ಜಗಳ ಬಿಡಿಸಲು ಹೋದ ಡಾಬಾ ಮಾಲೀಕನ ಹತ್ಯೆ; ಐವರು ಆರೋಪಿಗಳು ಅರೆಸ್ಟ್

ಎಂ.ಕೆ.ಹುಬ್ಬಳ್ಳಿ ನಿವಾಸಿಗಳಾದ ಅಬ್ದುಲ್ ಅಜೀಜ್ ಬಡೇಗರ, ಮೊಹಮ್ಮದ್ ಶಫಿ ಬಡೇಗರ, ಶಕೀಲ್ ಅಹ್ಮದ್ ಬಡೇಗರ, ಇರ್ಫಾನ್ ಬಡೇಗರ, ಸಾಜಿದ್ ಬಡೇಗರ ಬಂಧಿತರು. ಇನ್ನು ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ.

ಜಗಳ ಬಿಡಿಸಲು ಹೋದ ಡಾಬಾ ಮಾಲೀಕನ ಹತ್ಯೆ; ಐವರು ಆರೋಪಿಗಳು ಅರೆಸ್ಟ್
ಆರೋಪಿಗಳು

ಬೆಳಗಾವಿ: ಜಗಳ ಬಿಡಿಸಲು ಹೋದ ಡಾಬಾ ಮಾಲೀಕನನ್ನು ಕೊಂದಿದ್ದ ಐವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಬಳಿಯ ಪಂಚವಟಿ ಡಾಬಾದಲ್ಲಿ ಕೊಲೆಯಾಗಿತ್ತು. ಈ ಸಂಬಂಧ ಕಿತ್ತೂರು ಠಾಣೆ ಪೊಲೀಸರು ಐವರನ್ನು ಸೆರೆ ಹಿಡಿದಿದ್ದಾರೆ.

ಎಂ.ಕೆ.ಹುಬ್ಬಳ್ಳಿ ನಿವಾಸಿಗಳಾದ ಅಬ್ದುಲ್ ಅಜೀಜ್ ಬಡೇಗರ, ಮೊಹಮ್ಮದ್ ಶಫಿ ಬಡೇಗರ, ಶಕೀಲ್ ಅಹ್ಮದ್ ಬಡೇಗರ, ಇರ್ಫಾನ್ ಬಡೇಗರ, ಸಾಜಿದ್ ಬಡೇಗರ ಬಂಧಿತರು. ಇನ್ನು ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ.

ಜು.11ರಂದು ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಪಂಚವಟಿ ಡಾಬಾದಲ್ಲಿ ಜಗಳ ಬಿಡಿಸಲು ಹೋದ ಡಾಬಾ ಮಾಲೀಕ ಪ್ರಕಾಶ್ ನಾಗನೂರ(38) ಎಂಬುವವರನ್ನು ಹತ್ಯೆ ಮಾಡಲಾಗಿತ್ತು. ಪ್ರಕಾಶ್ ನಾಗನೂರ ಸ್ನೇಹಿತ ಮಂಜು ಶಿಂತ್ರಿ, ಮತ್ತು ಹೂವಿನ ವ್ಯಾಪಾರಿ ಅಜೀಜ್ ಎಂಬಿಬ್ಬರ ಮಧ್ಯೆ 1,500 ರೂಪಾಯಿಗೆ ಪ್ರಕಾಶ್ ಡಾಬಾದಲ್ಲಿ ಜಗಳ ನಡೆದಿತ್ತು.
ತನ್ನ ಡಾಬಾದಲ್ಲಿ ಗೆಳೆಯರಿಬ್ಬರ ಮಧ್ಯೆ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಪ್ರಕಾಶ್ ಮುಂದಾಗಿದ್ದಾರೆ. ಆ ವೇಳೆ ಡಾಬಾ ಮಾಲೀಕ ಪ್ರಕಾಶ್ ಅವರ ಮೇಲೆಯೇ ಹಲ್ಲೆ ನಡೆದಿದೆ. ಅಜೀಜ್, 7 ಹುಡುಗರನ್ನು ಸೇರಿಸಿಕೊಂಡು ಹಲ್ಲೆ ನಡೆಸಿದ್ದ ಎಂದು ತಿಳಿದುಬಂದಿದೆ. ಆರೋಪಿಗಳೆಲ್ಲ ಪ್ರಕಾಶ್ ನಾಗನೂರ ಅವರನ್ನು ಹಿಗ್ಗಾಮುಗ್ಗಾ ಹೊಡೆದು ಪರಾರಿಯಾಗಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಪ್ರಕಾಶ್ ನಾಗನೂರ ಅವರು ಆಸ್ಪತ್ರೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದರು. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿ ಅಜೀಜ್ ಹೂವಿನ ವ್ಯಾಪಾರಿ. ಮಂಜುನಾಥ್‌ಗೆ ಆರೋಪಿ ಅಜೀಜ್ 1500 ರೂ. ಹಣ ನೀಡಬೇಕಿತ್ತು. ಇದೇ ವಿಚಾರಕ್ಕೆ ಡಾಬಾದಲ್ಲಿ ಇಬ್ಬರು ನಡುವೆ ಜಗಳವಾಗಿದೆ. ಜಗಳ ಬಿಡಿಸಲು ಬಂದ ಡಾಬಾ ಮಾಲೀಕ, ಮಂಜುನಾಥನ ಗೆಳೆಯ ಪ್ರಕಾಶ್‌ ಮೇಲೆ ಆರೋಪಿ ಅಜೀಜ್ ಏಳು ಜನ ಹುಡುಗರನ್ನ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದ. ಡಾಬಾದಲ್ಲಿದ್ದ ಜಗ್ಗು, ಚಹಾ ಮಾಡುವ ಪಾತ್ರೆಯಿಂದ ಹಿಗ್ಗಾಮಗ್ಗಾ ಹಲ್ಲೆ ಮಾಡಿದ್ದರು.

ಇದನ್ನೂ ಓದಿ: ಎಂ.ಕೆ.ಹುಬ್ಬಳ್ಳಿಯಲ್ಲಿ ಸ್ನೇಹಿತರ ನಡುವಿನ ಜಗಳ ಬಿಡಿಸಲು ಹೋದ ಡಾಬಾ ಮಾಲೀಕನ ಭೀಕರ ಕೊಲೆ

Click on your DTH Provider to Add TV9 Kannada