AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಬಿಫೈ ಹಾಗೂ ಸಿಇಐಆರ್ ತಂತ್ರಜ್ಞಾನದಿಂದ 2 ತಿಂಗಳಲ್ಲಿ ಬರೋಬ್ಬರಿ 40 ಲಕ್ಷ ಮೌಲ್ಯದ 360 ಮೊಬೈಲ್ ಪತ್ತೆ ಮಾಡಿದ ಗದಗ ಪೊಲೀಸರು

ಜಿಲ್ಲಾ ಪೋಲಿಸರಿಂದ ಭರ್ಜರಿ ಕಾರ್ಯಾಚರಣೆ ಮಾಡಲಾಗಿದ್ದು, ಹೊಸ ಮೋಬಿಫೈ(MobiFi) ಹಾಗೂ ಸಿಇಐಆರ್​(CEIR) ತಂತ್ರಜ್ಞಾನ ಅಳವಡಿಸಿ ಕಳ್ಳತನ ಅಥವಾ ಕಳೆದುಕೊಂಡ ಮೊಬೈಲ್​ಗಳ ಪತ್ತೆ ಮಾಡಲಾಗಿದ್ದು, ಬರೊಬ್ಬರಿ 40 ಲಕ್ಷದ ಮೊಬೈಲ್​ನ್ನು ಪತ್ತೆ ಹಚ್ಚಿ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.

ಮೋಬಿಫೈ ಹಾಗೂ ಸಿಇಐಆರ್ ತಂತ್ರಜ್ಞಾನದಿಂದ 2 ತಿಂಗಳಲ್ಲಿ ಬರೋಬ್ಬರಿ 40 ಲಕ್ಷ ಮೌಲ್ಯದ 360 ಮೊಬೈಲ್ ಪತ್ತೆ ಮಾಡಿದ ಗದಗ ಪೊಲೀಸರು
ಸಾಂದರ್ಭಿಕ ಚಿತ್ರ
ಕಿರಣ್ ಹನುಮಂತ್​ ಮಾದಾರ್
|

Updated on:Mar 06, 2023 | 2:03 PM

Share

ಗದಗ: ಜಿಲ್ಲಾ ಪೋಲಿಸರಿಂದ ಭರ್ಜರಿ ಕಾರ್ಯಾಚರಣೆ ಮಾಡಲಾಗಿದ್ದು, ಹೊಸ ಮೋಬಿಫೈ(MobiFi) ಹಾಗೂ ಸಿಇಐಆರ್​(CEIR) ತಂತ್ರಜ್ಞಾನ ಅಳವಡಿಸಿ ಕಳ್ಳತನ ಅಥವಾ ಕಳೆದುಕೊಂಡ ಮೊಬೈಲ್​ಗಳ ಪತ್ತೆ ಮಾಡಲಾಗಿದ್ದು, ಕಳೆದ ಎರಡ್ಮೂರು ತಿಂಗಳಲ್ಲಿ ಬರೊಬ್ಬರಿ 40 ಲಕ್ಷ ಮೌಲ್ಯದ 360 ಮೊಬೈಲ್ ಪತ್ತೆ ಮಾಡಿ, ಅದರ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಮೋಬಿಫೈ ತಂತ್ರಜ್ಞಾನದಲ್ಲಿ 92 ಮೊಬೈಲ್ ಹಾಗೂ ಸಿಇಐಆರ್ ತಂತ್ರಜ್ಞಾನದಿಂದ 24 ಮೊಬೈಲ್​ ಪತ್ತೆ ಹಚ್ಚಲಾಗಿದೆ ಎಂದು ಗದಗ ಎಸ್ಪಿ ಬಿ.ಎಸ್​.ನೇಮಗೌಡ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

 ಮೋಬಿಫೈ(MobiFi) 

