AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಬದಿ ಜೇನುತುಪ್ಪ ಖರೀದಿಸುವ ಮುನ್ನ ಹುಷಾರ್​! ಶಿವಮೊಗ್ಗಕ್ಕೆ ಲಗ್ಗೆಯಿಟ್ಟ ಕಲಬೆರಕೆ ಜೇನುತುಪ್ಪ

ಶಿವಮೊಗ್ಗದಲ್ಲಿ ಕಲಬೆರಕೆ ಜೇನುತುಪ್ಪ ಮಾರಾಟವು ಹೆಚ್ಚುತ್ತಿದೆ. ಛತ್ತೀಸ್‌ಗಡ್ ಮತ್ತು ಬಿಹಾರದಿಂದ ಬಂದ ವ್ಯಕ್ತಿಗಳು ಶುದ್ಧ ಜೇನುತುಪ್ಪ ಎಂದು ನಕಲಿ ಜೇನುತುಪ್ಪವನ್ನು ಮಾರಾಟ ಮಾಡುತ್ತಿದ್ದಾರೆ. ಪೊಲೀಸರು ಇವರಿಗೆ ನಕಲಿ ಜೇನುತುಪ್ಪ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ರಸ್ತೆ ಬದಿಯಲ್ಲಿ ಜೇನುತುಪ್ಪ ಖರೀದಿಸುವ ಮುನ್ನ ಜಾಗರೂಕರಾಗಿರಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ರಸ್ತೆ ಬದಿ ಜೇನುತುಪ್ಪ ಖರೀದಿಸುವ ಮುನ್ನ ಹುಷಾರ್​! ಶಿವಮೊಗ್ಗಕ್ಕೆ ಲಗ್ಗೆಯಿಟ್ಟ ಕಲಬೆರಕೆ ಜೇನುತುಪ್ಪ
ರಸ್ತೆ ಬದಿ ಜೇನುತುಪ್ಪ ಖರೀದಿಸುವ ಮುನ್ನ ಹುಷಾರ್​! ಶಿವಮೊಗ್ಗಕ್ಕೆ ಲಗ್ಗೆಯಿಟ್ಟ ಕಲಬೆರಕೆ ಜೇನುತುಪ್ಪ
Basavaraj Yaraganavi
| Edited By: |

Updated on: Dec 13, 2024 | 6:33 PM

Share

ಶಿವಮೊಗ್ಗ, ಡಿಸೆಂಬರ್​ 13: ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಸ್ತು, ಆಹಾರ ಪದಾರ್ಥ, ನಾವು ಕುಡಿಯುವ ಪಾನಿಯಾಗಳು ಕಲಬೆರಕೆಯಾಗಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಈ ಮಧ್ಯೆ ಈಗ ಜೇನುತುಪ್ಪವನ್ನು ಕಲಬೆರಕೆ (Honey Scam) ಮಾಡಿ ಮಾರಾಟ ಮಾಡುವ ಜಾಲಗಳು ಹೆಚ್ಚಾಗಿವೆ. ನಗರದಲ್ಲಿ ಜನರಿಗೆ ಅಸಲಿ ಜೇನುತುಪ್ಪವೆಂದು ನಂಬಿಸಿ ನಕಲಿ ಜೇನುತುಪ್ಪ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಬಣ್ಣ ಬಯಲು ಆಗಿದೆ.

