ಕೇಂದ್ರದಿಂದ ತೆರಿಗೆ ಪಾಲು ಪೂರ್ಣ ದೊರೆಯದಿರಲು ರಾಜ್ಯ ಸರ್ಕಾರವೂ ಕಾರಣವಂತೆ! ತಜ್ಞರು ಕೊಟ್ಟರು ಅಚ್ಚರಿಯ ಮಾಹಿತಿ

ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ್ತೊಂದು ಸುತ್ತಿನ ಹೋರಾಟಕ್ಕೆ ಕರೆ ನೀಡಿದೆ. ಅಚ್ಚರಿಯ ವಿಚಾರವೆಂದರೆ, ರಾಜ್ಯ ಸರ್ಕಾರದ ತಪ್ಪುಗಳಿಂದಲೇ ಸುಮಾರು 2,800 ಕೋಟಿ ರೂ. ಅನುದಾನ ಕೈತಪ್ಪಿಹೋಗಿದೆಯಂತೆ! ಈ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಮತ್ತು ವಿವರಣೆ ಇಲ್ಲಿದೆ.

ಕೇಂದ್ರದಿಂದ ತೆರಿಗೆ ಪಾಲು ಪೂರ್ಣ ದೊರೆಯದಿರಲು ರಾಜ್ಯ ಸರ್ಕಾರವೂ ಕಾರಣವಂತೆ! ತಜ್ಞರು ಕೊಟ್ಟರು ಅಚ್ಚರಿಯ ಮಾಹಿತಿ
ಕೇಂದ್ರದಿಂದ ತೆರಿಗೆ ಪಾಲು ಪೂರ್ಣ ದೊರೆಯದಿರಲು ರಾಜ್ಯ ಸರ್ಕಾರವೂ ಕಾರಣವಂತೆ! ತಜ್ಞರು ಕೊಟ್ಟರು ಅಚ್ಚರಿಯ ಮಾಹಿತಿ
Follow us
|

Updated on: Oct 14, 2024 | 11:14 AM

ಬೆಂಗಳೂರು, ಅಕ್ಟೋಬರ್ 14: ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಕೇಂದ್ರದ ವಿರುದ್ಧ ಮತ್ತೆ ಪ್ರತಿಭಟನೆ ನಡೆಸಲು ಆಡಳಿತಾರೂಢ ಕಾಂಗ್ರೆಸ್ ಕರೆ ಕೊಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ಕೇಂದ್ರದ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ. ಮತ್ತೊಂದೆಡೆ, ಡಿಸಿಎಂ ಡಿಕೆ ಶಿವಕುಮಾರ್ ಸಹ ಅದೇ ಹೆಜ್ಜೆ ಇಟ್ಟಿದ್ದಾರೆ. ಆದರೆ, ಕೇಂದ್ರದಿಂದ ಸಮರ್ಪಕ ತೆರಿಗೆ ಪಾಲು ದೊರೆಯದೇ ಇರುವುದಕ್ಕೆ ರಾಜ್ಯ ಸರ್ಕಾರ ಕೂಡ ಕಾರಣವಾಗಿದೆ ಎಂಬ ಅಚ್ಚರಿಯ ವಿಚಾರವನ್ನು ತಜ್ಞರು ಬಹಿರಂಗಪಡಿಸಿದ್ದಾರೆ.

ಜಿಲ್ಲಾ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಚುನಾವಣೆ ವಿಳಂಬವಾಗಿದ್ದರಿಂದ ರಾಜ್ಯವು ಕೇಂದ್ರದಿಂದ ಬರಬೇಕಾದ ಬಹುಪಾಲು ಹಣದಿಂದ ವಂಚಿತವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತೆರಿಗೆ ಅನ್ಯಾಯದ ವಿರುದ್ಧ ರಾಜ್ಯಾದ್ಯಂತ ಆಂದೋಲನಕ್ಕೆ ಕರೆ ನೀಡಿದ್ದಾರೆ. ಕಳೆದ ವಾರ ಕೇಂದ್ರವು 1.8 ಲಕ್ಷ ಕೋಟಿ ರೂ.ಗಳನ್ನು (1,78,173 ಕೋಟಿ ರೂ.) ಬಿಡುಗಡೆ ಮಾಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರಿಗೆ ಪಾಲು ವಿಷಯದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.

