Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ನಟೋರಿಯಸ್ ದರೋಡೆಕೋರನ ಮೇಲೆ ಫೈರಿಂಗ್​​

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಮತ್ತು ಡೋಣಿ ಗ್ರಾಮದ ಬಳಿ ಮೋಸ್ಟ್ ವಾಟೆಂಡ್ ನಟೋರಿಯಸ್ ದರೋಡೆಕೋರನ ಮೇಲೆ ಗದಗ ಪೊಲೀಸರಿಂದ ಫೈರಿಂಗ್ ಮಾಡಿ, ಬಂಧಿಸಿರುವಂತಹ ಘಟನೆ ನಡೆದಿದೆ. ತಪ್ಪುಸಿಕೊಂಡು ಓಡಾಡುತ್ತಿದ್ದವನನ್ನು ನಿನ್ನೆ ಬಂಧಿಸಿ ಠಾಣೆಗೆ ಕರೆದುಕೊಂಡು ಬರುವಾದ ದಾರಿ ಮಧ್ಯೆ ತಪ್ಪಿಸಿಕೊಳ್ಳು ಯತ್ನಿಸಿದ್ದಾಗ ಫೈರ್ ಮಾಡಲಾಗಿದೆ.

ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ನಟೋರಿಯಸ್ ದರೋಡೆಕೋರನ ಮೇಲೆ ಫೈರಿಂಗ್​​
ಫೈರಿಂಗ್​ ಮಾಡಿದ ಸ್ಥಳದಲ್ಲಿ ಪರಿಶೀಲನೆ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on: Mar 31, 2025 | 1:13 PM

ಗದಗ, ಮಾರ್ಚ್​ 31: ಹಲ್ಲೆ ಮಾಡಿ ಪಾರಾರಿಯಾಗಲು ಆಗಲು ಯತ್ನಿಸಿದ ನಟೋರಿಯಸ್ (Notorious) ದರೋಡೆಕೋರನ ಮೇಲೆ ಪೊಲೀಸರು​ ಫೈರಿಂಗ್ (firing)​ ಮಾಡಿರುವಂತಹ ಘಟನೆ ​​ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಮತ್ತು ಡೋಣಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಬರುವಾಗ ಘಟನೆ ನಡೆದಿದೆ. ನಟೋರಿಯಸ್ ಆರೋಪಿ ಜಯಸಿಂಹ ಮೊಡಕೆರ್ ಕಾಲಿಗೆ ಗುಂಡೇಟು ಬಿದ್ದಿದೆ. ಈ ವೇಳೆ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿದ್ದು, ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಆರೋಪಿಗಳಾದ ಜಯಸಿಂಹ ಮೊಡಕೆರ್, ಮಂಜುನಾಥ ಮೊಡಕೆರ್ ರಾಜ್ಯ ಮತ್ತು ಅಂತಾರಾಜ್ಯ ಪೊಲೀಸರಿಗೆ ಬೇಕಾಗಿದ್ದ ದರೋಡೆಕೋರರು. ಇನ್​ಸ್ಟಾಗ್ರಾಂ ಮೂಲಕ ಸಂಪರ್ಕ ಹೊಂದಿದ್ದ ಜಯಸಿಂಹ ಗ್ಯಾಂಗ್,​​​​​ ಹೀಗಾಗಿ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನುಸುತ್ತಿದ್ದರು. ಆದರೆ ಕೊನೆಗೂ ಗದಗ ಪೊಲೀಸರ ಬಲೆಗೆ ಬಿದಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಯುಗಾದಿಯಂದೇ ದುರಂತಗಳ ಸಾಲು: 8 ಜನರು ದುರ್ಮರಣ, ಕಣ್ಣೀರಿಟ್ಟ ಸಂಬಂಧಿಕರು

