Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಅವ್ಯವಹಾರ: ಸಿಐಡಿಗೆ ಪತ್ರ ಬರೆದ ಮಾಜಿ ಶಾಸಕ

ಹೊಸದುರ್ಗದ ಮಾಜಿ ಶಾಸಕ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರು ಸಿಐಡಿ ಡೈರೆಕ್ಟರ್ ಜನರಲ್ ಆಪ್ ಪೊಲೀಸ್​ ಅವರಿಗೆ ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು ಪತ್ರ ಬರೆದಿದ್ದಾರೆ.

ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಅವ್ಯವಹಾರ: ಸಿಐಡಿಗೆ ಪತ್ರ ಬರೆದ ಮಾಜಿ ಶಾಸಕ
ಸಿಐಡಿಗೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್
Follow us
ವಿವೇಕ ಬಿರಾದಾರ
|

Updated on: Jun 21, 2023 | 8:12 AM

ಚಿತ್ರದುರ್ಗ: ಭೋವಿ ಅಭಿವೃದ್ಧಿ ನಿಗಮದಲ್ಲಿ (bhovi development corporation) ಕೋಟ್ಯಂತರ ರೂ. ಅವ್ಯವಹಾರವಾಗಿದೆ. ಈ ಹಿಂದಿನ ಸರ್ಕಾರ ಪ್ರಕರಣವನ್ನು ಸಿಐಡಿ (CID) ತನಿಖೆಗೆ ನೀಡಿತ್ತು. ಈಗ ತನಿಖಾಧಿಕಾರಿ ನಾಗರಾಜ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ತನಿಖೆ ಪೂರ್ಣ ಆಗುವವರೆಗೆ ತನಿಖಾಧಿಕಾರಿ ವರ್ಗಾಯಿಸದಂತೆ ಆಗ್ರಹಿಸುತ್ತೇನೆ ಎಂದು ಸಿಐಡಿಗೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ (Goolihatti Shekhar) ಪತ್ರ ಬರೆದಿದ್ದಾರೆ.

ಹೊಸದುರ್ಗದ ಮಾಜಿ ಶಾಸಕ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಸಿಐಡಿ ಡೈರೆಕ್ಟರ್ ಜನರಲ್ ಆಪ್ ಪೊಲೀಸ್​ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತನಿಖಾಧಿಕಾರಿ ವರ್ಗಾವಣೆ ಹಿಂದೆ ದೊಡ್ಡ ವ್ಯಕ್ತಿಗಳ ಕೈವಾಡವಿದೆ. ಈ ಹಿನ್ನೆಲೆ ತನಿಖಾಧಿಕಾರಿಯ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಅಧಿಕಾರ ಮುಗಿದರೂ ಡಾ.ಯತೀಂದ್ರ ಕಾರಿನಲ್ಲಿ ಎಂಎಲ್​ಎ ಸ್ಟಿಕರ್

ಪ್ರಕರಣದಲ್ಲಿ ಮಾಜಿ ಮಂತ್ರಿಗಳು, ಅವರ ಸಿಬ್ಬಂದಿ ಭಾಗಿಯಾಗಿರುವ ಶಂಕೆ ಇದೆ. ಭೋವಿ ನಿಗಮದಲ್ಲಿ ಸೇವೆ ಸಲ್ಲಿಸಿರುವ ಎಂ.ಡಿ ಮತ್ತು ಜಿ.ಎಂ, ನಿರ್ದೇಶಕರು, ಸಮಾಜದ ಗಣ್ಯರು ಅವ್ಯವಹಾರದಲ್ಲಿ ಭಾಗಿಯಾಗಿರುವ ಅನುಮಾನವಿದೆ. ಹೀಗಾಗಿ ಪಾರದರ್ಶಕ ತನಿಖೆ ನಡೆಯಬೇಕೆಂದು ಭೋವಿ ನಿಗಮದ ಮಾಜಿ ಅಧ್ಯಕ್ಷ ಗೂಳಿಹಟ್ಟಿ ಶೇಖರ್ ಆಗ್ರಹಿಸಿದ್ದಾರೆ.

ಎಸಿಬಿ ದಾಳಿ

2022ರ ಎಪ್ರಿಲ್​​ನಲ್ಲಿ ರಾಜ್ಯದ ಭೋವಿ ಅಭಿವೃದ್ಧಿ ನಿಗಮ ಹಾಗೂ ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದರು. ಪ್ರಾಧಿಕಾರದ ಕೆಲವೊಂದು ವ್ಯವಹಾರದ ಸಂಬಂಧ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬಂದಿದ್ದವು. ಭೋವಿ ಅಭಿವೃದ್ಧಿ ನಿಗಮದ ಎಂಡಿ ಲೀಲಾವತಿ ಹಾಗೂ ಜಿಎಂ ನಾಗರಾಜ್ ವಿರುದ್ಧ ದೂರುಗಳು ಕೇಳಿ ಬಂದಿದ್ದವು.

ಈ ಬಗ್ಗೆ ಬೆಂಗಳೂರು ನಗರ ಎಸಿಬಿ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿತ್ತು. ಈ ಹಿನ್ನೆಲೆ ಭೋವಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಲೀಲಾವತಿ ಹಾಗೂ ನಾಗರಾಜ್ ಕಚೇರಿ ಹಾಗೂ ಇಬ್ಬರ ಮನೆಗಳ ಮೇಲೆ‌ ದಾಳಿ ಮಾಡಿ ಎಸಿಬಿ ಅಧಿಕಾರಿಗಳು ಕಡತಗಳ ಪರಿಶೀಲನೆ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