ಶಿವಮೊಗ್ಗದಲ್ಲಿ ಹೆಚ್ಚಾಯ್ತು ಕಲಬೆರಕೆ ಜೇನುತುಪ್ಪ ಮಾರಾಟ

ಶಿವಮೊಗ್ಗದಲ್ಲಿ ಕಲಬೆರಕೆ ಜೇನುತುಪ್ಪ ಮಾರಾಟದ ಹಾವಳಿ ಹೆಚ್ಚಾಗಿದೆ. ಈಗ ತಾನೇ ಕಾಡಿನಿಂದ ಜೇನು ಇಳಿಸಿ ತಂದಿದ್ದೇವೆ ಉತ್ತಮ ಗುಣಮಟ್ಟದ ಜೇನುತುಪ್ಪ ಎಂದು ರಸ್ತೆ ಬದಿಯಲ್ಲಿ ಕೂತು ಮಾರಾಟ ಮಾಡುವವರ ಬಳಿ ಖರೀದಿಸುವ ಮುನ್ನ ಒಮ್ಮೆ ಯೋಚಿಸಬೇಕಿದೆ. ಯಾಕೆ ಅಂದರೆ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಛತ್ತಿಸ್ಗಡ್, ಬಿಹಾರ ಮೂಲದ ವ್ಯಕ್ತಿಗಳು ಶುದ್ದ ಜೇನುತುಪ್ಪ ಎಂದು ಕಲಬೆರಕೆ ಜೇನುತುಪ್ಪ ಮಾರುತ್ತಿರುವುದು ಕಂಡು ಬಂದಿದ್ದು, ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ಜೇನುತುಪ್ಪ ಮಾರಾಟ ಮಾಡದಂತೆ  ಎಚ್ಚರಿಕೆ ನೀಡಿ ಕಳಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಫೈನಾನ್ಸ್ ಕಾಟಕ್ಕೆ ಕಂಗಾಲಾದ ರೈತ: ಮನೆ ಸೀಜ್, ನ್ಯಾಯಕ್ಕಾಗಿ ಬೀದಿಗಿಳಿದ ರೈತರು

ಕೆಜಿಗೆ 400 ರಿಂದ 800 ರೂ ವರೆಗೆ. ನಕಲಿ ಜೇನುತುಪ್ಪ ಮಾರಾಟ ಮಾಡಿ ಯಾಮಾರಿಸುತ್ತಿದ್ದಾರೆ. ಹಾಗಾಗಿ ಇದರಿಂದ ಸಾವರ್ಜನಿಕರು ಎಚ್ಚರದಿಂದ ಇರಬೇಕು ಹಾಗೂ ರಸ್ತೆ ಬದಿಯಲ್ಲಿ ಜೇನುತುಪ್ಪ ಖರೀದಿ ಮಾಡುವ ಮುನ್ನ ಜನರು ನೂರು ಸಲ ಯೋಚಿಸಬೇಕಿದೆ ಎಂದು ಸ್ಥಳೀಯರಾ ಗೌತಮ್​ ಎಂಬುವವರು ಹೇಳಿದ್ದಾರೆ.

ಇನ್ನೂ ಈ ಕಲಬೆರಕೆ ಜೇನುತುಪ್ಪ ಸೇವಿಸುವುದರಿಂದ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳು ಸಹ ಕಾಣಿಸಿಕೊಳ್ಳಬಹುದಾಗಿದೆ. ಹಾಗಾಗಿ ನಾವು ಖರೀದಿಸುವ ಜೇನುತುಪ್ಪ ಶುದ್ಧವಾ ಅಥವಾ ಕಲಬೆರಕೆಯಾ ಎಂದು ಪರಿಕ್ಷೀಸಿ ಖರೀದಿಸುವುದು ಉತ್ತಮ. ಇನ್ನೂ ಈತರಹದ ಕಲಬೆರಕೆ ಜೇನುತುಪ್ಪ ಮಾರಾಟ ಮಾಡುವುದು ಕಂಡು ಬಂದರೆ ದೂರು ನೀಡಿ. ಜೊತೆಗೆ ಕಡಿಮೆ ದರಕ್ಕೆ ಸಿಗುತ್ತೆ ಅಂತ ಖರೀದಿಸಬೇಡಿ ಎಂದು ಆರೋಗ್ಯ ಸುರಕ್ಷತಾ ಅಧಿಕಾರಿ ಸದಾಶಿವ ಹೇಳಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಲಯನ್ ಸಫಾರಿ ಕರ್ನಾಟಕದ ಪ್ರಾಣಿ ಸಂಕುಲದ ಸ್ವರ್ಗ, ಫೋಟೋಸ್​ ನೋಡಿ

ರಸ್ತೆ ಬದಿಯಲ್ಲಿ ಅಥವಾ ಅಂಗಡಿಗಳಲ್ಲಿ ಜೇನುತುಪ್ಪ ಖರೀದಿಸುವ ಮುನ್ನಾ ಪರೀಕ್ಷಿಸಿ ಖರೀದಿಸುವುದು ಉತ್ತಮ ಇದರ ಜೊತೆಗೆ ಸಂಬಂಧ ಪಟ್ಟ ಇಲಾಖೆಗಳು ಸಹ ಗಮನ ಹರಿಸುವ ಮೂಲಕ ನಕಲಿ ಜೇನುತುಪ್ಪ ಮಾರಾಟ ಜಾಲದ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.