AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SMK ಕೇಸರೀಕರಣ: RSS ಟೋಪಿ ಧರಿಸಿ ಸಂಘ ಕಾರ್ಯಾಲಯದಲ್ಲಿ ದೇಶಭಕ್ತಿ ಮೇಲೆ ಭಾಷಣ

ಬೆಂಗಳೂರು: ಭಾರತೀಯ ಜನತಾ ಪಕ್ಷವನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತೊಂದಿದೆ; ಭಾ.ಜ.ಪ ಸೇರಿದ ಮಾತ್ರಕ್ಕೆ ಯಾರೂ ಭಾ.ಜ.ಪ ನಾಯಕರಾಗೋಲ್ಲ. ಪಕ್ಷಕ್ಕೆ ತಾಯಿಯಂತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಹತ್ತಿರವಾಗಬೇಕು ಮತ್ತೂ ಅದಕ್ಕೆ ನಿಷ್ಠೆ ತೋರಿಸಬೇಕು. RSS ತತ್ವವನ್ನು ಒಪ್ಪಿಕೊಂಡರೆ ಮಾತ್ರ ಹೊರಗಿನಿಂದ ಬಂದವರನ್ನು ಪಕ್ಷ ಸಂಪೂರ್ಣವಾಗಿ ಸ್ವೀಕರಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ದಸರೆಯ ಸಂಭ್ರಮ ಮಧ್ಯೆ ಅಂತಹ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದೇ ಹೋಯಿತು. ಕಾಂಗ್ರೆಸ್ ಜೊತೆ ತಮ್ಮ ನಂಟನ್ನು ತೊರೆದು ಕೆಲ ವರ್ಷಗಳ ಹಿಂದೆ ಭಾರತೀಯ ಜನತಾ […]

SMK ಕೇಸರೀಕರಣ: RSS ಟೋಪಿ ಧರಿಸಿ ಸಂಘ ಕಾರ್ಯಾಲಯದಲ್ಲಿ ದೇಶಭಕ್ತಿ ಮೇಲೆ ಭಾಷಣ
KUSHAL V
|

Updated on:Oct 26, 2020 | 2:29 PM

Share

ಬೆಂಗಳೂರು: ಭಾರತೀಯ ಜನತಾ ಪಕ್ಷವನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತೊಂದಿದೆ; ಭಾ.ಜ.ಪ ಸೇರಿದ ಮಾತ್ರಕ್ಕೆ ಯಾರೂ ಭಾ.ಜ.ಪ ನಾಯಕರಾಗೋಲ್ಲ. ಪಕ್ಷಕ್ಕೆ ತಾಯಿಯಂತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಹತ್ತಿರವಾಗಬೇಕು ಮತ್ತೂ ಅದಕ್ಕೆ ನಿಷ್ಠೆ ತೋರಿಸಬೇಕು. RSS ತತ್ವವನ್ನು ಒಪ್ಪಿಕೊಂಡರೆ ಮಾತ್ರ ಹೊರಗಿನಿಂದ ಬಂದವರನ್ನು ಪಕ್ಷ ಸಂಪೂರ್ಣವಾಗಿ ಸ್ವೀಕರಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ದಸರೆಯ ಸಂಭ್ರಮ ಮಧ್ಯೆ ಅಂತಹ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದೇ ಹೋಯಿತು. ಕಾಂಗ್ರೆಸ್ ಜೊತೆ ತಮ್ಮ ನಂಟನ್ನು ತೊರೆದು ಕೆಲ ವರ್ಷಗಳ ಹಿಂದೆ ಭಾರತೀಯ ಜನತಾ ಪಕ್ಷವನ್ನು ಸೇರಿದ್ದ ಮಾಜಿ ಮುಖ್ಯಮಂತ್ರಿ SM ಕೃಷ್ಣ ರವಿವಾರ ಸಂಪೂರ್ಣವಾಗಿ ಕೇಸರೀಕರಣಗೊಂಡರು. ರವಿವಾರ ಸದಾಶಿವನಗರದಲ್ಲಿರುವ RSSನ ಬೆಂಗಳೂರು ನಗರ ಉತ್ತರ ವಿಭಾಗದ ಕಾರ್ಯಾಲಯದಲ್ಲಿರುವ ಪತಂಜಲಿ ಯೋಗ ಕೇಂದ್ರಕ್ಕೆ ಹೋಗಿ ದಸರೆಯ ಸಂಭ್ರಮದಲ್ಲಿ ಪಾಲ್ಗೊಂಡರು. ಅಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಟೋಪಿ ಧರಿಸಿದರು. ಆಮೇಲೆ ರಾಜಕೀಯ, ದೇಶಭಕ್ತಿ ಮತ್ತು RSS ಬಗ್ಗೆ ಮಾತನಾಡಿದರು.ಈ ಸಂದರ್ಭದಲ್ಲಿ RSSನ ದಕ್ಷಿಣ ಭಾರತದ ಮುಖಂಡ ಚಂದ್ರಶೇಖರ ಜಹಗೀರದಾರ್ ಸಹ ಹಾಜರಿದ್ದರು.

ಥಟ್ಟನೆ ಯಾರೋ ಹೋಗಿ RSS ಟೋಪಿ ಧರಿಸಿ ಮಾತನಾಡಲು ಸಂಘ ಯಾವಾಗಲೂ ಅವಕಾಶ ನೀಡುವುದಿಲ್ಲ. ಆ ಟೋಪಿ ಧರಿಸಿ ಅಲ್ಲಿ ಮಾತನಾಡಿದರು ಎಂದರೆ ಸಂಪೂರ್ಣವಾಗಿ RSS ಫಿಲಾಸಫಿಯನ್ನು ಒಪ್ಪಿಕೊಂಡಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ.

ಕಟ್ಟಾ ಸಮಾಜವಾದಿಯಾಗಿ ರಾಜಕೀಯ ಪ್ರಾರಂಭಿಸಿದ ಮಾಜಿ ಮುಖ್ಯಮಂತ್ರಿ SM ಕೃಷ್ಣ BJP ಸೇರಿದಾಗಲೇ ಜನರಿಗೆ ಆಶ್ಚರ್ಯವಾಗಿತ್ತು. ಈಗ RSS ಜೊತೆ ತಮ್ಮನ್ನು ಕ್ರಿಯಾತ್ಮಕವಾಗಿ ಗುರುತಿಸಿಕೊಂಡ ಕೃಷ್ಣ, ತಮ್ಮದು ಬರೀ ರಾಜಕೀಯ ಬೂಟಾಟಿಕೆ ಅಲ್ಲ. ತಾನು RSS ತತ್ವವನ್ನು ಒಪ್ಪಿಕೊಂಡು RSS ಜೊತೆಗೂ ನಂಟು ಬೆಳೆಸಬಲ್ಲೆ ಎಂದು ನಿರೂಪಿಸಲು ಹೊರಟಂತಿದೆ. ಮೂಲಗಳ ಪ್ರಕಾರ, ಕೃಷ್ಣ ಈಗಾಗಲೇ ಎರಡು ಅಥವಾ ಮೂರು ಬಾರಿ RSS ಕೇಂದ್ರಸ್ಥಾನವಿರುವ ನಾಗಪುರಕ್ಕೆ ಹೋಗಿ RSS ಮುಖ್ಯಸ್ಥ ಡಾ. ಮೋಹನ ಭಾಗವತರನ್ನು ಭೇಟಿ ಮಾಡಿ ಬಂದಿದ್ದಾರೆ. ಇದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

Published On - 2:19 pm, Mon, 26 October 20

Follow Us
KUSHAL V
KUSHAL V
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