ಶಿವಮೊಗ್ಗದಲ್ಲಿ ಫೈನಾನ್ಸ್ ಕಾಟಕ್ಕೆ ಕಂಗಾಲಾದ ರೈತ: ಮನೆ ಸೀಜ್, ನ್ಯಾಯಕ್ಕಾಗಿ ಬೀದಿಗಿಳಿದ ರೈತರು

ಶಿವಮೊಗ್ಗದ ರೈತ ಹನುಮಂತ ನಾಯ್ಕ ಅವರ ಮನೆಯನ್ನು ಫೈನಾನ್ಸ್ ಕಂಪನಿ ಜಪ್ತಿ ಮಾಡಿದ್ದು, ರೈತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೆಚ್ಚಿನ ಬಡ್ಡಿ ದರ ಮತ್ತು ಕಠಿಣ ಸಾಲ ವಸೂಲಿ ವಿಧಾನಗಳನ್ನು ಖಂಡಿಸಿ ಪ್ರತಿಭಟಿಸಲಾಗಿದೆ. ಸರ್ಕಾರವು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ರೈತನು 14 ಲಕ್ಷ ರೂ ಸಾಲ ಪಡೆದಿದ್ದು, ಬಾಕಿ ಇರುವ 2 ಲಕ್ಷ ರೂಪಾಯಿಗಾಗಿ ಮನೆ ಜಪ್ತಿ ಮಾಡಲಾಗಿದೆ.

ಶಿವಮೊಗ್ಗದಲ್ಲಿ ಫೈನಾನ್ಸ್ ಕಾಟಕ್ಕೆ ಕಂಗಾಲಾದ ರೈತ: ಮನೆ ಸೀಜ್, ನ್ಯಾಯಕ್ಕಾಗಿ ಬೀದಿಗಿಳಿದ ರೈತರು
ಶಿವಮೊಗ್ಗದಲ್ಲಿ ಫೈನಾನ್ಸ್ ಕಾಟಕ್ಕೆ ಕಂಗಾಲಾದ ರೈತ: ಮನೆ ಸೀಜ್, ನ್ಯಾಯಕ್ಕಾಗಿ ಬೀದಿಗಿಳಿದ ರೈತರು
Follow us
Basavaraj Yaraganavi
| Updated By: ಗಂಗಾಧರ​ ಬ. ಸಾಬೋಜಿ

Updated on: Dec 05, 2024 | 6:12 PM

ಶಿವಮೊಗ್ಗ, ಡಿಸೆಂಬರ್​ 05: ಕಷ್ಟ ಇದೆ ಅಂತಾ ರೈತ ಫೈನಾನ್ಸ್​ನಲ್ಲಿ ಸಾಲ ಪಡೆದಿದ್ದರು. ಸಾಲ ಮರುಪಾತಿ  ಮಾಡಿ ಸುಸ್ತಾಗಿದ್ದ ರೈತನಿಗೆ (Farmer) ಅದೊಂದು ದಿನ ಬಿಗ್ ಶಾಕ್ ಎದುರಾಗಿದೆ. ಸಾಲದ ಕಂತು ಬಾಕಿ ಇಟ್ಟಿದ್ದ ರೈತನ ಮನೆಯನ್ನು ಕೋರ್ಟ್ ಆದೇಶ ಪಡೆದು ಫೈನಾನ್ಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಫೈನಾನ್ಸ್​​ನ ಈ ಧೋರಣೆ ಖಂಡಿಸಿ ರೈತ ಸಂಘಟನೆಗಳು ಹೋರಾಟಕ್ಕಿಳಿದಿವೆ.

