ಹಾಸನದಲ್ಲಿ ಅಕ್ರಮವಾಗಿ ಬಾಂಗ್ಲಾದೇಶಿಗರು ನೆಲೆ: ಡಿಸಿ ಕಚೇರಿ ಆವರಣದಲ್ಲೇ ನಕಲಿ ದಾಖಲೆ ವಿತರಣೆ, ಅಧಿಕಾರಿ ವಶಕ್ಕೆ!

ಆಸ್ಸಾಂ ರಾಜ್ಯದ ಮೂಲದವರೆಂದು ಹೇಳಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಬಾಂಗ್ಲಾದೇಶದವರು ಅಕ್ರಮವಾಗಿ ಹಾಸನ ಜಿಲ್ಲೆಯಲ್ಲಿ ನೆಲೆಯೂರಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಕೂಲಿ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರು ಜಿಲ್ಲೆಯ ಆಲೂರು, ಬೇಲೂರು, ಸಕಲೇಶಪುರ, ಅರಕಲಗೂಡು ಭಾಗದಲ್ಲಿ ನೆಲಸಿದ್ದಾರೆ.

ಹಾಸನದಲ್ಲಿ ಅಕ್ರಮವಾಗಿ ಬಾಂಗ್ಲಾದೇಶಿಗರು ನೆಲೆ: ಡಿಸಿ ಕಚೇರಿ ಆವರಣದಲ್ಲೇ ನಕಲಿ ದಾಖಲೆ ವಿತರಣೆ, ಅಧಿಕಾರಿ ವಶಕ್ಕೆ!
ಅಕ್ರಮ ವಲಸಿಗರು
Follow us
| Updated By: ವಿವೇಕ ಬಿರಾದಾರ

Updated on:Sep 01, 2024 | 8:47 AM

ಹಾಸನ, ಆಗಸ್ಟ್​ 31: ಆಸ್ಸಾಂ (Assam) ರಾಜ್ಯದ ಮೂಲದವರೆಂದು ಹೇಳಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಬಾಂಗ್ಲಾದೇಶದವರು (Bangladesh) ಅಕ್ರಮವಾಗಿ ಹಾಸನ (Hassan) ಜಿಲ್ಲೆಯಲ್ಲಿ ನೆಲೆಯೂರಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಕೂಲಿ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರು ಜಿಲ್ಲೆಯ ಆಲೂರು, ಬೇಲೂರು, ಸಕಲೇಶಪುರ, ಅರಕಲಗೂಡು ಭಾಗದಲ್ಲಿ ನೆಲಸಿದ್ದಾರೆ. ಅರಕಲಗೂಡು ತಾಲೂಕಿನ ವಿವಿದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ ಸ್ಥಳೀಯರು ತಿಳಿಸಿದ್ದಾರೆ.

ಇವರು, ತಾವು ಆಸ್ಸಾಂ ಮೂಲದವರೆಂದು ನಕಲಿ ಆದಾರ್ ಕಾರ್ಡ್ ತೋರಿಸಿ, ವಿವಿದೆಡೆ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಆದರೆ, ಕೆಲ ಮಾಲೀಕರು ಯಾವುದೇ ದಾಖಲೆ ಪರಿಶೀಲನೆ ಮಾಡದೆ ಕಾರ್ಮಿಕರ ಅನಿವಾರ್ಯತೆ ಹೆಸರಿನಲ್ಲಿ ಕೆಲಸ ನೀಡುತ್ತಿದ್ದಾರೆ ಎಂದು ಹೇಳಿದರು.

ಏಜೆಂಟ್​ರಿಂದ ನಕಲಿ ದಾಖಲೆ ಸೃಷ್ಟಿ

ಹಾಸನ ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆ ಉದ್ಭವಿಸಿದೆ. ಹೀಗಾಗಿ, ಕೆಲ ಏಜೆಂಟ್​​ರು ಬಾಂಗ್ಲಾದೇಶದ ಜನರನ್ನು ಕರೆತಂದು, ಇಲ್ಲಿ, ಅವರ ಹೆಸರಿನಲ್ಲಿ ಆಸ್ಸಾಂ ರಾಜ್ಯದ ನಿವಾಸಿ ಅಂತ ನಕಲಿ ಆಧಾರ್​ ಕಾರ್ಡ್​​ ಸೃಷ್ಟಿಸಿದ್ದಾರೆ. 5 ರಿಂದ 10 ಸಾವಿರ ಹಣ ಪಡೆದು ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡುತ್ತಿರುದ್ದಾರೆ. ಈ ನಕಲಿ ಆಧಾರ್​ ಕಾರ್ಡ್​ಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲೇ ವಿತರಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ: ಹಣ ಡಬಲ್ ಮೋಸ: ಇಬ್ಬರೇ ಇಬ್ಬರು ಮಹಿಳೆಯರಿಂದ 3 ಕೋಟಿ ರೂ, ಅಧಿಕ ವಂಚನೆ

ನಕಲಿ ದಾಖಲೆ ಮೂಲಕ ಅಕ್ರಮವಾಗಿ ವಲಸಿಗರು ಬರುತ್ತಿರುವ ಬಗ್ಗೆ ಬೆಂಗಳೂರು ವಿಭಾಗದ ಆಧಾರ್ ವಿತರಣೆ ಸಂಸ್ಥೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ಸಂಬಂಧ ಅಧಿಕಾರಿಗಳು ಪರಿಶೀಲನೆಗೆ ಇಳಿದರು. ಪರಿಶೀಲನೆ ವೇಳೆ ಒಂದೇ ದಾಖಲೆ ಬಳಸಿ ದಿನಾಂಕ, ಹೆಸರು ತಿದ್ದಿ ಹತ್ತಾರು ಆಧಾರ್ ಕಾರ್ಡ್ ವಿತರಣೆ ಮಾಡಲಾಗಿದೆ. ಆದಾರ್ ಕಾರ್ಡ್ ಕ್ಯೂಆರ್ ಕೋಡ್​ ಸ್ಕ್ಯಾನ್ ಮಾಡಿದಾಗ ಯಾವುದೇ ಮಾಹಿತಿ ದೊರೆಯದಿದ್ದಾಗ ಅನುಮಾನ ಗಾಢವಾಗಿದೆ. ಗಂಡು, ಹೆಣ್ಣು ಕಲಂನಲ್ಲೂ ತಪ್ಪು ಮಾಹಿತಿಗಳು ನಮೂದಿಸಿರುವುದು ಬಯಲಾಗಿದೆ.

ಅಧಿಕಾರಿಗಳು ಹಾಸನದ ಜಿಲ್ಲಾಧಿಕಾರಿ ಕಚೇರಿಯ ಆಧಾರ್ ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ ಅನುಶ್ರಿ ಎಂಬುವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:51 am, Sat, 31 August 24