ಕಂಪ್ಲೆಂಟ್, ಟ್ರಾಕಿಂಗ್, ಬ್ಲಾಕಿಂಗ್ ಎಂಬ ಮೂರು ಅಂಶಗಳನ್ನಿಟ್ಟುಕೊಂಡು ಕಳೆದ ಹೋದ ಮೊಬೈಲ್​ಗಳ ಪತ್ತೆ ಮಾಡಲು ಮೋಬಿಫೈ ( MobiFI) ಎಂಬ ವಿನೂತನ ತಂತ್ರಾಂಶದ ಕೇಂದ್ರಿಕೃತ ವ್ಯವಸ್ಥೆಯನ್ನ ಪ್ರಾರಂಭಿಸಲಾಗಿದೆ. ಈ ತಂತ್ರಾಂಶದ ಮೂಲಕ ಕಳೆದು ಹೋದ ಮೊಬೈಲ್​ಗಳನ್ನ ಹುಡುಕಲು ಬೆರಳ ತುದಿಯಲ್ಲೆ ದೂರನ್ನ ನೀಡಬಹುದಾಗಿದೆ. 8277969900 ಸಂಖ್ಯೆಗೆ Hi ಅಂತಾ ಸಂದೇಶ ಕಳಿಸುವ ಮೂಲಕ ಅಥವಾ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಮೋಬಿಫೈ( MobiFi) ಬಳಕೆ ಮಾಡಬಹುದು. ಈ ಮೂಲಕ ತಮ್ಮ ಮಾಹಿತಿಯನ್ನ ದಾಖಲಿಸುವ ಮೂಲಕ ಮೊಬೈಲ್ ಕಳೆದು ಹೋದ ಬಗ್ಗೆ ದೂರು ನೀಡಬಹುದಾಗಿದೆ. ಈ ತಂತ್ರಜ್ಞಾನದ ಮೂಲಕ ಸುಲಭವಾಗಿ ಕಳೆದು ಹೋದ ಮೊಬೈಲ್​ನ್ನು ಪತ್ತೆ ಮಾಡಬಹುದಾಗಿದೆ. ಒಂದು ವೇಳೆ ಮೊಬೈಲ್ ಸಿಗದಿದ್ದರೆ ಶಾಶ್ವತವಾಗಿ ಬ್ಲಾಕ್ ಮಾಡುವ ವ್ಯವಸ್ಥೆಯನ್ನ ಸಹ ಮಾಡಲಾಗಿದೆ.

ಇದನ್ನೂ ಓದಿ:ಗದಗ: ಬೇಕಾಬಿಟ್ಟಿ ಲೆಕ್ಕ ಬರೆದು ಲಕ್ಷ ಲಕ್ಷ ಹಣ ಲೂಟಿ; ಅಧಿಕಾರಿಯನ್ನ ಕಚೇರಿ ಒಳಗಡೆ ಬಿಡದೇ ವಾಪಸ್ ಕಳುಹಿಸಿದ ಜನ

ಸಿಇಐಆರ್​(CEIR)

ಕಳೆದು ಹೋದ ಮೊಬೈಲ್‌ನ ಐಎಂಇಐ(IMEI) ನಂಬರ್‌ ಆಧರಿಸಿ ಮೊಬೈಲ್‌ ಪತ್ತೆ ಹಚ್ಚುವ, ಮೊಬೈಲ್‌ ಬಳಕೆ ಆಗದಂತೆ ಬ್ಲಾಕ್‌ ಮಾಡುವ ತಂತ್ರಜ್ಞಾನದ ಅವಕಾಶವನ್ನು ಸಿಇಐಆರ್‌ ಯೋಜನೆ ಒಳಗೊಂಡಿದೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಸಿಇಐಆರ್​ನ್ನು ಅಭಿವೃದ್ಧಿಪಡಿಸಿದೆ. ಮೊಬೈಲ್‌ ಕಳ್ಳತನವಾದರೆ ಐಎಂಇಐ ನಂಬರ್‌ ಸಹಿತ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್‌ ಅಥವಾ ಇ-ಲಾಸ್ಟ್‌ ರಿಪೋರ್ಟ್‌ ಪ್ರತಿಯನ್ನು ಸಲ್ಲಿಸಿದರೆ ಅದನ್ನು ಪಡೆದು ಕಮಾಂಡ್‌ ಸೆಂಟರ್‌ನಿಂದ ಸಿಇಐಆರ್‌ ವೆಬ್‌ಸೈಟ್‌ನಲ್ಲಿ ಮೊಬೈಲ್‌ ಬ್ಲಾಕ್‌ ಮಾಡಲಾಗುತ್ತದೆ. ಒಮ್ಮೆ ಮೊಬೈಲ್‌ ಬ್ಲಾಕ್‌ ಮಾಡಿದ ಬಳಿಕ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ. ಹೊಸ ಸಿಮ್‌ ಹಾಕಿದ ಕೂಡಲೇ ಪೊಲೀಸರಿಗೆ ಅಲರ್ಟ್‌ ಮೆಸೇಜ್‌ ಸಿಗಲಿದೆ. ಇದರಿಂದ ಕಳವು ಮಾಡಿದವರನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:03 pm, Mon, 6 March 23

ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್
ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್