Hasanamba Darshana: ಹಾಸನಾಂಬೆ ದೇವಾಲಯದ ಬಾಗಿಲು ಓಪನ್ ಆಯ್ತು; ಮೊದಲ ದಿನ ಭಕ್ತರಿಗೆ ಅವಕಾಶ ಇರುವುದಿಲ್ಲ

Hasanamba Temple: ಹಾಸನಾಂಬೆಯ ದರ್ಶನ ಇಂದಿನಿಂದ ಅಕ್ಟೋಬರ್​ 27ರವರೆಗೂ ದೇಗುಲದ ಬಾಗಿಲು ಓಪನ್ ಆಗಿರುತ್ತದೆ. ಆದರೆ ಮೊದಲ ದಿನವಾದ ಇಂದು ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ ಇರುವುದಿಲ್ಲ

Hasanamba Darshana: ಹಾಸನಾಂಬೆ ದೇವಾಲಯದ ಬಾಗಿಲು ಓಪನ್ ಆಯ್ತು; ಮೊದಲ ದಿನ ಭಕ್ತರಿಗೆ ಅವಕಾಶ ಇರುವುದಿಲ್ಲ
hasanamba temple doors opened for Devotees today for 12 days
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 13, 2022 | 3:00 PM

ಹಾಸನ: ಇತಿಹಾಸ ಪ್ರಸಿದ್ದ ಹಾಸನಾಂಬೆ ದೇವಾಲಯದ ಬಾಗಿಲು (Hasanamba Temple) ಇಂದು ತೆರೆಯಲಾಗಿದೆ. ಇಂದಿನಿಂದ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಬಾಗಿಲು ಓಪನ್ ಮಾಡಲಾಗಿದೆ. ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ಹಾಸನಾಂಬೆಯ ದರ್ಶನ ಕಲ್ಪಿಸಲಾಗುತ್ತದೆ. ಇಂದಿನಿಂದ ಅಕ್ಟೋಬರ್​ 27ರವರೆಗೂ ದೇಗುಲದ ಬಾಗಿಲು ಓಪನ್ ಆಗಿರುತ್ತದೆ. ಆದರೆ ಮೊದಲ ದಿನವಾದ ಇಂದು ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ ಇರುವುದಿಲ್ಲ (Hasanamba Annual Festival).

ವರ್ಷದ ಬಳಿಕ ಮತ್ತೆ ಹಾಸನಾಂಬೆ ದರ್ಶನ ಸಂಭ್ರಮ, ಆದರೆ ಭಕ್ತರ ಆಕ್ರೋಶ:

12 ಗಂಟೆ 12 ನಿಮಿಷಕ್ಕೆ ಗರ್ಭಗುಡಿ ಗೆ ಹಾಕಿದ್ದ ಬೀಗ ತೆರೆದ ಅರ್ಚಕರು ಗರ್ಭಗುಡಿ ಬಾಗಿಲಿಗೆ ಮಹಾ ಮಂಗಳಾರತಿ ನೆರವೇರಿಸಿದರು. ಸತತ ಒಂದು ಗಂಟೆ ಕಾಲ ಗರ್ಭಗುಡಿ ಬಾಗಿಲ ಸಮೀಪ ಪೂಜೆ ಮಾಡಿದರು. ಒಟ್ಟು 12 ದಿನ ಸಾರ್ವಜನಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ ಮೊದಲ ದಿನ ಹಾಸನಾಂಬೆ ದರ್ಶನ ಸಿಗದೆ ಭಕ್ತರು ಪರದಾಡಿದ್ದಾರೆ. ದೇಗುಲದ ಗರ್ಭಗುಡಿ ಬಾಗಿಲು ತೆರೆದ ಒಂದೂವರೆ ಗಂಟೆಯಲ್ಲಿ ಮತ್ತೆ ಗರ್ಭಗುಡಿಗೆ ಬೀಗ ಹಾಕಲಾಗಿದೆ. ದೇಗುಲ ಸ್ವಚ್ಛ ಮಾಡಬೇಕೆಂದು ಗರ್ಭಗುಡಿಗೆ ಬೀಗ ಹಾಕಲಾಯಿತು ಎಂದು ಅರ್ಚಕರು ತಿಳಿಸಿದ್ದಾರೆ. ಆ ವೇಳೆ ದೇವಿ ದರ್ಶನ ಸಿಗದೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೂಢಿಯಂತೆ ಪ್ರತೀ ವರ್ಷ ಬಾಗಿಲು ತೆರೆದ ಬಳಿಕ ಆ ಕ್ಷಣ ದೇಗುಲದಲ್ಲಿ ಹಾಜರಿರುವ ಎಲ್ಲಾ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಈ ವರ್ಷ ಅರ್ಚಕರು ಏಕಾ ಏಕಿ ಗರ್ಭಗುಡಿಗೆ ಬೀಗಹಾಕಿ ಹೋಗಿದ್ದಾರೆ.

