ ಹಾಗೂ ಟ್ರಕ್) ಸದ್ಯ 160 ರೂಪಾಯಿ 250ಕ್ಕೆ ಏರಿಕೆ ಮಾಡಬೇಕು ಎಂದು ವಿನಂತಿಸಲಾಗಿದೆ.

ಸರ್ಕಾರಕ್ಕೆ ನೀಡುವ ಮೊತ್ತ ಹೆಚ್ಚಳವಾಗಿದ್ದೇ ಕಾರಣ

ಈ ಹಿಂದೆ ಒಂದು ವಾಹನಕ್ಕೆ ಎಮಿಷನ್ ಟೆಸ್ಟ್ ಮಾಡಿದರೆ, ಎಮಿಷನ್ ಟೆಸ್ಟಿಂಗ್ ಸೆಂಟರ್​​ಗಳಿಂದ ಸರ್ಕಾರಕ್ಕೆ 3 ರುಪಾಯಿ 25 ಪೈಸೆ ನೀಡಬೇಕಿತ್ತು. ಇನ್ಮುಂದೆ ಸರ್ಕಾರಕ್ಕೆ 13 ರೂಪಾಯಿ 80 ಪೈಸೆ ನೀಡಬೇಕಂತೆ. ಹಾಗಾಗಿ ಎಮಿಷನ್ ಟೆಸ್ಟಿಂಗ್ ಸೆಂಟರ್ ಮಾಲೀಕರು ದರ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮಾತಾನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ‘ಎಮಿಷನ್ ಟೆಸ್ಟಿಂಗ್ ಸೆಂಟರ್ ಅಸೋಸಿಯೇಷನ್ ಅವರು ನನಗೆ ಮನವಿ ಮಾಡಿದ್ದಾರೆ. ನಾನು ನಮ್ಮ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಪರಿಶೀಲನೆ ಮಾಡಲು ಸೂಚನೆ ನೀಡಿದ್ದೇನೆ’ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್