ಗದಗ: ಕಾಣೆಯಾಗಿದ್ದ ಮಹಿಳೆ ಗ್ರಾಮದ ಬಾವಿಯಲ್ಲಿ 3 ದಿನದ ಬಳಿಕ ಪತ್ತೆ!

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ತೋಟಗಂಟಿ ಗ್ರಾಮದಲ್ಲಿ ವಿಚಿತ್ರ ಘಟನೆ ನಡೆದಿದೆ. ಈ ಘಟನೆಯಿಂದ ಗ್ರಾಮಸ್ಥರು ಅಚ್ಚರಿ ಮತ್ತು ಭಯಭೀತರಾಗಿದ್ದಾರೆ. ನಸುಕಿನ ಜಾವ ಮನೆ ಅಂಗಳದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಏಕಾಏಕಿ ಕಾಣೆಯಾಗಿ, ಮೂರು ದಿನದ ಬಳಿಕ ನೀರಿಲ್ಲ ಬಾವಿಯಲ್ಲಿ ಪತ್ತೆಯಾಗಿದ್ದಾಳೆ.

Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ವಿವೇಕ ಬಿರಾದಾರ

Updated on:Aug 30, 2024 | 1:03 PM

ಗದಗ, ಆಗಸ್ಟ್​ 30: ಕಾಣೆಯಾಗಿದ್ದ ಮಹಿಳೆ (Woman) ಮೂರು ದಿನದ ಬಳಿಕ ಬಾವಿಯಲ್ಲಿ (Well) ಪತ್ತೆಯಾದ ಘಟನೆ ಗಜೇಂದ್ರಗಡ (Gajendragad) ತಾಲೂಕಿನ ತೋಟಗಂಟಿ ಗ್ರಾಮದಲ್ಲಿ ನಡೆದಿದೆ. ಪಾರ್ವತಿ (23) ಕಾಣೆಯಾಗಿದ್ದ ಸಂತ್ರಸ್ತೆ. ಪಾರ್ವತಿ ಬಾವಿಯಲ್ಲಿ ಬದುಕಿದ್ದೇ ಪವಾಡ ಎಂದು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸದ್ಯ ಪಾರ್ವತಿಯವರಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರು ತಿಂಗಳ ಹಿಂದಷ್ಟೇ ಪಾರ್ವತಿಯ ಮದುವೆಯಾಗಿದೆ. ಆಗಸ್ಟ್‌ 20 ರಂದು ನಸುಕಿನ ಜಾವ ಮನೆಯ ಅಂಗಳದಲ್ಲಿ ಪಾರ್ವತಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ಮಹಿಳೆ, ಏಕಾಏಕಿ ಪಾರ್ವತಿಯವರ ಕುತ್ತಿಗೆ ಹಿಡಿದು ಮನೆ ಬಿಟ್ಟು ಬರುವಂತೆ ಬಲವಂತ ಮಾಡಿದ್ದಾಳೆ. ಅಲ್ಲದೆ, ಕೈ ಬಳೆ, ಕಾಲುಂಗರ ನೀಡುವಂತೆ ಒತ್ತಾಯ ಮಾಡಿದ್ದಾಳೆ. ಬಳಿಕ ಪಾರ್ವತಿ ಅವರ ಕಣ್ಣು ಕಾಣದಂತೆ ಮರೆ ಮಾಡಿ ಕುತ್ತಿಗೆ ಹಿಡಿದು ಎಳೆದುಕೊಡು ಹೋಗಿದ್ದಾಳೆ. ನಂತರ ತಾಳಿ ಕೊಡುವಂತೆ ಕೇಳಿ, ನೀರಿಲ್ಲದ ಬಾವಿಗೆ ತಳ್ಳಿ ಪರಾರಿಯಾಗಿದ್ದಾಳೆ.

ಇದನ್ನೂ ಓದಿ: 14 ವರ್ಷಗಳಿಂದ ಅತಂತ್ರ ಜೀವನ ನಡೆಸುತ್ತಿರೋ ಗೊಮ್ಮಗೋಳ ಗ್ರಾಮಸ್ಥರು

ಘಟನೆ ಸಂಬಂಧ ಸಂತ್ರಸ್ತೆ ಪಾರ್ವತಿ ಮಾತನಾಡಿ, ಕುತ್ತಿಗೆ ಹಿಡಿದು ಮನೆಯ ಅಂಗಳದಿಂದ ನನ್ನನ್ನು ಎಳೆದುಕೊಂಡು ಹೋದಳು. ನಂತರ ತಾಳಿ ಕೇಳಿ ನನ್ನನ್ನು ಬಾವಿಗೆ ತಳ್ಳಿದಳು. ಬಾವಿಗೆ ಬಿದ್ದ ಮರುದಿನ ನನಗೆ ಪ್ರಜ್ಞೆ ಬಂತು. ಆಗ ಕಿರುಚಿದರು ಸಹಾಯಕ್ಕೆ ಯಾರು ಬರಲಿಲ್ಲ. ಆಗಸ್ಟ್​​ 22 ರಂದು ನನ್ನ ಧ್ವನಿ ಕೇಳಿ ಜನರು ಕಾಪಾಡಿದರು. ಆದರೆ, ಯಾರು ನನನ್ನು ಎಳೆದುಕೊಂಡು ಹೋದರು ಎಂಬ ನಿಖರ ಮಾಹಿತಿ ಗೊತ್ತಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:47 pm, Fri, 30 August 24