ಅಣ್ಣನ ವಿರುದ್ಧ ಯುದ್ಧ ಮಾಡಿದಕ್ಕೆ ನೊಂದು ಇಡೀ ರಾಜ್ಯ ವೈಭೋಗ ತೊರೆದು ಗೊಮ್ಮಟೇಶ್ವರನಾದ; ಬಾಹುಬಲಿ ತ್ಯಾಗದ ಕಥೆ ಇಲ್ಲಿದೆ
ಐತಿಹಾಸಿಕ, ಧಾರ್ಮಿಕ, ಜೈನರ ಕಾಶಿ ಎಂದೆನಿಸಿಕೊಂಡಿರುವ ಶ್ರವಣಬೆಳಗೊಳ ಇರುವುದು ಹಾಸನ ಜಿಲ್ಲೆಯಲ್ಲಿ. ರಾಜ್ಯ, ಸಂಪತ್ತು, ಅಧಿಕಾರ ಎಲ್ಲದರ ವ್ಯಾಮೋಹ ಬಿಟ್ಟು ವೈರಾಗ್ಯಮೂರ್ತಿಯಾಗಿ ನಿಂತ ಬಾಹುಬಲಿಗೆ ಇಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಮಹಾಮಜ್ಜನ ನಡೆಯುತ್ತೆ. ಆದರೆ ನಿಮಗೆ ಗೊತ್ತಾ? ಬಾಹುಬಲಿ ಗೊಮ್ಮಟೇಶ್ವರನಾಗಿ ಶ್ರವಣಬೆಳಗೊಳದಲ್ಲಿ ನಿಲ್ಲಲು ಕಾರಣವೇನೆಂದು? ಅಣ್ಣ-ತಮ್ಮನ ನಡುವೆ ನಡೆದ ಜಗಳ ಇತಿಹಾಸ ಪುಟ ಸೇರಿದ್ದು ಹೇಗೆ?

ಅದು ಭಾನುವಾರ ಸಂಜೆ. ಶುಂಠಿ ಟೀ ಹೀರುತ್ತ ಟಿವಿಯಲ್ಲಿ ಬರುತ್ತಿದ್ದ ಶಂಕರ್ ನಾಗ್ ಅವರ ‘ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು’ ಎನ್ನುವ ಸೂಪರ್ ಹಿಟ್ ಹಾಡನ್ನು ಕೇಳುತ್ತ ಕೂತಿದ್ದೆ. ಮನಸ್ಸಿಗೆ ಎದೇನೋ ಖುಷಿ ಎನಿಸಿ ಹಾಡನ್ನು ಗುನುಗುತ್ತಿದ್ದೆ. ಈ ಹಾಡು ಮುಗಿಯುತ್ತಿದ್ದಂತೆ ಅದರ ಹಿಂದೆಯೇ ಮತ್ತೊಂದು ಹಾಡು ಬಂತು. ಅದುವೇ ರೆಬಲ್ ಸ್ಟಾರ್ ಅಂಬರೀಶ್ ಅವರ ಎಸ್.ಪಿ.ಬಾಲಸುಬ್ರಮಣ್ಯಂ ಕಂಠ ಸಿರಿಯಲ್ಲಿ ಮೂಡಿ ಬಂದ ‘ಇದೆ ನಾಡು ಇದೆ ಭಾಷೆ ಎಂದೆಂದೂ ನನ್ನದಾಗಿರಲಿ’. ಈ ಹಾಡಲ್ಲಿ ಬರುವ ‘ಚಾಮುಂಡಿ ರಕ್ಷಣೆ ನಮಗೆ, ಗೊಮ್ಮಟೇಶ್ವರ ಕಾವಲು ಇಲ್ಲಿ’ ಎಂಬ ಸಾಲು ಒಂದು ಕ್ಷಣ ನನ್ನ ತಲೆಗೆ ಕೆಲಸ ಕೊಟ್ಟಿತು. ಹೆಣ್ಣು, ಹೊನ್ನು, ಮಣ್ಣಿಗಾಗಿ ಸ್ವಂತ ಅಣ್ಣ, ತಮ್ಮ, ತಂದೆ, ತಾಯಿ ಎಂದೂ ನೋಡದೆ ಕುಟುಂಬದವರನ್ನೇ ಕೊಲ್ಲುವ ಮಟ್ಟಕ್ಕೆ ಹೋಗಿ ಸ್ವಂತ ಸುಖದ ಬಗ್ಗೆ ಚಿಂತಿಸುವ ಈ ಸಮಾಜದಲ್ಲೂ ಮಹಾನ್ ತ್ಯಾಗಿಗಳಿದ್ದರು ಎಂಬ ಬಗ್ಗೆ ಯೋಚಿಸಿ ನಗು ಬಂತು. ಸಾವಿರ ವರ್ಷಗಳ ಹಿಂದೆ ಬಾಹುಬಲಿ ತನ್ನ ಸಹೋದರನ ಜೊತೆ ಯುದ್ಧ ಮಾಡಿದೆ ಎಂಬ ಪಶ್ಚಾತ್ತಾಪದ ಸುಳಿಗೆ ಸಿಕ್ಕಿ ತನಗೆ ಸಿಕ್ಕ ರಾಜ್ಯ, ಸುಖ, ಸಂಪತ್ತನೆಲ್ಲ ತೊರೆದು ವೈರಾಗಿಯಾದ. ಆದರೆ ಈಗಿನ ಕಾಲದಲ್ಲಿ ಇಂತಹ ಘಟನೆಗಳು ಎಂದೂ ಜರುಗದು ಎಂದರೆ ತಪ್ಪಾಗಲಾರದು ಅನಿಸುತ್ತೆ. ಅದೇನೆ ಇರಲಿ ಗೊಮ್ಮಟೇಶ್ವರನಂತಹ ಮಹಾನ್ ತ್ಯಾಗಿಗಳ ಬಗ್ಗೆ ನಮ್ಮ ಮಕ್ಕಳಿಗೆ ಹೇಳಿಕೊಡುವ ಅವಶ್ಯಕತೆ ಹೆಚ್ಚಿದೆ. ಇಂತಹ ಕಥೆಗಳಿಂದಲೇ ಮಾನವ ಮೌಲ್ಯ ಹೆಚ್ಚುತ್ತೆ. ಮೋಕ್ಷ ಭೂಮಿಯಾಗಿದ್ದ ಶ್ರವಣಬೆಳಗೊಳ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳವು ಬೆಂಗಳೂರಿನಿಂದ 145...
Published On - 6:29 pm, Sat, 20 July 24