ಇದನ್ನೂ ಓದಿ
Image
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
Image
ಇಂದು ಚಾಮರಾಜಪೇಟೆ, ಮೈಸೂರು ರಸ್ತೆಗಳಲ್ಲಿ ಸಂಚರಿಸುವವರು ಗಮನಿಸಿ
Image
ರಂಜಾನ್​ ಹಬ್ಬ: ಮಾ.31 ರಂದು ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ
Image
ಯುಗಾದಿ ಹಬ್ಬದಂದು ಕರ್ನಾಟಕದಲ್ಲಿ ಜಲ ಗಂಡಾಂತರ: ಐವರು ನೀರುಪಾಲು

ನಿನ್ನೆ ವಿಜಯನಗರ ಜಿಲ್ಲೆಯ ಬಳಿ ಜಯಸಿಂಹನನ್ನು ವಶಕ್ಕೆ ಪಡೆಯಲಾಗಿತ್ತು. ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿರುವಾಗ ಪೊಲೀಸ್ ವಾಹನದಲ್ಲಿ ಕೈಗೆ ಹಾಕಿದ್ದ ಬೇಡಿಯಿಂದ ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ್ದಾರೆ. ಈ ವೇಳೆ ಸಿಪಿಐ ಮಂಜುನಾಥ ಕುಸುಗಲ್​​​ರಿಂದ ಆರೋಪಿ ಜಯಸಿಂಹ ಕಾಲಿಗೆ ಗುಂಡು ಹಾರಿಸಿ ಬಂಧಿಸಿದರು.

ಮನೆ ಕಳ್ಳತನ, ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಈ ನಟೋರಿಯಸ್ ದರೋಡೆಕೋರರು ಭಾಗಿಯಾಗಿದ್ದರು. ಇತ್ತ ಆಸ್ಪತ್ರೆಗೆ ಭೇಟಿ ನೀಡಿದ ಗದಗ ಎಸ್​ಪಿ ಬಿಎಸ್ ನೇಮಗೌಡ, ಆರೋಪಿ ಜಯಸಿಂಹ ಮೊಡಕೆರ್ ಹಾಗೂ ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿ ಆರೋಗ್ಯ ವಿಚಾರಿಸಿದ್ದಾರೆ.

ಪೊಲೀಸ್ ಫೈರಿಂಗ್ ತರಬೇತಿ ವೇಳೆ ಮಿಸ್​ ಫೈರ್: ಮಹಿಳೆಗೆ ತಗುಲಿದ ಗುಂಡು

ಪೊಲೀಸ್ ಫೈರಿಂಗ್ ತರಬೇತಿ ಸಮಯದಲ್ಲಿ ಅವಘಡ ನಡೆದಿದ್ದ ಘಟನೆ ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ನೆಡದಿತ್ತು. ಜಿಲ್ಲೆಯ ಗಂಗಾವತಿ ತಾಲೂಕಿನ ಜಬ್ಬಲಗುಡ್ಡ ಬಳಿ, ಬಡ್ತಿ ಹೊಂದಿರುವ ಎಎಸ್​ಐಗಳಿಗೆ ಪಿಸ್ತೂಲ್ ಫೈರಿಂಗ್ ತರಬೇತಿ ನೀಡಲಾಗುತ್ತಿತ್ತು.

ಇದನ್ನೂ ಓದಿ: ಎಣ್ಣೆ ಪಾರ್ಟಿ ಮಾಡ್ತಿದ್ದಾಗಲೇ ಕೊಚ್ಚಿ ಕೊಂದ ಹಂತಕರು: ಯುಗಾದಿಯಂದೇ ಹೆಣವಾದ ಕುಖ್ಯಾತ ರೌಡಿಶೀಟರ್​​

ಈ ಸಮಯದಲ್ಲಿ ಮಿಸ್​ ಫೈರ್​ ಆದ ಗುಂಡು, ಸಮೀಪದಲ್ಲಿಯೇ ಕುರಿ ಮೇಯಿಸುತ್ತಿದ್ದ ಮಹಿಳೆಯ ತೋಳಿಗೆ ತಗುಲಿತ್ತು. ಜಬ್ಬಲಗುಡ್ಡದ ರೇಣುಕಮ್ಮ ಎನ್ನುವವರಿಗೆ ಗಾಯವಾಗಿತ್ತು. ಬಳಿಕ ಗಾಯಗೊಂಡ ರೇಣುಕಮ್ಮಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.