AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಜಪಾನ್, ಚೀನಾ ಪ್ರವಾಸಕ್ಕೆ ಹೆಚ್​​​​ಡಿ ದೇವೇಗೌಡ ಮೆಚ್ಚುಗೆ: ಪತ್ರದಲ್ಲೇನಿದೆ?

ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿಯವರ ಜಪಾನ್ ಮತ್ತು ಚೀನಾ ಪ್ರವಾಸಗಳನ್ನು ಮೆಚ್ಚಿಕೊಂಡಿದ್ದಾರೆ. ಈ ಕುರಿತಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಅಮೆರಿಕ ಹೇರುತ್ತಿರುವ ಸುಂಕಕ್ಕೆ ಪರ್ಯಾಯ ಮಾರ್ಗ ಸೇರಿದಂತೆ ರಷ್ಯಾ, ಚೀನಾದೊಂಗಿನ ಸಂಬಂಧಗಳನ್ನು ಬಲಪಡಿಸುವ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

ಪ್ರಧಾನಿ ಮೋದಿ ಜಪಾನ್, ಚೀನಾ ಪ್ರವಾಸಕ್ಕೆ ಹೆಚ್​​​​ಡಿ ದೇವೇಗೌಡ ಮೆಚ್ಚುಗೆ: ಪತ್ರದಲ್ಲೇನಿದೆ?
ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ
Sunil MH
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 03, 2025 | 4:50 PM

Share

ಬೆಂಗಳೂರು, ಸೆಪ್ಟೆಂಬರ್​ 03: ಚೀನಾದ ಟಿಯಾಂಜಿನ್​ನಲ್ಲಿ ನಡೆದ ಎಸ್​ಸಿಒ ಶೃಂಗಸಭೆ ಸಾಕಷ್ಟು ಕುತೂಹಲಕಾರಿ ಘಟನೆಗಳಿಗೆ ಸಾಕ್ಷಿಯಾಗಿದೆ. ಭಾರತ, ಚೀನಾ, ರಷ್ಯಾ ದೇಶಗಳ ಸಮಾಗಮಕ್ಕೆ ವೇದಿಕೆಯಾಗಿದೆ. ಇತ್ತ ಜಪಾನ್, ಚೀನಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಗೆ  (Narendra Modi) ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡ (HD Deve Gowda) ಪತ್ರ ಬರೆಯುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೆಚ್​​.ಡಿ ದೇವೇಗೌಡ ಬರೆದ ಪತ್ರದಲ್ಲೇನಿದೆ?

ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಚೀನಾ ಪ್ರವಾಸವನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಭಾರತದ ಮೇಲೆ ಅಮೆರಿಕ ಹೇರುತ್ತಿರುವ ಸುಂಕ ಯುದ್ಧಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳುತ್ತಿದ್ದಿರಿ. ಹೀಗಾಗಿ ನಿಮ್ಮ ಮೇಲೆ ಭಾರತದ ಲಕ್ಷಾಂತರ ಜನ ವಿಶ್ವಾಸವಿಟ್ಟಿದ್ದಾರೆ.

ಇದನ್ನೂ ಓದಿ
Image
ಟ್ರಂಪ್ ನಿದ್ರೆಗೆಡಿಸಿದ ಚೀನಾ, ರಷ್ಯಾದ ಅಧ್ಯಕ್ಷರ ಜೊತೆಗಿನ ಮೋದಿಯ ವಿಡಿಯೋ
Image
ಉಕ್ರೇನ್ ಸಂಘರ್ಷ ಬೇಗ ಕೊನೆಗೊಳ್ಳಲಿ; ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ
Image
ಮೋದಿ, ಪುಟಿನ್ ಸ್ನೇಹ; ಪ್ರೇಕ್ಷಕನಾಗಿ ನಿಂತು ನೋಡುತ್ತಿರುವ ಷರೀಫ್
Image
ರಷ್ಯಾದಿಂದ ಭಾರತ ತೈಲ ಖರೀದಿ, ಬ್ರಾಹ್ಮಣರಿಗೆ ಲಾಭ: ಟ್ರಂಪ್ ಸಲಹೆಗಾರ ಹೇಳಿಕೆ

