ಕೇಂದ್ರದಿಂದ ಕರ್ನಾಟಕಕ್ಕೆ ಜಿಎಸ್‌ಟಿ ಪರಿಹಾರ ಬಿಡುಗಡೆ
ಕರ್ನಾಟಕಕ್ಕೆ ₹ 8542 ಕೋಟಿ ಮೊತ್ತವು ಕೇಂದ್ರದ ಹಣಕಾಸು ಇಲಾಖೆಯಿಂದ ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರವು ಸಾಲದ ಹಣದ ರೂಪದಲ್ಲಿ ಈ ಪರಿಹಾರವನ್ನು ನೀಡಿದೆ.
ಬೆಂಗಳೂರು: ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ನೀಡಬೇಕಿದ್ದ ಜಿಎಸ್‌ಟಿ ಬಾಕಿ ಪರಿಹಾರದ ಹಣವನ್ನು ಗುರುವಾರ ಬಿಡುಗಡೆ ಮಾಡಿದೆ. ವಿವಿಧ ರಾಜ್ಯಗಳಿಗೆ ₹ 75 ಸಾವಿರ ಕೋಟಿ ಪರಿಹಾರ ಬಿಡುಗಡೆಯಾಗಿದೆ. ಇದರಲ್ಲಿ ಕರ್ನಾಟಕಕ್ಕೆ ₹ 8542 ಕೋಟಿ ಮೊತ್ತವು ಕೇಂದ್ರದ ಹಣಕಾಸು ಇಲಾಖೆಯಿಂದ ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರವು ಸಾಲದ ಹಣದ ರೂಪದಲ್ಲಿ ಈ ಪರಿಹಾರವನ್ನು ನೀಡಿದೆ.
ಕರ್ನಾಟಕಕ್ಕೆ ಕಳೆದ ವರ್ಷದಷ್ಟೇ ಈ ವರ್ಷವೂ ಜಿಎಸ್‌ಟಿ ಪರಿಹಾರ ಸಿಗಲಿದೆ. ರಾಜ್ಯಕ್ಕೆ ಬಾಕಿ ಇರುವ ಜಿಎಸ್‌ಟಿ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಆದರೆ ಎಷ್ಟು ಪ್ರಮಾಣದ ಜಿಎಸ್‌ಟಿ ದೊರೆಯಲಿದೆ ಎಂದು ನಾನು ಹೇಳಲು ಸಾಧ್ಯವಿಲ್ಲ. ಕೇಂದ್ರ ಸಾಲ ಪಡೆದು ರಾಜ್ಯಗಳಿಗೆ GST ಪರಿಹಾರ ಕೊಡುತ್ತಿದೆ. ಈ ಪ್ರಕ್ರಿಯೆ ಈ ವರ್ಷವೂ ಇದೇ ರೀತಿ ಮುಂದುವರಿಯಲಿದೆ ಎಂದು ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಈಚೆಗೆ ಹೇಳಿದ್ದರು.
ದೇಶದಲ್ಲಿ ಜಿಎಸ್‌ಟಿ ಜಾರಿಯಾಗಿ ನಾಲ್ಕು ವರ್ಷ ಆಗಿದೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಜಿಎಸ್‌ಟಿ ಪರಿಹಾರ ಕುರಿತು ನಡೆಯಲಿದೆ. ವಿಶೇಷ ಕಲಾಪದಲ್ಲಿ ರಾಜ್ಯಗಳ ಜಿಎಸ್‌ಟಿ ಪರಿಹಾರ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದರು.
(Govt of India releases GST of Karnataka)
ಇದನ್ನೂ ಓದಿ: ಕೊರೊನಾ ಲಸಿಕೆಯ ಮೇಲೆ ಜಿಎಸ್‌ಟಿ ಬದಲಾವಣೆ ಇಲ್ಲ; ಉಳಿದ ಕೊರೊನಾ ಸಾಮಗ್ರಿ ಮೇಲೆ ಎಷ್ಟು ಜಿಎಸ್‌ಟಿ ಕಡಿಮೆಯಾಯ್ತು?
ಇದನ್ನೂ ಓದಿ: GST Council: ಬ್ಲ್ಯಾಕ್ ಫಂಗಸ್ ಔಷಧಗಳಿಗೆ ತೆರಿಗೆ ವಿನಾಯಿತಿ; ಕೊರೊನಾ ಲಸಿಕೆಯ ಮೇಲೆ ಶೇಕಡಾ 5 ಜಿಎಸ್‌ಟಿ ಮುಂದುವರಿಕೆ