ಏಕಾಏಕಿ ಮನೆಗೆ ನುಗ್ಗಿದ 9 ದರೋಡೆಕೋರರು.. ಕತ್ತಿಯಿಂದ ಹಲ್ಲೆ ನಡೆಸಿ ಮನೆ ದೋಚಿದ್ರು
ಮುಂಜಾನೆ ವಿ.ಎಚ್.ಪಿ ಮುಖಂಡ ತುಕ್ರಪ್ಪ ಶೆಟ್ಟಿ ಎಂಬುವವರ ಮನೆಗೆ ಏಕಾಏಕಿ ನುಗ್ಗಿದ 9ಜನ ದರೋಡೆಕೋರರು ಮನೆಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಮನೆಯಲ್ಲಿದ್ದ ಅಪಾರ ಪ್ರಮಾಣದ ನಗದು, ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.
ಮಂಗಳೂರು: 9ಜನ ದರೋಡೆಕೋರರು ಮನೆಯವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಸೌತಡ್ಕದಲ್ಲಿ ನಡೆದಿದೆ.
ಮುಂಜಾನೆ ವಿ.ಎಚ್.ಪಿ ಮುಖಂಡ ತುಕ್ರಪ್ಪ ಶೆಟ್ಟಿ ಎಂಬುವವರ ಮನೆಗೆ ಏಕಾಏಕಿ ನುಗ್ಗಿದ 9ಜನ ದರೋಡೆಕೋರರು ಮನೆಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಮನೆಯಲ್ಲಿದ್ದ ಅಪಾರ ಪ್ರಮಾಣದ ನಗದು, ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.
ಈ ವೇಳೆ ತುಕ್ರಪ್ಪ ಶೆಟ್ಟಿ ಪತ್ನಿಗೆ ದರೋಡೆಕೋರರು ಕತ್ತಿಯಿಂದ ಹಲ್ಲೆ ನಡೆಸಿದ್ದು ಗಂಭೀರ ಗಾಯಗಳಾಗಿವೆ. ಸದ್ಯ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತಾಲೂಕಿನಾದ್ಯಂತ ನಾಕಾಬಂದಿ ಹಾಕಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪ್ರೀವೆಡ್ಡಿಂಗ್ ಶೂಟ್ ಅಂತೇಳಿ ಸ್ಕೆಚ್: ಸ್ಫಾಟ್ಗೆ ಬಂದಾಗ ಖಾರಪುಡಿ ಎರಚಿ ದರೋಡೆ!