15 ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ರಾಜ್ಯಗಳಿಗೆ ತೆರಿಗೆ ಹಂಚಿಕೆಯ ಅಕ್ಟೋಬರ್ ಕಂತು ಬಿಡುಗಡೆಯಾಗಿದ್ದು, ಕರ್ನಾಟಕಕ್ಕೆ ಕೇವಲ 6,498 ಕೋಟಿ ರೂ.ಗಳು ದೊರೆತಿದೆ. ಕೇಂದ್ರದ ವಿರುದ್ಧ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಕ್ರೋಶ ಮತ್ತೆ ಭುಗಿಲೇಳಲು ಇದು ಕಾರಣವಾಗಿದೆ.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಸಂಪನ್ಮೂಲ ಹಂಚಿಕೆಯಲ್ಲಿನ ಅಸಮಾನತೆಯನ್ನು ಎತ್ತಿ ತೋರಿಸಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳು ಕ್ರಮವಾಗಿ 32,962 ಕೋಟಿ ಮತ್ತು 17,921 ಕೋಟಿ ರೂ.ಗಳನ್ನು ಪಡೆದರೆ, ಕರ್ನಾಟಕವು ಅತ್ಯಲ್ಪ ಮೊತ್ತವನ್ನು ಪಡೆದುಕೊಂಡಿದೆ. ಈ ಘೋರ ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ನಮಗೆ ಬೇರೆ ದಾರಿಯಿಲ್ಲ ಎಂದು ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ. ನಮ್ಮ ರಾಜ್ಯವು ಸಂಗ್ರಹಿಸುವ ಜಿಎಸ್‌ಟಿಯ ಶೇಕಡಾ 52 ರಷ್ಟು ಮಾತ್ರ ಪಡೆಯುತ್ತದೆ. ಜಿಎಸ್‌ಟಿ ಜಾರಿಯಾದ ನಂತರ 59,274 ಕೋಟಿ ರೂ.ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆ ವಿಳಂಬದಿಂದ 2,800 ಕೋಟಿ ರೂ. ನಷ್ಟ

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬವಾದ ಕಾರಣ ಇತ್ತೀಚಿನ ಕಂತಿನಲ್ಲಿ ರಾಜ್ಯಕ್ಕೆ 2,800 ಕೋಟಿ ರೂ. ಕಡಿಮೆಯಾಗಿದೆ ಎಂದು ತಜ್ಞರು ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. 15ನೇ ಹಣಕಾಸು ಆಯೋಗದ ನಿಯಮಗಳ ಪ್ರಕಾರ, ನಿಗದಿತ ಸಮಯಕ್ಕೆ ಚುನಾವಣೆ ನಡೆದರೆ ಮಾತ್ರ ಸ್ಥಳೀಯ ಸಂಸ್ಥೆಗಳು ಕೇಂದ್ರದಿಂದ ತೆರಿಗೆ ಪಾಲಿಗೆ ಅರ್ಹವಾಗಿವೆ. ಜಿಪಂ ಮತ್ತು ತಾ.ಪಂ.ಚುನಾವಣೆ ಅವಧಿ ಮೂರು ವರ್ಷ ಮೀರಿದ್ದರೂ ಚುನಾವಣೆಯಾಗಿಲ್ಲ. ಬಿಬಿಎಂಪಿ ಕೌನ್ಸಿಲ್‌ನ ಅವಧಿ ಮುಗಿದು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದೆ.

ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಕೇವಲ ಸಾಂವಿಧಾನಿಕ ಬಾಧ್ಯತೆ ಮಾತ್ರವಲ್ಲ, ಕೇಂದ್ರದಿಂದ ಹಣ ಪಡೆಯುವುದು ಸಹ ಅಗತ್ಯವಾಗಿದೆ ಎಂದು ಗ್ರಾಮೀಣ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರದ ನಿರ್ದೇಶಕ ಬಿಡಿಎ ಸತ್ಯಬಾಬು ಬೋಸ್ ಹೇಳಿರುವುದನ್ನೂ ವರದಿ ಉಲ್ಲೇಖಿಸಿದೆ.

ವಿಪರ್ಯಾಸವೆಂದರೆ, ಕೇಂದ್ರದ ವಿರುದ್ಧ ತೆರಿಗೆ ಅನ್ಯಾಯ ಪ್ರತಿಭಟನೆಯ ನೇತೃತ್ವ ವಹಿಸಲಿರುವ ಡಿಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿದ್ದು, ಬಿಬಿಎಂಪಿ ಚುನಾವಣೆಗೂ ಜವಾಬ್ದಾರರಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಏತನ್ಮಧ್ಯೆ, ಆದಷ್ಟು ಬೇಗ ಚುನಾವಣೆ ನಡೆಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ತೆರಿಗೆ ಅನ್ಯಾಯ: ಮಾಧ್ಯಮ ಪ್ರಕಟಣೆ ಮೂಲಕ ಹೋರಾಟಕ್ಕೆ ಕರೆಕೊಟ್ಟ ಸಿಎಂ ಸಿದ್ದರಾಮಯ್ಯ

