3 ವಿಧಾನಸಭೆ ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್, ಹಾಸನದಲ್ಲೂ ಕಮಾಲ್

ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷ ಗೆದ್ದು ಬೀಗಿದೆ. ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟನದಲ್ಲೂ ಸಹ ಗೆಲುವು ಸಾಧಿಸಿದೆ. ಇದದರಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತಷ್ಟು ಬಲಬಂದಂತಾಗಿದೆ. ಇದರ ಮಧ್ಯ ಜೆಡಿಎಸ್ ಭದ್ರಕೋಟೆ ಹಾಸನದಲ್ಲೂ ಸಹ ಕಾಂಗ್ರೆಸ್ ಕಮಾಲ್ ಮಾಡಿದ್ದು, ಬಿಜೆಪಿ-ಜೆಡಿಎಸ್​ ದೋಸ್ತಿಗೆ ಮುಖಂಭವಾಗಿದೆ.

3 ವಿಧಾನಸಭೆ ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್, ಹಾಸನದಲ್ಲೂ ಕಮಾಲ್
ಕಾಂಗ್ರೆಸ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Nov 26, 2024 | 6:54 PM

ಹಾಸನ, (ನವೆಂಬರ್ 26): ಕರ್ನಾಟಕದ ಮೂರಕ್ಕೆ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್​​ ಗೆಲುವಿನ ನಗೆ ಬೀರಿದೆ. ಅದರಲ್ಲೂ ತೀವ್ರ ಪ್ರತಿಷ್ಠೆಯಾಗಿದ್ದ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿ 25 ಸಾವಿಕ್ಕೂ ಹೆಚ್ಚು ಮತಗಳ ಅಂತರದಿಂದ ಸಿಪಿ ಯೋಗೇಶ್ವರ್​ ಗೆದ್ದಿದ್ದಾರೆ. ಇದರಿಂದ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್​ ಖಾಲಿ ಖಾಲಿಯಾದಂತಾಗಿದೆ. ಇದರ ಮಧ್ಯ ಇದೀಗ ಕಾಂಗ್ರೆಸ್​​ ಹಾಸನ ಜಿಲ್ಲೆಯಲ್ಲೂ ಕಮಾಲ್ ಮಾಡಿದ್ದು, ಅರಸೀಕೆರೆ (Arsikere) ನಗರಸಭೆ ವಾರ್ಡ್‌ಗಳ ಉಪಚುನಾವಣೆಯಲ್ಲಿ ಎಂಟು ಸ್ಥಾನಗಳ ಪೈಕಿ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಜೆಡಿಎಸ್​ ಭದ್ರಕೋಟೆಯಾಗಿರುವ ಹಾಸನದಲ್ಲೂ ಕಾಂಗ್ರೆಸ್ ಶಾಕ್ ಕೊಟ್ಟಿದೆ.

ಅರಸೀಕೆರೆ ನಗರಸಭೆಯ 8 ವಾರ್ಡ್‌ಗಳಿಗೆ ನ.23 ರಂದು ಉಪಚುನಾವಣೆ ನಡೆದಿದ್ದು, ಇಂದು (ನ.26) ಫಲಿತಾಂಶ ಹೊರಬಿದ್ದಿದೆ. ಎಂಟು ಸ್ಥಾನಗಳ ಪೈಕಿ ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವನ್ನು ಸಾಧಿಸಿದ್ದು, ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜೆಡಿಎಸ್ ಹಾಗೂ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ಇನ್ನು ಕಾಂಗ್ರೆಸ್​ ಶಾಸಕ ಶಿವಲಿಂಗೇಗೌಡ ಅವರು ಎಚ್​ಡಿ ರೇವಣ್ಣಗೆ ಶಾಕ್ ಕೊಟ್ಟಿದ್ದಾರೆ.