ಫೈನಾನ್ಸ್ ಧೋರಣೆ ಖಂಡಿಸಿ ರೈತ ಸಂಘಟನೆಯಿಂದ ಪ್ರತಿಭಟನೆ

ನಗದಲ್ಲಿ ಫೈನಾನ್ಸ್​ ಕಾಟಕ್ಕೆ ರೈತನು ಕಂಗಾಲಾಗಿದ್ದು, ಫೈನಾನ್ಸ್ ಧೋರಣೆ ಖಂಡಿಸಿ ರೈತ ಸಂಘಟನೆಗಳು ಶಿವಮೊಗ್ಗದ ಆಧಾರ್ ಹೌಸಿಂಗ್ ಫೈನಾನ್ಸ್ ಲಿ. ಎದುರು ಪ್ರತಿಭಟನೆ ನಡೆಸಿದರು. ರಾಜ್ಯ ರೈತ ಸಂಘದ ನಾಯಕ ಕೆ.ಟಿ ಗಂಗಾಧರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ. ಶಿವಮೊಗ್ಗ ತಾಲೂಕಿನ ಹಾರೋಬೆನವಳ್ಳಿ ಗ್ರಾಮದ ನಿವಾಸಿ ರೈತ ಹನುಮಂತ ನಾಯ್ಕಗೆ 2018 ರ ಜೂನ್ ನಲ್ಲಿ ಸಾಲ ಕೊಟ್ಟಿದ್ದು 14 ಲಕ್ಷ ರೂಪಾಯಿ. ಈಗಾಲೇ 12 ಲಕ್ಷ ರೂ. ಸಾಲ ತೀರಿಸಿದ್ದಾರೆ.

ಇದನ್ನೂ ಓದಿ: ರಸ್ತೆ ಗುಂಡಿ ಮುಚ್ಚಲು ಹೈಟೆಕ್ ತಂತ್ರಜ್ಞಾನ, ಕೋಲ್ಡ್ ಪಾಟ್ ಹೋಲ್ ಮಿಕ್ಸ್ ಆವಿಷ್ಕಾರ

ವರ್ಷಕ್ಕೆ ಶೇ. 16 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಿರುವ ಫೈನಾನ್ಸ್, 15 ವರ್ಷದ ಅವಧಿಗೆ ಸಾಲ ಪಡೆದಿದ್ದು, ಎರಡು ಲಕ್ಷ ರೂ ಮಾತ್ರ ಬಾಕಿ ಇದೆ. ಈ ನಡುವೆ 9 ತಿಂಗಳಿನಿಂದ ಕಂತು ಕಟ್ಟದ ಹಿನ್ನೆಲೆ, ಕೋರ್ಟ್ ಆದೇಶ ಪಡೆದು ಫೈನಾನ್ಸ್​ನಿಂದ ರೈತನ ಮನೆ ಸೀಜ್ ಮಾಡಿದ್ದಾರೆ. ರೈತನ ಮನೆ ಸೀಜ್ ಮಾಡಿದ್ದಕ್ಕೆ ರೈತ ಸಂಘಟನೆಗಳ ಆಕ್ರೋಶ ಹೊರಹಾಕಿವೆ. ಫೈನಾನ್ಸ್ ಮ್ಯಾನೇಜರ್ ದೇವರಾಜ್​​ ಬಡ್ಡಿ ಮತ್ತು ಚಕ್ರಬಡ್ಡಿ ಸೇರಿಸಿ ಮತ್ತೆ 12 ಲಕ್ಷ ರೂ ಸಾಲ ಬಾಕಿ ತೋರಿಸಿದ್ದಾರೆ.

ರೈತನ ಮನೆ ಸೀಜ್​ ಮಾಡಿದ ಅಧಿಕಾರಿಗಳು 

ಮನೆ ಸೀಜ್ ಮಾಡಿರುವ ಕ್ರಮಕ್ಕೆ ರೈತರು ಆಕ್ರೋಶಗೊಂಡಿದ್ದು, 3.90 ಲಕ್ಷ ರೂ. ಹಣ ಕೊಟ್ಟರೆ ಸೀಜ್ ಮಾಡಿರುವ ಮನೆ ಬೀಗ ವಾಪಸ್ ನೀಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಫೈನಾನ್ಸ್​ಗಳ ಬಡ್ಡಿ, ಮೀಟರ್ ಬಡ್ಡಿ ವಿರುದ್ಧ ಸಾಲ ಪಡೆದ ರೈತ ಆಕ್ರೋಶ ಹೊರಹಾಕಿದ್ದಾರೆ. ಮನೆ ಸೀಜ್ ಮಾಡಿದ್ದರಿಂದ ರೈತನು ಸ್ವಂತ ಮನೆ ಬಿಟ್ಟು ಇದೀಗ ಕುಟುಂಬ ಸಮೇತ ಮತ್ತೊಬ್ಬರ ಮನೆ ಸೇರಿದ್ದಾರೆ. ಹೀಗೆ ರೈತರ ಮೇಲೆ ಶೋಷಣೆ ಮಾಡುತ್ತಿರುವ ಫೈನಾನ್ಸ್​ ವಿರುದ್ದ ಸರಕಾರವು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘದ ನಾಯಕ ಕೆ.ಟಿ ಗಂಗಾಧರ್ ಒತ್ತಾಯಿಸಿದ್ದಾರೆ.