ಹೆಚ್​​.ಡಿ ದೇವೇಗೌಡ ಟ್ವೀಟ್​

ರಷ್ಯಾ, ಚೀನಾ ಅಧ್ಯಕ್ಷರ ಜತೆ ನಿಮ್ಮ ಸ್ನೇಹ ಜಗತ್ತಿಗೆ ಹೊಸ ಸಂದೇಶ ನೀಡಿದೆ. ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ನೀವು ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಿದ್ದಕ್ಕೆ ನನಗೆ ಸಂತೋಷವಾಗಿದೆ. ನೀವು ಅನುಸರಿಸುತ್ತಿರುವ ನೀತಿಗಳು ಸಮೃದ್ಧ ಭಾರತ ನಿರ್ಮಾಣಕ್ಕೆ ಸಹಕಾರ ಆಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ಕಾರಿನಲ್ಲಿ ಹೋಗಲು 10 ನಿಮಿಷ ಕಾದ ಪುಟಿನ್; ಟ್ರೆಂಡ್ ಆಯ್ತು ಫೋಟೋ

ಧರ್ಮ ನಮ್ಮ ಕಡೆಗಿದೆ ಮತ್ತು ನಮ್ಮ ರಾಷ್ಟ್ರವು ಜಗತ್ತಿನಲ್ಲಿ ಬೇರೆಲ್ಲಿಯೂ ಇಲ್ಲದಷ್ಟು ಆರ್ಥಿಕ, ಜನಸಂಖ್ಯಾ ಮತ್ತು ಪ್ರಜಾಪ್ರಭುತ್ವದ ಪ್ರಯೋಜನಗಳ ಸಂಯೋಜನೆಯನ್ನು ನೀಡುವುದರಿಂದ ಅಮೆರಿಕ ಕೂಡ ಬೇಗ ಅದನ್ನು ಸರಿಪಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಅಧ್ಯಕ್ಷ ಪುಟಿನ್ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ನಿಮ್ಮ ಛಾಯಾಚಿತ್ರಗಳು ಮತ್ತು ವಿಡಿಯೋಗಳು ಜಗತ್ತಿನಾದ್ಯಂತ ಮಾಧ್ಯಮಗಳಲ್ಲಿ ತುಂಬಿ ತುಳುಕುತ್ತಿದ್ದು, ರಾಷ್ಟ್ರಗಳ ಮುಖ್ಯಸ್ಥರ ನಡುವಿನ ಸ್ನೇಹವನ್ನು ಮೀರುಸುತ್ತದೆ. ಇದು ಹೊಸ ಜಾಗೃತಿಯನ್ನು ಮತ್ತು ಬಹುಶಃ ಭಾರತವನ್ನು ಜಾಗತಿಕ ಸಮೃದ್ಧಿ ಮತ್ತು ಶಾಂತಿಯ ಮಧ್ಯದಲ್ಲಿ ಇರಿಸುವ ಹೊಸ ವಿಶ್ವ ಕ್ರಮದ ಆರಂಭವನ್ನು ಸಂಕೇತಿಸುತ್ತದೆ.

ಇದನ್ನೂ ಓದಿ: ಉಕ್ರೇನ್ ಸಂಘರ್ಷ ಬೇಗ ಕೊನೆಗೊಳ್ಳಲಿ; ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ

ಭಾರತದ ಮುಂದಿರುವ ಸವಾಲನ್ನು ಯಾವುದೇ ಮೂಲ ಮೌಲ್ಯಗಳನ್ನು ತ್ಯಾಗ ಮಾಡದೆ, ಅವಕಾಶವನ್ನಾಗಿ ಪರಿವರ್ತಿಸಲು ನೀವು ದೃಢನಿಶ್ಚಯ ಮಾಡಿದ್ದೀರಿ ಎಂದು ತಿಳಿದು ನನಗೆ ಸಂತೋಷವಾಗಿದೆ. ದೇವರು ನಿಮಗೆ ಹೆಚ್ಚಿನ ಶಕ್ತಿ ಮತ್ತು ಉತ್ತಮ ಆರೋಗ್ಯವನ್ನು ನೀಡಲಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:47 pm, Wed, 3 September 25