Heart Attack: ಫೋನ್ನಲ್ಲಿ ಮಾತನಾಡುತ್ತಿದ್ದಾಗಲೇ ಕುಸಿದು ಬಿದ್ದು ಮೆಡಿಕಲ್ ಶಾಪ್ ಮಾಲೀಕ ಸಾವು
ಹಾಸನ ಜಿಲ್ಲೆಯ ಹೊಳೆನರಸೀಪುರದ ಅರಣ್ಯ ಕಚೇರಿ ಬಳಿ ಇದ್ದ ಮೆಡಿಕಲ್ ಶಾಪ್ ಅಂಗಡಿ ಮಾಲಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹಾಸನ: ಇತ್ತೀಚಿಗೆ ಹೆಚ್ಚಾಗಿ ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ಹರೆಯದ ಯುವ ಜನತೆ ಹೃದಯಾಘಾತದಿಂದ (Heart Attack) ಸಾವನ್ನಪ್ಪುತ್ತಿದ್ದಾರೆ. ಇದು ಸಮಾಜದಲ್ಲಿ ಆತಂಕ ಮೂಡಿಸಿದ್ದರೂ, ಈ ಹೃದಯಾಘಾತಕ್ಕೆ ನಿಖರವಾದ ಕಾರಣ ಮಾತ್ರ ತಿಳಿದಿಲ್ಲ. ಇದು ಪೋಷಕರಲ್ಲಿ ತೀರ್ವ ಆತಂಕ ಮೂಡಿಸಿದೆ ಮತ್ತು ವೈದ್ಯರಿಗೆ ಸವಾಲಿನ ಸಂಗತಿಯಾಗಿದೆ. ಜಿಲ್ಲೆಯ ಹೊಳೆನರಸೀಪುರದ (Holenarsipura) ಅರಣ್ಯ ಕಚೇರಿ ಬಳಿ ಇದ್ದ ಮೆಡಿಕಲ್ ಶಾಪ್ (Medical Shop) ಮಾಲಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೆಡಿಕಲ್ ಶಾಪ್ ಮಾಲೀಕ ವಿರೂಪಾಕ್ಷ (40) ಮೃತ ದುರ್ದೈವಿ. ವಿರೂಪಾಕ್ಷ ಮೊಬೈಲ್ನಲ್ಲಿ ಮಾತನಾಡುತ್ತಿರುವಾಗ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾರೆ.
ಇದನ್ನೂ ಓದಿ:H3N2 ವೈರಸ್‌ನ ರೋಗ ಲಕ್ಷಣ, ಚಿಕಿತ್ಸೆ, ಜತೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ ಯಾವುವು?
ಕೊಡಗಿನಲ್ಲಿ ಹೃದಯಾಘಾತದಿಂದ 12 ವರ್ಷದ ಬಾಲಕ ಸಾವು
ಮಡಿಕೇರಿ: ಮಡಿಕೇರಿ ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮದ 12 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಕೀರ್ತನ್ (12) ಮೃತ ದುರ್ದೈವಿ. ಕೂಡುಮಂಗಳೂರು ಗ್ರಾಮದ ಮಂಜಾಚಾರಿ ಪುತ್ರ ಕೀರ್ತನ್ ಕೊಪ್ಪ ಭಾರತ ಮಾತಾ ಶಾಲೆಯಲ್ಲಿ 6 ನೇ ತರಗತಿ ಓದುತ್ತಿದ್ದನು. ಕೀರ್ತನ್ ಶನಿವಾರ ಜನವರಿ 7 ರಂದು ತಡರಾತ್ರಿ ಅನಾರೋಗ್ಯದಿಂದ ಬಳಲಿದ್ದನು, ಜನವರಿ 8 ರಂದು ಆಸ್ಪತ್ರೆಗೆ ಕರೆದೊಯ್ಯವ ವೇಳೆ ದಾರಿಮಧ್ಯೆ ಸಾವನ್ನಪ್ಪಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:50 am, Tue, 14 March 23




