ಮಲೆನಾಡು ಭಾಗದಲ್ಲಿ ದಟ್ಟವಾದ ಮಂಜು: ವಾಹನ ಸವಾರರು ಹೈರಾಣ

ಮಲೆನಾಡು ಭಾಗದಲ್ಲಿ ದಟ್ಟವಾದ ಮಂಜು: ವಾಹನ ಸವಾರರು ಹೈರಾಣ

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ದಟ್ಟವಾದ ಮಂಜು ಕವಿದ ವಾತಾವರಣವಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಚಲಾಯಿಸಲು ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಸಕಲೇಶಪುರ ಮೂಲಕ ಹಾದು ಹೋಗುವ ಬೆಂಗಳೂರು-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್​ನಲ್ಲಿ ದಟ್ಟವಾದ ಮಂಜು ಆವರಿಸಿದೆ. ಹೀಗಾಗಿ ವಾಹನ ಚಾಲನೆ ಮಾಡಲಾಗಲದೆ ರಸ್ತೆ ಬದಿಯಲ್ಲೇ ನೂರಾರು ಲಾರಿಗಳು ನಿಂತಿವೆ. ಕೆಲ ಪ್ರಯಾಣಿಕರು ಸಹ ಪ್ರಾಯಾಸದಿಂದಲೇ ವಾಹನಗಳನ್ನು ಓಡಿಸುತ್ತಿದ್ದಾರೆ.

Click on your DTH Provider to Add TV9 Kannada