ಸ್ಥಳೀಯ ಸಂಸ್ಥೆ ಮಂಡಳಿಗಳು ಅಸ್ತಿತ್ವದಲ್ಲಿಲ್ಲದ ಕಾರಣ ನಾವು ಜಿ.ಪಂಗಳು ಮತ್ತು ತಾಲೂಕು ಪಂಚಾಯಿತಿಗಳಿಗೆ ಹಣವನ್ನು ಪಡೆಯಲು ಸಾಧ್ಯವಿಲ್ಲ ಎಂದೂ ಪ್ರಿಯಾಂಕ್ ಖರ್ಗೆ ಹೇಳಿದ್ದಾಗಿಯೂ ವರದಿ ಉಲ್ಲೇಖಿಸಿದೆ. ಹಿಂದಿನ ಚುನಾಯಿತ ಮಂಡಳಿಯ ಅವಧಿ ಮುಗಿಯುವ ಮೊದಲು ಮತದಾನ ನಡೆದಿರಲಿಲ್ಲ. ಇದಕ್ಕಾಗಿ ನಾವು ಕೇಂದ್ರವನ್ನು ದೂಷಿಸುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮೈಸೂರು: ಮಹಿಳಾ ಪೊಲೀಸ್​ಗೆ ಮಡಿಲು ತುಂಬಿ ಸೀಮಂತ ಮಾಡಿದ ಪೊಲೀಸ್ ಸಿಬ್ಬಂದಿ
ಮೈಸೂರು: ಮಹಿಳಾ ಪೊಲೀಸ್​ಗೆ ಮಡಿಲು ತುಂಬಿ ಸೀಮಂತ ಮಾಡಿದ ಪೊಲೀಸ್ ಸಿಬ್ಬಂದಿ
ಸ್ಪರ್ಧಿಗಳ ವರ್ತನೆಗೆ, ಉಡಾಫೆತನಕ್ಕೆ ಬೇಸತ್ತ ಬಿಗ್ ಬಾಸ್
ಸ್ಪರ್ಧಿಗಳ ವರ್ತನೆಗೆ, ಉಡಾಫೆತನಕ್ಕೆ ಬೇಸತ್ತ ಬಿಗ್ ಬಾಸ್
ಅಯೋಧ್ಯೆ ಬಾಲರಾಮನ ದರ್ಶನಕ್ಕೆ ಸೈಕಲ್ ಏರಿ ಹೊರಟ ಕೋಲಾರ ಯುವಕರು
ಅಯೋಧ್ಯೆ ಬಾಲರಾಮನ ದರ್ಶನಕ್ಕೆ ಸೈಕಲ್ ಏರಿ ಹೊರಟ ಕೋಲಾರ ಯುವಕರು
ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್ ಆರಂಭ
ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್ ಆರಂಭ
ಭಾರತದ ವಿಶ್ವಕಪ್ ಹೀರೋಗೆ ಹುಟ್ಟುಹಬ್ಬದ ಶುಭಾಶಯಗಳು
ಭಾರತದ ವಿಶ್ವಕಪ್ ಹೀರೋಗೆ ಹುಟ್ಟುಹಬ್ಬದ ಶುಭಾಶಯಗಳು
Daily Devotional: ನಿಸ್ವಾರ್ಥ ಸೇವೆಯ ಫಲ ಹೇಗಿರುತ್ತದೆ? ಈ ವಿಡಿಯೋ ನೋಡಿ
Daily Devotional: ನಿಸ್ವಾರ್ಥ ಸೇವೆಯ ಫಲ ಹೇಗಿರುತ್ತದೆ? ಈ ವಿಡಿಯೋ ನೋಡಿ
ಈ ರಾಶಿಯವರಿಗೆ ಬಂಧುಗಳ ಸಂಪತ್ತು ಕಾರಣಾಂತರಗಳಿಂದ ನಿಮಗೆ ಸಿಗಬಹುದು
ಈ ರಾಶಿಯವರಿಗೆ ಬಂಧುಗಳ ಸಂಪತ್ತು ಕಾರಣಾಂತರಗಳಿಂದ ನಿಮಗೆ ಸಿಗಬಹುದು
ಮನೆ ಅಂಗಳಕ್ಕೆ ಎಂಟ್ರಿ ಕೊಟ್ಟ ಕರಿ ಚಿರತೆ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಮನೆ ಅಂಗಳಕ್ಕೆ ಎಂಟ್ರಿ ಕೊಟ್ಟ ಕರಿ ಚಿರತೆ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಸಿದ್ರಾಮಯ್ಯ ಕಾರು ಬರ್ತಿದ್ದಂತೆ ನುಗ್ಗಿಬಂದ ವ್ಯಕ್ತಿ; ವಶಕ್ಕೆ ಪಡೆದ ಪೊಲೀಸ್
ಸಿದ್ರಾಮಯ್ಯ ಕಾರು ಬರ್ತಿದ್ದಂತೆ ನುಗ್ಗಿಬಂದ ವ್ಯಕ್ತಿ; ವಶಕ್ಕೆ ಪಡೆದ ಪೊಲೀಸ್
ಹಂಸಾ, ಜಗದೀಶ್ ಬಗ್ಗೆ ನೇರವಾಗಿ ಮಾತಾಡಿದ ಧನರಾಜ್; ಕಿಚ್ಚ ಸುದೀಪ್​ಗೂ ಶಾಕ್
ಹಂಸಾ, ಜಗದೀಶ್ ಬಗ್ಗೆ ನೇರವಾಗಿ ಮಾತಾಡಿದ ಧನರಾಜ್; ಕಿಚ್ಚ ಸುದೀಪ್​ಗೂ ಶಾಕ್