ಕುಟುಂಬ ಕಲಹ, ಜೀವನದಲ್ಲಿ ಜಿಗುಪ್ಸೆ; ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್‌ಟೇಬಲ್
ಖಜಾನೆಯ ಕಚೇರಿಯ ಎಲ್ಲಾ ಬಾಗಿಲುಗಳನ್ನು ಹಾಕಿಕೊಂಡು, ಕುರ್ಚಿ ಮೇಲೆ ಕುಳಿತು, ಕೈಯಲ್ಲಿದ್ದ 303 ರೈಫಲ್ ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ರಾತ್ರಿ 9 ಗಂಟೆಗೆ ನೈಟ್ ಡ್ಯೂಟಿ ಮಾಡುವ ಇನ್ನೋರ್ವ ಸಿಬ್ಬಂದಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಗದಗ: ಕುಟುಂಬ ಕಲಹದಿಂದ ಬೇಸತ್ತಿದ್ದ ಮುಖ್ಯ ಪೇದೆಯೋರ್ವ 303 ರೈಫಲ್ನಿ ಬಂದೂಕಿನಿಂದ ಗುಂಡು(Suicide) ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ಗದಗದಲ್ಲಿ ಜರುಗಿದೆ. ಇಲ್ಲಿನ ಜಿಲ್ಲಾಡಳಿತ ಭವನದ ಖಜಾನೆ ವಿಭಾಗದಲ್ಲಿ ಕರ್ತವ್ಯ ಮಾಡುತ್ತಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್‌ಟೇಬಲ್ ಕಿರಣಕುಮಾರ್ ಕೊಪ್ಪದ (45) ಕತ್ತಿಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಜೆ ಆರು ಗಂಟೆಯಿಂದ ಒಂಬತ್ತು ಗಂಟೆಯವರೆಗೆ ಡ್ಯೂಟಿಗೆ ಬಂದಿದ್ದ ಕಿರಣಕುಮಾರ್ ಖಜಾನೆಯ ಕಚೇರಿಯ ಎಲ್ಲಾ ಬಾಗಿಲುಗಳನ್ನು ಹಾಕಿಕೊಂಡು, ಕುರ್ಚಿ ಮೇಲೆ ಕುಳಿತು, ಕೈಯಲ್ಲಿದ್ದ 303 ರೈಫಲ್ ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ರಾತ್ರಿ 9 ಗಂಟೆಗೆ ನೈಟ್ ಡ್ಯೂಟಿ ಮಾಡುವ ಇನ್ನೋರ್ವ ಸಿಬ್ಬಂದಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ‘ಬ್ರಹ್ಮಾಸ್ತ್ರ’ ಟ್ರೇಲರ್ನಲ್ಲಿ ಗಮನ ಸೆಳೆದ ಪಾತ್ರವರ್ಗ; ಆಲಿಯಾ, ರಣಬೀರ್ ಜತೆ ಬಚ್ಚನ್, ನಾಗಾರ್ಜುನ ಮಿಂಚಿಂಗ್
ಖಜಾನೆಯ ಎಲ್ಲಾ ಬಾಗಿಲು ಹಾಕಿದ್ದರಿಂದ ನೈಟ್ ಡ್ಯೂಟಿಗೆ ಬಂದ ಸಿಬ್ಬಂದಿ ಸಂಶಯಗೊಂಡು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಗಾಬರಿಗೊಂಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ವಿದ್ಯಾನಂದ ನಾಯಕ ತಮ್ಮ ಸಿಬ್ಬಂದಿಯೊಂದಿಗೆ ಬಂದು ಬಾಗಿಲು ಒಡೆದು ನೋಡಿದಾಗ ಕಿರಣಕುಮಾರ್ ಕೈಯಲ್ಲಿದ್ದ ರೈಫಲ್ ನಿಂದ ಕುತ್ತಿಗೆಗೆ ಇಟ್ಟುಕೊಂಡು ಡ್ರ್ಯಾಗರ್ ಕಾಲಿನಿಂದ ಪ್ರೆಸ್ ಮಾಡಿದ್ದಾರೆ. ಆಗ ರೈಫಲ್ ನಿಂದ ಹಾರಿದ ಗುಂಡು, ಗುತ್ತಿಗೆಯನ್ನು ಸೀಳಿಕೊಂಡು ಗೋಡೆಗೆ ಹೋಗಿ ತಾಗಿದೆ. ಇದರಿಂದಾಗಿ ಕಿರಣಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೌಟುಂಬಿಕ ಕಲಹ ಹಾಗೂ ಜೀವನದಲ್ಲಿ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ತಂದೆ ತಿಳಿಸಿದ್ದಾರೆ. ಸುದ್ದಿ ತಿಳಿದು ಎಸ್ಸಿ ಶಿವಪ್ರಕಾಶ್ ದೇವರಾಜು, ಡಿವೈಎಸ್ಪಿ ಶಿವಾನಂದ ಪಟ್ಟಣಶೆಟ್ಟಿ, ಇನ್ಸ್‌ಪೆಕ್ಟರ್ ಗಳಾದ ಸಾಲಿಮಠ, ರವಿಕುಮಾರ್ ಕಪ್ಪತನವರ್, ಸುಬ್ಬಾಪೂರಮಠ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದರು. ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Gas Cylinder Connection: ಇಂಡೇನ್ ಅನಿಲ ಸಿಲಿಂಡರ್ ಸಂಪರ್ಕ ಪಡೆಯುವುದು ಹೇಗೆ? ದರ, ದಾಖಲೆ ಮತ್ತಿತರ ಮಾಹಿತಿ ಇಲ್ಲಿದೆ
ಗದಗದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