ಫೈನಾನ್ಸ್​ನಲ್ಲಿ ಸಾಲ ಪಡೆದುಕೊಂಡಿರುವ ರೈತನು ಸದ್ಯ ಕಂಗಾಲಾಗಿದ್ದಾರೆ. 9 ವರ್ಷ ಇನ್ನೂ 12 ಲಕ್ಷ ರೂಪಾಯಿ ಅಸಲು ಬಡ್ಡಿ ಸೇರಿ ಕಂತು ಕಟ್ಟಬೇಕಂತೆ. ಈ ಕಂತುಗಳು ತುಂಬದೇ ಇದ್ದರೆ ರೈತನ ಆಸ್ತಿಯು ವಾಪಸ್ ಸಿಗುವುದಿಲ್ಲ. ಮನೆ ಸೀಜ್ ಮಾಡಿರುವುದಿರಂದ ರೈತನು ಸದ್ಯ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಫೈನಾನ್ಸ್ ಲಿಖಿತವಾಗಿ ಒಂದು ರೀತಿಯಲ್ಲಿ ವ್ಯವಹರಿಸಿದೆ. ಮೌಖಿಕವಾಗಿ ಮತ್ತೊಂದು ರೀತಿಯಲ್ಲಿ ವರ್ತನೆ ಮಾಡಿದೆ. ಹೀಗಾಗಿ ಫೈನಾನ್ಸ್ ಬಡ ರೈರಿಗೆ ಕೊಟ್ಟಿರುವ ಸಾಲ ವಸೂಲಿ ಈ ರೀತಿಯಾಗಿ ಒನ್ ಟು ಬಡಲ್ ಮಾಡಬಾರದು ಎನ್ನುವುದು ರೈತ ನಾಯಕರ ಮತ್ತು ಮುಖಂಡರ ಒತ್ತಾಯವಾಗಿದೆ.

ಇದನ್ನೂ ಓದಿ: ಎಚ್ಚರ…ಎಚ್ಚರ.. ಸಿಬಿಐ ಅಧಿಕಾರಿ ಸೋಗಿನಲ್ಲಿ ವೃದ್ಧರೊಬ್ಬರಿಗೆ 41 ಲಕ್ಷ ರೂ ವಂಚನೆ

ಫೈನಾನ್ಸ್ ವಿರುದ್ದ ಸದ್ಯ ರೈತರು ಹೋರಾಟ ಆರಂಭಿಸಿದ್ದಾರೆ. ಹನುಮಂತ ನಾಯ್ಕ್ ರೈತನಿಗೆ ನ್ಯಾಯ ಸಿಗಬೇಕಿದೆ. ಈ ಹಿನ್ನಲೆಯಲ್ಲಿ ರೈತ ನಾಯಕರು ಮತ್ತು ಸ್ಥಳೀಯ ರೈತ ಮುಖಂಡರು ಸಾಥ್ ನೀಡಿದ್ದಾರೆ. ಹಿಂದೆ ಮುಂದೆ ನೋಡದೆ ಫೈನಾನ್ಸ್ ನಲ್ಲಿ ಸಾಲ ತೆಗೆದುಕೊಂಡ ರೈತ ಇಕ್ಕಿಟ್ಟಿಗೆ ಸಿಲುಕಿದ್ದಾರೆ. ಅಸಲು ಬಡ್ಡಿ ಅಂದ್ರೆ ರೈತ ತನ್ನ ಜಮೀನು ಮಾರಾಟ ಮಾಡಬೇಕಾಗುತ್ತದೆ. ಸದ್ಯ ಬಡ್ಡಿ ಮತ್ತು ಚಕ್ರಬಡ್ಡಿ ಸಾಲದ ಸುಳಿಯಲ್ಲಿ ಸಿಲುಕಿರುವ ರೈತನ ಮನೆ ಮತ್ತು ರೈತನನ್ನು ಬಚಾವ್ ಮಾಡಲು ಜಿಲ್ಲಾಡಳಿತವು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