AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಡಬಾರದ ವಯಸ್ಸಿನಲ್ಲಿ ಲವ್ ಮಾಡಿ, ಸಂಕಷ್ಟ ತಂದುಕೊಂಡು, ದಾರುಣವಾಗಿ ಅಂತ್ಯ ಕಂಡ ಗದಗ ಪಿಯುಸಿ ವಿದ್ಯಾರ್ಥಿ

Gadag: ಇವತ್ತು ಮಗ ಜಾಮೀನಿನ ಮೇಲೆ ಮನೆಗೆ ಬರ್ತಾನೆ ಅಂದ್ಕೊಂಡಿದ್ದ ಪೋಷಕರಿಗೆ ಮಗ ಸಿಕ್ಕಿದ್ದು ಹೆಣವಾಗಿ. ಯುವಕ ದುಡುಕಿ ನಿರ್ಧಾರ ಕೈಗೊಂಡು ಜೈಲಿನಲ್ಲಿ ಆತ್ಮಹತ್ಯೆ ಮಾಡೊಂಡಿದ್ದಾನೆ. ಒಟ್ನಲ್ಲಿ ಮಾಡಬಾರದ ವಯಸ್ಸಿನಲ್ಲಿ ಲವ್ ಮಾಡಿ, ಸಂಕಷ್ಟ ತಂದುಕೊಂಡು, ದಾರುಣವಾಗಿ ಅಂತ್ಯಗೊಂಡಿದ್ದಾನೆ. ಕಷ್ಟಪಟ್ಟು ಓದಿಸಿದ್ದ ಹೆತ್ತವರು ತಮ್ಮ ಮಗನನ್ನು ಕಳೆದುಕೊಂಡು ಕಣ್ಣೀರು ಹಾಕ್ತಾಯಿದ್ದಾರೆ‌.

ಮಾಡಬಾರದ ವಯಸ್ಸಿನಲ್ಲಿ ಲವ್ ಮಾಡಿ, ಸಂಕಷ್ಟ ತಂದುಕೊಂಡು, ದಾರುಣವಾಗಿ ಅಂತ್ಯ ಕಂಡ ಗದಗ ಪಿಯುಸಿ ವಿದ್ಯಾರ್ಥಿ
ಗದಗ ಕಾರಾಗೃಹದಲ್ಲಿ ಕೈದಿಗಳಿಗೆ ಕ್ರೈಸ್ತರ ಧರ್ಮ ಗ್ರಂಥ ಹಂಚುವ ಮೂಲಕ ಮತಾಂತರ ಹುನ್ನಾರ ನಡೆಸಿದ ಆರೋಪ
TV9 Web
| Edited By: |

Updated on:Apr 08, 2022 | 6:07 PM

Share

ಆತನದ್ದು ಓದುವ ವಯಸ್ಸು, ಜಸ್ಟ್ ಈಗ ತಾನೇ ದ್ವಿತೀಯ ಓದುತ್ತಿದ್ದ. ಆದರೆ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಲವ್ ಮಾಡಿ ಯಡವಟ್ಟು ಮಾಡಿಕೊಂಡಿದ್ದ, ಹುಡುಗಿ ಮನೆಯವರು ಯುವಕನ ವಿರುದ್ಧ ದೂರು ದಾಖಲು ಮಾಡಿದರು. ಹಾಗಾಗಿಯೇ ಯುವಕ ಜೈಲು ಸೇರಿದ್ದ, ಇನ್ನೇನು ಜಾಮೀನು ಸಿಗುತ್ತೇ ಹೊರಗಡೆ ಬಂದು ಪರೀಕ್ಷೆ ಬರೆಯಬೇಕು  ಅಂದ್ಕೊಂಡಿದ್ದ. ಆದ್ರೆ, ಜಾಮೀನು ಸಿಕ್ಕಿರೋ ವಿಷಯ ಜೈಲಿನಲ್ಲಿರುವ ಯುವಕನಿಗೆ ಗೊತ್ತೇ ಆಗಲಿಲ್ಲ. ತನಗೆ ಬೇಲ್ ಸಿಗ್ಲಿಲ್ಲ ಅಂತಾನೆ ಯುವಕ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ.