ಆದರೆ ಇನ್ನೂ ಸಾವಿರಾರು ಭಕ್ತರು ದೇವಿ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅಧಿಕೃತವಾಗಿ ಮೊದಲ ದಿನ‌ ಭಕ್ತರಿಗೆ ದರ್ಶನ ಇರೋದಿಲ್ಲ ಎಂಬ ಸೂಚನೆ ಇದ್ದರೂ ಭಾರೀ ಸಂಖ್ಯೆಯಲ್ಲಿ ಭಕ್ತರ ಆಗಮನವಾಗಿರುವುದು ಗಮನಾರ್ಹ. ಆದರೂ ಹಾಸನಾಂಬೆಯ ಮೊದಲ ದಿನದ ದರ್ಶನಕ್ಕಾಗಿ ನೂಕು ನುಗ್ಗಲು ಉಂಟಾಗಿದೆ. ದೇಗುಲದ ಆವರಣದಲ್ಲಿ ಜನರು ಕಿಕ್ಕಿರಿದು ತುಂಬಿದ್ದಾರೆ.

ಇಂದಿನಿಂದ ಹಾಸನದ ಹಾಸನಾಂಬೆ ದೇವಾಲಯದ ಬಾಗಿಲು ಓಪನ್​ -Live

ಕೊರೊನಾದಿಂದಾಗಿ 2 ವರ್ಷದಿಂದ ಕಳೆಗುಂದಿದ್ದ ವೈಭವದ ಹಾಸನಾಂಬೆ ಉತ್ಸವ

ಕೊರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷದಿಂದ ಹಾಸನಾಂಬೆ ಉತ್ಸವದ ವೈಭವ ತಗ್ಗಿತ್ತು. ಆದ್ರೆ, ಈ ಸಲ ಅದ್ಧೂರಿ ಉತ್ಸವಕ್ಕೆ ಜಿಲ್ಲಾಡಳಿತ ತಯಾರಾಗಿದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬರುವ ನಿರೀಕ್ಷೆಯಿದ್ದು, ಈಗಾಗಲೇ ಸಕಲ ಸಿದ್ಧತೆ ಮಾಡ್ಕೊಂಡಿದ್ದಾರೆ. ಪೊಲೀಸರು ಕೂಡ ಮುಂಜಾಗೃತ ಕ್ರಮಕೈಗೊಂಡಿದ್ದಾರೆ.

ಹಾಸನಾಂಬೆ ದೇಗುಲ ಹಲವು ಪಾವಡಗಳಿಂದಲೂ ಭಕ್ತರನ್ನ ಸೆಳೆಯುತ್ತೆ. ದೇವಿಗೆ ಒಮ್ಮೆ ಹಚ್ಚಿದ ಹಣತೆ ಆರಲ್ಲ. ದೇವರ ಮುಡಿಗಿಟ್ಟ ಹೂ ಬಾಡಲ್ಲ ಎಂಬ ನಂಬಿಕೆ ಹಿಂದಿನಿಂದಲೂ ನಡ್ಕೊಂಡು ಬಂದಿದೆ. ಹೀಗೆ, ಈ ಸಲವೂ ಈ ಪಾವಡ ನೋಡಲು, ದೇವಿಯನ್ನ ಕಣ್ತುಂಬಿಕೊಳ್ಳಲು ಭಕ್ತರು ಎದುರು ನೋಡ್ತಿದ್ದಾರೆ. ಇವತ್ತು, ಉಸ್ತುವಾರಿ ಸಚಿವ ಗೋಪಾಲಯ್ಯ, ಶಾಸಕ ಪ್ರೀತಂಗೌಡ ಸೇರಿದಂತೆ ಅಧಿಕಾರಿಗಳು, ಅನೇಕ ಗಣ್ಯರು ಹಾಜರಿರಲಿದ್ದಾರೆ. ಇವತ್ತು ಭಕ್ತರಿಗೆ ದರ್ಶನ ವ್ಯವಸ್ಥೆಯಿರಲ್ಲ. ನಾಳೆ(ಅ.13) ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕರಿಗೆ ದರ್ಶನ ಭಾಗ್ಯ ದೊರೆಯಲಿದೆ. ಒಟ್ಟು 12 ದಿನ ಹಾಸನಾಂಬೆ ದರ್ಶನ ಸಿಗಲಿದ್ದು, ಬಲಿಪಾಡ್ಯಮಿಯ ಮಾರನೇ ದಿನ ದೇವಿಯ ಉತ್ಸವಕ್ಕೆ ತೆರೆ ಬೀಳಲಿದೆ.

Published On - 1:31 pm, Thu, 13 October 22

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