ಸಿಎಂ ಕಚೇರಿಯ ಟಿಪ್ಪಣಿ ನಕಲು ಮಾಡಿ ವಂಚನೆ: ಆರೋಪಿ ಬಂಧನ

ಮುಖ್ಯಮಂತ್ರಿಗಳ ಕಚೇರಿಯ ಟಿಪ್ಪಣಿ ನಕಲು ಮಾಡಿ ವಂಚಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾವೇರಿಯ ರಾಘವೇಂದ್ರ ಎಂಬಾತನನ್ನು ಬಂಧಿಸಲಾಗಿದೆ. ಕೆಎಎಸ್ ಅಧಿಕಾರಿಯ ನೇಮಕಾತಿಗಾಗಿ ನಕಲಿ ಟಿಪ್ಪಣಿ ಸೃಷ್ಟಿಸಿ ವಂಚಿಸಿದ ಆರೋಪವಿದೆ. ಆರೋಪಿ ಹಲವು ಶಾಸಕರ ಪಿಎ ಆಗಿ ಕೆಲಸ ಮಾಡಿದ್ದ ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ಸಿಎಂ ಕಚೇರಿಯ ಟಿಪ್ಪಣಿ ನಕಲು ಮಾಡಿ ವಂಚನೆ: ಆರೋಪಿ ಬಂಧನ
ಆರೋಪಿ ರಾಘವೇಂದ್ರ
Edited By: ವಿವೇಕ ಬಿರಾದಾರ

Updated on: Feb 16, 2025 | 8:35 AM

ಬೆಂಗಳೂರು, ಫೆಬ್ರವರಿ 16: ಮುಖ್ಯಮಂತ್ರಿಗಳ ಕಚೇರಿಯ (CM Office) ಟಿಪ್ಪಣಿ ನಕಲು ಮಾಡಿ ವಂಚಿಸಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ಮೂಲದ ರಾಘವೇಂದ್ರ ಬಂಧಿತ ಆರೀಪಿ. ಕೆಎಎಸ್​ ಅಧಿಕಾರಿಯೊಬ್ಬರಿಗೆ ಪೋಸ್ಟಿಂಗ್ ನೀಡುವಂತೆ ಆರೋಪಿ ರಾಘವೇಂದ್ರ, ಮುಖ್ಯಮತ್ರಿಗಳ ಕಚೇರಿ ಹೆಸರಿನಲ್ಲಿ ನಕಲಿ ಟಿಪ್ಪಣಿ ಸೃಷ್ಟಿಸಿದ್ದನು. ಈ ಬಗ್ಗೆ ವಿಧಾನಸೌಧದ ಸಚಿವಾಲಯ ದೂರು ನೀಡಿತ್ತು.
ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ವಿಧಾನಸೌಧ ಠಾಣೆ ಪೊಲೀಸರು ಆರೋಪಿ ರಾಘವೇಂದ್ರನನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿ ರಾಘವೇಂದ್ರ ಈ ಹಿಂದೆ ಹಲವು ಶಾಸಕರ ಬಳಿ ಪಿಎ ಆಗಿ ಕೆಲಸ ಮಾಡಿದ್ದನು ಎಂದು ತಿಳಿದುಬಂದಿದೆ. ಆರೋಪಿ ರಾಘ್ರವೇಂದ್ರ ವಿರುದ್ಧ ಪೋಸ್ಟಿಂಗ್ ಕೊಡಿಸೋದಾಗಿ ಹಣ ಪಡೆದು ವಂಚಿಸಿದ ಆರೋಪವೂ ಕೇಳಿಬಂದಿದೆ. ಸದ್ಯ ಪೊಲೀಸರು ಆರೋಪಿ ರಾಘವೇಂದ್ರನನ್ನ ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us