ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಶಾಲಾ ಬಾಲಕಿ, ಸ್ಥಳೀಯರಿಂದ ರಕ್ಷಣೆ..
ಅಪ್ರಾಪ್ತ ಬಾಲಕಿಗೆ ಮದುವೆಯಾಗುವಂತೆ ಮದ್ಯವ್ಯಸನಿ ತಂದೆ ಒತ್ತಡ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ್ದು ತೆಪ್ಪ ನಡೆಸುವ ಮಂದಿ ರಕ್ಷಿಸಿದ್ದಾರೆ.
ಮೈಸೂರು: ಜಿಲ್ಲೆಯ ಟಿ.ನರಸೀಪುರದಲ್ಲಿರುವ ಗುಂಜಾನರಸಿಂಹಸ್ವಾಮಿ ದೇಗುಲದ ಬಳಿ ಇರುವ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಚಾಮರಾಜನಗರದ ನಿವಾಸಿಯಾದ್ದ ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
8ನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕಿಗೆ ಮದುವೆಯಾಗುವಂತೆ ಮದ್ಯವ್ಯಸನಿ ತಂದೆ ಒತ್ತಡ ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಮನನೊಂದ ಬಾಲಕಿ ಇಂತಹ ನಿರ್ಧಾರಕ್ಕೆ ಕೈ ಹಾಕಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ್ದಾಳೆ.
ಈ ವೇಳೆ ಅಲ್ಲೇ ಇದ್ದ ತೆಪ್ಪ ನಡೆಸುವವರು ಬಾಲಕಿ ಹಾರಿದನ್ನು ನೋಡಿ ಆಕೆಯ ರಕ್ಷಣೆಗೆ ಮುಂದಾಗಿದ್ದಾರೆ. ಬಳಿಕ ಬಾಲಕಿಯನ್ನ ರಕ್ಷಿಸಿ ಸ್ಥಳೀಯರು .ನರಸೀಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಲಕಿ ಪೋಷಕರನ್ನು ಕರೆಸಿ ಅವರಿಗೆ ಬುದ್ಧಿ ಹೇಳಿ ಕಳಿಸಿದ್ದಾರೆ.
ಆಕೆಯದ್ದು SSLC, ಈತನದ್ದು ಡಿಗ್ರಿ.. ಪ್ರೀತ್ಸೆ ಅಂತಾ ಟಾರ್ಚರ್ ಕೊಟ್ಟು ಬಾಲಕಿಯನ್ನೇ ಬಲಿಪಡೆದ ಕಿರಾತಕ