ಹಾಸನ ಸರ್ಕಾರಿ ಹಾಸ್ಟೇಲ್ನಲ್ಲಿ ಧಮ್ ಮಾರೋ ಧಮ್: ಮಕ್ಕಳಿಂದ ಬೀಡಿ, ಮದ್ಯ ಸೇವನೆ
ಚೆನ್ನಾಗಿ ಓದಲಿ ಅಂತ ದೂರದ ಊರಿನಲ್ಲಿ ಹಾಸ್ಟೇಲ್ನಲ್ಲಿ ಇರಿಸಿ ಪೋಷಕರು ಮಕ್ಕಳನ್ನು ಓದಿಸುತ್ತಿರುತ್ತಾರೆ. ಆದರೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡಿನ ಮೆಟ್ರಿಕ್ ಪೂರ್ವ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದ ಮಕ್ಕಳು ಅಮಲಿನಲ್ಲಿ ತೇಲಾಡುತ್ತಿದ್ದಾರೆ.
ಹಾಸನ, ಸೆಪ್ಟೆಂಬರ್ 01: ಬೇಲೂರು (Beluru) ತಾಲೂಕಿನ ಬಿಕ್ಕೋಡಿನ ಮೆಟ್ರಿಕ್ ಪೂರ್ವ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದ (Government Hostel) ಮಕ್ಕಳು ಅಮಲಿನಲ್ಲಿ ತೇಲಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ವಸತಿ ನಿಲಯದ ಸಿಬ್ಬಂದಿ ಇಲ್ಲದ ವೇಳೆ ಮಕ್ಕಳು ಧೂಮಪಾನ, ವೈಟ್ನರ್ ಮತ್ತು ಮದ್ಯಪಾನ ಮಾಡುತ್ತಿದ್ದಾರೆ.
4-5 ವೈಟ್ನರ್ ಮೂಸುತ್ತಿದ್ದರೇ, ಇನ್ನು ಕೆಲವರು ಧೂಮಪಾನ ಮಾಡುತ್ತಿದ್ದಾರೆ. ಮತ್ತು ವಸತಿ ನಿಲಯದ ಟೆರೆಸ್ ಮೇಲೆ ಮದ್ಯದ ಬಾಟಲಿಗಳು ಸಿಕ್ಕಿವೆ. ಇದು ಅಷ್ಟೇ ಅಲ್ಲದೆ ಮಕ್ಕಳು ಗಾಂಜಾ ಹಾಗೂ ಡ್ರಗ್ಸ್ ಕೂಡ ಸೇವನೆ ಮಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ವಸತಿ ನಿಲಯದಲ್ಲಿ ಮದ್ಯದ ಬಾಟಲ್, ಅಮಲೇರಿಸುವ ವಸ್ತುಗಳ ಕಂಡು ಸಾರ್ವಜನಿಕರು ಹಾಸ್ಟೆಲ್ ವಾರ್ಡನ್ ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಕ್ರಮವಾಗಿ ಬಾಂಗ್ಲಾದೇಶಿಗರು ನೆಲೆ: ಡಿಸಿ ಕಚೇರಿ ಆವರಣದಲ್ಲೇ ನಕಲಿ ದಾಖಲೆ ವಿತರಣೆ, ಅಧಿಕಾರಿ ವಶಕ್ಕೆ!
ಅನೈತಿಕ ಚಟುವಟಿಕೆಯ ತಾಣವಾದ ವಿಸ್ಮಯ ಉದ್ಯಾನವನ
ಚಿತ್ರದುರ್ಗ: ಚಳ್ಳಕೆರ ಪಟ್ಟಣದಲ್ಲಿರುವ ವಿಸ್ಮಯ ಉದ್ಯಾನವನ ಅನೈತಿಕ ಚಟುವಟಿಕೆಯ ತಾಣವಾಗಿದೆ. ಚಳ್ಳಕೆರೆ ಡಿವೈಎಸ್ಪಿ ಕಚೇರಿ ಹಿಂಭಾಗದಲ್ಲಿರುವ ಉದ್ಯಾನವನ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಪ್ರೇಮಿಗಳ ರೊಮ್ಯಾನ್ಸ್, ಅನೈತಿಕ ಚಟುವಟಿಕೆಗಳ ದೃಶ್ಯಗಳು ವೈರಲ್ ಆಗಿವೆ. ಅನೈತಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಸ್ಥಳೀಯರು ಆಗ್ರಹಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಪೊಲೀರ ಜತೆ ಕಿರಿಕ್
ಬೆಂಗಳೂರು: ನಗರದಲ್ಲಿ ಪೊಲೀಸರು ಪ್ರತಿನಿತ್ಯ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದಾರೆ. ಕಳೆದ ರಾತ್ರಿ ಹಲಸೂರು ಗೇಟ್ ಸಂಚಾರಿ ಪೊಲೀಸರು ಕಾರ್ಪೊರೇಷನ್ ಸರ್ಕಲ್ ಬಳಿ ತಪಾಸಣೆ ನಡೆಸಿದರು. ಈ ವೇಳೆ ಕುಡಿದ ಕಾರ್ ಓಡಿಸಿಕೊಂಡು ಬಂದ ಯುವಕ ಪೊಲೀಸರ ಜೊತೆ ಕಿರಿಕ್ ಮಾಡಿದ್ದಾನೆ. ಕಾರು ನಿಲ್ಲಿಸದೆ ಓಡಿಸಿಕೊಂಡು ಹೋಗಿದ್ದಾನೆ. ನಂತರ ಸಂಚಾರಿ ಪೊಲೀಸರು ಚೇಸ್ ಮಾಡಿ ಸಿಗ್ನಲ್ನಲ್ಲಿ ಹಿಡಿದಿದ್ದಾರೆ.
ಬಳಿಕ ಪೊಲೀಸರು ತಪಾಸಣೆ ನಡೆಸಿದಾಗ ಯುವಕ ಗ್ರೀಶ್ ಸಿಂಗ್ ಕುಡಿದಿದ್ದು ಪಕ್ಕಾ ಆಗಿದೆ. ಪೊಲೀಸರು ದಂಡ ಕಟ್ಟುವಂತೆ ಹೇಳಿದ್ದಾರೆ. ಆಗ, ಗ್ರೀಶ್ ಸಿಂಗ್ ನನಗೆ ಅವರು ಗೊತ್ತು,ಇವರು ಗೊತ್ತು ಎಂದಿದ್ದಾನೆ. ದಂಡ ಹಾಕಲು ಪೊಲೀಸರು ಫೋನ್ ನಂಬರ್ ಕೇಳಿದ್ದಾರೆ. ಆಗ, ಗ್ರೀಶ್ ಸಿಂಗ್ ಅರ್ಧ ಗಂಟೆ ಕಾಲ ಫೋನ್ ನಂಬರ್ ಹೇಳದೆ ಸಾತಾಯಿಸಿದ್ದಾರೆ. ಕೊನೆಗೆ ಪೊಲೀಸರು ಆತನ ಕೀಯಾ ಕಾರ್ ಸೀಜ್ ಮಾಡಿ, 10 ಸಾವಿರ ದಂಡ ವಿಧಿಸಿದ್ದಾರೆ. ಕೋರ್ಟ್ನಲ್ಲಿ ದಂಡ ಕಟ್ಟಿ ಬಳಿಕ ಕಾರ್ ಬಿಡಿಸಿಕೊಳ್ಳುವಂತೆ ಹೇಳಿ ಕಳುಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:54 am, Sun, 1 September 24