ಎದೆಯೆತ್ತರಕ್ಕೆ ಬೆಳೆದ ಮಗನ ಸಾವು ಕಂಡು ಕುಟುಂಬಸ್ಥರ ಆಕ್ರಂದನ. ಇಂದು ಜಾಮೀನು ಮೇಲೆ ಮನೆಗೆ ಬರಬೇಕಿದ್ದ ಮಗನ ಸಾವು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಜೈಲು ಆವರಣದಲ್ಲಿ ಕುಟುಂಬಸ್ಥರು ಜಮಾಯಿಸಿದ್ದರು. ಮೇಲಿನ ಫೋಟೋದಲ್ಲಿರುವ ಯುವಕನೇ ರಾಜು ಲಮಾಣಿ. ಜೈಲಿನಲ್ಲಿದ್ದ ಯುವಕ ಇಂದು ಜಾಮೀನಿನ ಮೇಲೆ ಬಿಡುಗಡೆಯಾಬೇಕಿದ್ದ. ಆದರೆ, ಜೈಲಿನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೌದು ಗದಗ ತಾಲೂಕಿನ ಅಡವಿ ಸೋಮಾಪೂರ ತಾಂಡಾ ನಿವಾಸಿಯಾದ ರಾಜು ಲಮಾಣಿ ಎನ್ನುವ ಯುವಕ.. ಪೋಕ್ಸೋ ಕಾಯ್ದೆ ಅಡಿ ರಾಜು ಲಮಾಣಿ ಮೇಲೆ ಗದಗ ಮಹಿಳಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕಳೆದ 20 ದಿನಗಳಿಂದ ಗದಗ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯಾಗಿ ಜೈಲುವಾಸಿಯಾಗಿದ್ದ. ಆದರೆ ಪರೀಕ್ಷೆಯ ಹಿನ್ನೆಲೆಯಲ್ಲಿ ಆತನಿಗೆ ನಿನ್ನೆ ಜಾಮೀನು ಸಿಕ್ಕಿತ್ತು. ಆದರೆ ನಿನ್ನೆ ಸಾಯಂಕಾಲ ಯುವಕನ ಪರ ವಕೀಲರು ಕಾರಾಗೃಹಕ್ಕೆ ಪೋನ್ ಕಾಲ್ ಮಾಡಿ ಮಾಹಿತಿ ನೀಡಲು ಮುಂದಾಗಿದ್ದರು. ಆದರೆ ಜೈಲಿನಲ್ಲಿ ಫೋನ್ ಕಾಲ್ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಯುವಕನಿಗೆ ಜಾಮೀನು ಸಿಕ್ಕಿರೋ ಮಾಹಿತಿ ಗೊತ್ತಾಗಿಲ್ಲ.

ಹೀಗಾಗಿ ಮನನೊಂದ ಜೈಲಿನ ಕಿಟಕಿಗೆ ವಸ್ತ್ರದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಗದಗ ಬೆಟಗೇರಿ ಪೊಲೀಸರು ಆಗಮಿಸಿ, ಮೃತನ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಹುಡುಗಿ ಮನೆಯವರು ಜೈಲಿನಲ್ಲಿ ರಾಜು ಲಮಾಣಿಯನ್ನು ಭೇಟಿ ಮಾಡಿದ್ದರಂತೆ. ಭೇಟಿ ಮಾಡಿದ ಬಳಿಕ ಅದೇನ್ ಆಯ್ತೋ ಗೊತ್ತಿಲ್ಲ ರಾಜು ನೇಣಿಗೆ ಶರಣಾಗಿದ್ದಾನೆ.  ಆತನ ಸಾವಿಗೆ ಹುಡುಗಿ ಮನೆಯವರೆ ಕಾರಣ ಎಂದು ತಾಯಿ ಲಕ್ಷ್ಮವ್ವ ಆರೋಪಿಸಿದ್ದಾರೆ.

ದ್ವಿತೀಯ ಪಿಯುಸಿ ಓದುತ್ತಿದ್ದ ರಾಜು ಲಮಾಣಿ, ಅದೇ ಗ್ರಾಮದ ಪ್ರಥಮ ಪಿಯುಸಿ ಓದುವ ಹುಡುಗಿಯನ್ನು ಲವ್ ಮಾಡ್ತಾಯಿದ್ದ. ಇಬ್ಬರು ಕೂಡಾ ಪರಸ್ಪರ ಪ್ರೀತಿ ಮಾಡ್ತಾಯಿದ್ರು. ಆದರೆ ಹುಡುಗಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದಕ್ಕೆ, ಯುವಕ ಹಾಗೂ ಯುವತಿ ಇಬ್ಬರೂ ಗೋವಾಕ್ಕೆ ಓಡಿ ಹೋಗಿದ್ದರು. ಜನವರಿ 26 ರಂದು ಹುಡುಗಿ ಮನೆಯವರು ಹುಡುಗನ ಮನೆಯ ಮೇಲೆ ಕಲ್ಲು ಎಸೆದು, ಕುಟುಂಬಸ್ಥರ ಮೇಲೆ‌ ಹಲ್ಲೆ ಮಾಡಿ, ರಾದ್ದಾಂತ ಮಾಡಿದ್ದರು.