ಇದನ್ನೂ ಓದಿ: ವಿಪಕ್ಷಗಳಿಗೆ ಸೆಡ್ಡು ಹೊಡೆಯಲು ತಂತ್ರ: ಡಿಸೆಂಬರ್ 5ರಂದು ಹಾಸನದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳ ಸಮಾವೇಶ

ಆರು ವಾರ್ಡ್‌ಗಳಲ್ಲಿ ಜೆಡಿಎಸ್, ನಾಲ್ಕರಲ್ಲಿ ಬಿಜೆಪಿಯಿಂದ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಕೆಲ ವಾರ್ಡ್‌ನಲ್ಲಿ ಮೈತ್ರಿ ಮಾಡಿಕೊಂಡಿದ್ದರೂ ದೋಸ್ತಿಗಳಿಗೆ ತೀವ್ರ ಹಿನ್ನಡೆಯಾಗಿದೆ. ಜೆಡಿಎಸ್‌ನಿಂದ ಗೆದ್ದು, ಬಿಜೆಪಿ ಜೊತೆ ಗುರುತಿಸಿಕೊಂಡ ಆರೋಪದಲ್ಲಿ ಏಳು ಸದಸ್ಯರು ಅನರ್ಹಗೊಂಡಿದ್ದರು. ಒಂದು ಸ್ಥಾನ ರಾಜೀನಾಮೆಯಿಂದ ತೆರವಾಗಿತ್ತು. ಹೀಗಾಗಿ ಒಟ್ಟು ಎಂಟು ಸ್ಥಾನಗಳಿಗೆ ನ.23 ರಂದು ಮತದಾನ ನಡೆದಿತ್ತು.

ರೇವಣ್ಣಗೆ ಸೆಡ್ಡು ಹೊಡೆದ ಶಿವಲಿಂಗೇಗೌಡ

ಹಾಸನ ಎಚ್​​ಡಿ ರೇವಣ್ಣನವರ ಹಿಡಿದಲ್ಲಿತ್ತು. ಆದರೆ, ಕೆಲ ರಾಜಕೀಯ ಕಾರಣಗಳಿಂದ ಕೆಲ ನಾಯಕರು ರೇವಣ್ಣ ವಿರುದ್ಧ ಸಿಡಿದೆದ್ದು ಜೆಡಿಎಸ್ ತೊರೆದು ಬಿಜೆಪಿ ಹಾಗೂ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅದರಲ್ಲೂ ಪ್ರಮುಖವಾಗಿ ಶಿವಲಿಂಗೇಗೌಡ ಅವರು ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಿ ರೇವಣ್ಣಗೆ ಟಾಂಗ್ ಕೊಟ್ಟಿದ್ದರು. ಬಳಿಕ ಇಬ್ಬರ ಮಧ್ಯ ನಡೆದ ವಾಕ್ಸಮರ ಮಧ್ಯ ಇದೀಗ ನಗರಸಭೆ ಉಪಚುನಾವಣೆಯಲ್ಲೂ ಶಿವಲಿಂಗೇಗೌಡ ಮೇಲುಗೈ ಸಾಧಿಸಿದ್ದಾರೆ.

ಹಾಸನದಲ್ಲೂ ಸೊರಗುತ್ತಿರುವ ಜೆಡಿಎಸ್​

ಈ ಮೊದಲು ಹಾಸನ, ಮಂಡ್ಯ, ರಾಮನಗರ, ಮೈಸೂರು ಜೆಡಿಎಸ್​ನ ಭದ್ರಕೋಟೆಗಳಾಗಿದ್ದವು. ಆದ್ರೆ, ಬದಲಾದ ರಾಜಕೀಯ ವಿದ್ಯಮಾನಗಳಿಂದ ಜೆಡಿಎಸ್​, ಮಂಡ್ಯ, ಮೈಸೂರಿನಲ್ಲಿ ತನ್ನ ನೆಲೆ ಕಳೆದುಕೊಂಡಿದೆ. ಇನ್ನು ಹಾಸನದಲ್ಲಿ ಹಂತ-ಹಂತವಾಗಿ ಜೆಡಿಎಸ್​ ಸೊರಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರಸೀಕೆರೆಯಲ್ಲಿ ಶಿವಲಿಂಗೇಗೌಡ ಅವರು ಕಾಂಗ್ರೆಸ್​ನಿಂದ ಗೆದ್ದಿದ್ದು, ಬಳಿಕ ಹಾಸನ ಲೋಕಸಭಾ ಸಹ ಕಾಂಗ್ರೆಸ್ ಪಾಲಾಗಿದೆ. ಮತ್ತೊಂದೆಡೆ ಕುಮಾರಸ್ವಾಮಿ ಗೆದ್ದಿದ್ದ ಚನ್ನಪಟ್ಟಣ ಕ್ಷೇತ್ರವನ್ನೂ ಸಹ ಜೆಡಿಎಸ್​ ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಜೆಡಿಎಸ್​ ಖಾಲಿ ಖಾಲಿಯಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:35 pm, Tue, 26 November 24