ಹಾಸನದಲ್ಲಿ ಭತ್ತ ನಾಟಿ ಮಾಡ್ತಿದ್ದ ವೇಳೆ ಸಿಡಿಲು ಬಡಿದು 15 ಜನರಿಗೆ ಗಾಯ; ಓರ್ವ ಮಹಿಳೆ ಸ್ಥಿತಿ ಗಂಭೀರ

ಹಾಸನ(Hassan) ಜಿಲ್ಲೆಯ ಬೇಲೂರು ತಾಲ್ಲೂಕಿನ ಕೋರ್ಲಗದ್ದೆ ಗ್ರಾಮದಲ್ಲಿ ಭತ್ತ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು 15 ಜನರು ಅಸ್ವಸ್ಥರಾದ ಘಟನೆ ನಡೆದಿದೆ. ಕೂಡಲೇ ಹದಿನೈದು ಮಂದಿಯನ್ನೂ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ.

ಹಾಸನದಲ್ಲಿ ಭತ್ತ ನಾಟಿ ಮಾಡ್ತಿದ್ದ ವೇಳೆ ಸಿಡಿಲು ಬಡಿದು 15 ಜನರಿಗೆ ಗಾಯ; ಓರ್ವ ಮಹಿಳೆ ಸ್ಥಿತಿ ಗಂಭೀರ
ಹಾಸನದಲ್ಲಿ ಭತ್ತ ನಾಟಿ ಮಾಡ್ತಿದ್ದ ವೇಳೆ ಸಿಡಿಲು ಬಡಿದು 15 ಜನರಿಗೆ ಗಾಯ
Edited By: ಕಿರಣ್ ಹನುಮಂತ್​ ಮಾದಾರ್

Updated on: Aug 11, 2024 | 10:15 PM

ಹಾಸನ, ಆ.11: ಭತ್ತ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು 15 ಜನರು ಅಸ್ವಸ್ಥರಾದ ಘಟನೆ ಹಾಸನ(Hassan) ಜಿಲ್ಲೆಯ ಬೇಲೂರು ತಾಲ್ಲೂಕಿನ ಕೋರ್ಲಗದ್ದೆ ಗ್ರಾಮದಲ್ಲಿ ನಡೆದಿದೆ. ಕೂಡಲೇ ಹದಿನೈದು ಮಂದಿಯನ್ನೂ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ. ಇನ್ನು ಕೆ.ಬಿ.ಚಂದ್ರು ಎಂಬುವವರಿಗೆ ಸೇರಿದ ಗದ್ದೆಯಲ್ಲಿ 25 ಮಂದಿ ನಾಟಿ ಮಾಡುತ್ತಿದ್ದರು. ಈ ವೇಳೆ ಗುಡುಗು, ಸಿಡಿಲು ಸಹಿತ ದಿಢೀರ್ ಮಳೆ ಶುರುವಾಗಿ, ಸಿಡಿಲು ಬಡಿದು ಹಲವು ಕಾರ್ಮಿಕರು ಗಾಯಗೊಂಡಿದ್ದಾರೆ. ರೇಣುಕಾ (49), ಸವಿತಾ (45), ಸುಮಿತ್ರ (51), ರೇಣುಕಮ್ಮಾ (55), ನೇತ್ರ (40), ನಿರ್ಮಲ (51), ವೀಣಾ (35), ಅನಿತಾ (55) ಸೇರಿ ಹದಿನೈದು ಮಂದಿಗೆ ಗಾಯವಾಗಿದ್ದು, ಲತಾ (35) ಎಂಬುವವರ ಸ್ಥಿತಿ ಗಂಭೀರವಾಗಿದೆ.

ರಾಮನಗರದಲ್ಲಿ ಮುಂದುವರಿದ ಚಿರತೆ ದಾಳಿ, ಜನರಲ್ಲಿ ಆತಂಕ

ರಾಮನಗರ: ಜಿಲ್ಲೆಯಲ್ಲಿ ಚಿರತೆ ದಾಳಿ ಮುಂದುವರೆದಿದ್ದು, ಜನರಲ್ಲಿ ಆತಂಕ ಮೂಡಿದೆ. ಹೌದು, ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂದಿನ ಮನೆಯ ಗೇಟ್ ಹಾರಿ ಸಾಕು ನಾಯಿಯನ್ನ ಚಿರತೆ ಬೇಟೆಯಾಡಿದೆ. ಪ್ರತಿರೋಧ ಒಡ್ಡಿದರೂ ಬಿಡದೆ ಕೊಂದು ಹೊತ್ತೊಯ್ದಿದೆ. ಮನೆಗಳಿಗೆ ಚಿರತೆ ನುಗ್ಗುತ್ತಿರುವುದರಿಂದ ಜನರಲ್ಲಿ ಆತಂಕ ಮನೆಮಾಡಿದೆ. ರಾತ್ರಿ ವೇಳೆ ಚಿರತೆ ಚಲನವಲನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನು ನಿನ್ನೆ(ಶನಿವಾರ) ಮಹಿಳೆ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು. ಈ ಹಿನ್ನಲೆ ಚಿರತೆ ಸೆರೆ ಹಿಡಿಯುವಂತೆ ರಾಮನಗರ ಜನರು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ:ಗುಡುಗು, ಸಿಡಿಲು ಸಹಿತ ಮಳೆ: ಕುಸಿದು ಬಿದ್ದ ದೇವಸ್ಥಾನದ ಗೋಪುರ

ಶೆಡ್ ಬಾಗಿಲು ಒಡೆದು ಮೇಕೆಗಳ ಕಳ್ಳತನ

ಬೆಂಗಳೂರು: ಶೆಡ್ ಬಾಗಿಲು ಒಡೆದು ಮೇಕೆಗಳನ್ನು ಕಳ್ಳತನ ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕುಂಬಾರಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿಶ್ವನಾಥ್​ ಅವರಿಗೆ ಸೇರಿದ ಮೇಕೆಗಳು ಇದಾಗಿದ್ದು, ಲಕ್ಷಕ್ಕೂ ಹೆಚ್ಚು ಬೆಲೆಬಾಳುವ 10ಮೇಕೆಗಳನ್ನು ಖದೀಮರು ಹೊತ್ತೊಯ್ದಿದ್ದಾರೆ. ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:05 pm, Sun, 11 August 24

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us