ಆಗ ಹುಡುಗಿ ಪೋಷಕರು ಅಪಹರಣ ಕೇಸ್ ದಾಖಲು ಮಾಡಿದ್ದರು. ಪೊಲೀಸರು ಇಬ್ಬರನ್ನೂ ಪತ್ತೆ ಮಾಡಿ, ಯುವಕನ ವಿರುದ್ಧ ಫೋಕ್ಸೊ ಅಡಿಯಲ್ಲಿ ಕೇಸ್ ದಾಖಲು ಮಾಡಿ, ಜೈಲಿಗೆ ಕಳುಹಿಸಿದ್ದರು. ನ್ಯಾಯಾಲಯದ ಕೇಸ್ ನಡೆಯುತ್ತಿದ್ದು, ಯುವಕನ ಪರ ವಕೀಲ ಎಂ ಎ ಮೌಲ್ವಿ ಅವರು ವಾದ ಮಂಡಿಸಿದ್ದರು. ಇದೊಂದು ಸುಳ್ಳು ಪ್ರಕಣವಾಗಿತ್ತು, ಯುವಕನಿಗೆ ಜಾಮೀನು ನೀಡುವಂತೆ ವಾದ ಮಾಡಿದ್ಧರು. ನ್ಯಾಯಾಲಯ ಕೂಡಾ ಯುವಕ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಜಾಮೀನು ನೀಡಿದ್ದು, ನಿನ್ನೆ ಸಾಯಂಕಾಲ ತಡವಾಗಿ ಜಾಮೀನು ಸಿಕ್ಕಿದೆ. ಕೂಡಲೇ ಕಾರಾಗೃಹಕ್ಕೆ ಪೋನ್ ಕಾಲ್ ಮಾಡಿ ಮಾಹಿತಿ ತಿಳಿಸಲು ಮುಂದಾಗಿದ್ದರು. ಆದರೆ ಜೈಲಿನಲ್ಲಿ ಫೋನ್ ರಿಸೀವ್ ಮಾಡಿಲ್ಲ, ತನಗೆ ಜಾಮೀನು ಸಿಕ್ಕಿಲ್ಲ ಎಂದು ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಯುವಕನ ಪರ ವಕೀಲ ಎಂ ಎ ಮೌಲ್ವಿ ಹೇಳಿದ್ದಾರೆ.

ಇವತ್ತು ಮಗ ಜಾಮೀನಿನ ಮೇಲೆ ಮನೆಗೆ ಬರ್ತಾನೆ ಅಂದ್ಕೊಂಡಿದ್ದ ಪೋಷಕರಿಗೆ ಮಗ ಸಿಕ್ಕಿದ್ದು ಹೆಣವಾಗಿ. ಯುವಕ ದುಡುಕಿ ನಿರ್ಧಾರ ಕೈಗೊಂಡು ಜೈಲಿನಲ್ಲಿ ಆತ್ಮಹತ್ಯೆ ಮಾಡೊಂಡಿದ್ದಾನೆ. ಒಟ್ನಲ್ಲಿ ಮಾಡಬಾರದ ವಯಸ್ಸಿನಲ್ಲಿ ಲವ್ ಮಾಡಿ, ಸಂಕಷ್ಟ ತಂದುಕೊಂಡು, ದಾರುಣವಾಗಿ ಅಂತ್ಯಗೊಂಡಿದ್ದಾನೆ. ಕಷ್ಟಪಟ್ಟು ಓದಿಸಿದ್ದ ಹೆತ್ತವರು ತಮ್ಮ ಮಗನನ್ನು ಕಳೆದುಕೊಂಡು ಕಣ್ಣೀರು ಹಾಕ್ತಾಯಿದ್ದಾರೆ‌. ಹದಿ ಹರೆಯದ ವಯಸ್ಸಿನಲ್ಲಿ ಪ್ರೇಮಜಾಲಕ್ಕೆ ಸಿಲುಕುವ ಯುವಕ ಯುವತಿಯರು ಇನ್ನಾದರೂ ಎಚ್ಚರಿಕೆ ವಹಿಸಬೇಕು. -ಸಂಜೀವ ಪಾಂಡ್ರೆ, ಟಿವಿ 9, ಗದಗ

Published On - 6:02 pm, Fri, 8 April 22

ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