ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಕೊಯ್ದು, ಮಗುವನ್ನೂ ಕೊಲ್ಲಲು ಯತ್ನಿಸಿದ ಗಂಡನನ್ನು ಹಿಡಿದ ಸಾರ್ವಜನಿಕರು

ಹೊಳೆನರಸೀಪುರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಅಂಬ್ಯುಲೆನ್ಸ್‌ನಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ಚೈತ್ರಾ ಕೊನೆಯುಸಿರೆಳೆದಿದ್ದಾರೆ.

ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಕೊಯ್ದು, ಮಗುವನ್ನೂ ಕೊಲ್ಲಲು ಯತ್ನಿಸಿದ ಗಂಡನನ್ನು ಹಿಡಿದ ಸಾರ್ವಜನಿಕರು
ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಕೊಯ್ದು, ಮಗುವನ್ನೂ ಕೊಲ್ಲಲು ಯತ್ನಿಸಿದ ಗಂಡನನ್ನು ಹಿಡಿದ ಸಾರ್ವಜನಿಕರು
TV9kannada Web Team

| Edited By: Ayesha Banu

Aug 13, 2022 | 4:07 PM

ಹಾಸನ: ಕೋರ್ಟ್ ಆವರಣದಲ್ಲೇ ಪತ್ನಿ ಕತ್ತು ಕೊಯ್ದು ಪತಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರದ ಕೋರ್ಟ್ ಆವರಣದಲ್ಲಿ ನಡೆದಿದೆ. ತಟ್ಟೆಕೆರೆ ಗ್ರಾಮದ ನಿವಾಸಿ ಚೈತ್ರಾ ಕತ್ತು ಕೊಯ್ದು ಪತಿ ಶಿವಕುಮಾರ್ ಅಟ್ಟಹಾಸ ಮೆರೆದಿದ್ದು ಚಿಕಿತ್ಸೆ ಫಲಿಸದೆ ಚೈತ್ರಾ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಹೊಳೆನರಸೀಪುರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಅಂಬ್ಯುಲೆನ್ಸ್‌ನಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ಚೈತ್ರಾ ಕೊನೆಯುಸಿರೆಳೆದಿದ್ದಾರೆ. ಕತ್ತು ಕೊಯ್ದು ಆರೋಪಿ ಶಿವಕುಮಾರ್‌ ಎಸ್ಕೇಪ್ ಆಗಿದ್ದು ಸಾರ್ವಜನಿಕರು ಆರೋಪಿ ಬೆನ್ನತ್ತಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ಹಿನ್ನೆಲೆ

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಚೈತ್ರಾ ಹಾಗು ಹೊಳೆನರಸೀಪುರ ತಾಲೂಕಿನ ಶಿವಕುಮಾರ್ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು. ಪತಿ ಪತ್ನಿ ನಡುವೆ ಹೊಂದಾಣಿಕೆ ಇಲ್ಲದಿದಕ್ಕೆ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆಹೋಗಿದ್ದರು. ಇಂದು ಹೊಳೆನರಸೀಪುರ ಹಿರಿಯ ಸಿವಿಲ್‌ನ್ಯಾಯಲಯದಲ್ಲಿ ರಾಜಿ ಸಂಧಾನ ಮಾತುಕತೆಗಾಗಿ ಬಂದು ಲೋಕ್ ಅದಾಲತ್ ನಲ್ಲಿ ಪತ್ನಿ ಜೊತೆ ಚನ್ನಾಗಿ ಇರುತ್ತೇನೆಂದು ಪತಿ ಶಿವಕುಮಾರ್ ಹೇಳಿಕೆ ಕೊಟ್ಟಿದ್ದ. ಮಕ್ಕಳಿಬ್ಬರ ಸಲುವಾಗಿ ಹೊಂದಾಣಿಕೆ ಜೀವನ ನಡೆಸುವಂತೆ ವಕೀಲರು ಹಾಗೂ ನ್ಯಾಯಾಧೀಶರು ಸಲಹೆ ಕೊಟ್ಟಿದ್ದರು. ಸಂಧಾನಕ್ಕೆ‌ ಒಪ್ಪಿ ಹೊರ ಬಂದು ಬಳಿಕ ಶೌಚಾಲಯದಲ್ಲಿ ಪತ್ನಿ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.

ಪತ್ನಿ ಕೊಂದು ಮಗುವನ್ನು ಹತ್ಯೆ ಮಾಡಲು ಮುಂದಾದಾಗ ಸ್ಥಳದಲ್ಲಿದ್ದವರಿಂದ ಮಗು ರಕ್ಷಣೆ ಮಾಡಲಾಗಿದೆ. ತಕ್ಷಣ ಚಾಕು ತೋರಿಸಿ ಎಲ್ಲರನ್ನು ಹೆದರಿಸಿ ಆರೋಪಿ ಶಿವಕುಮಾರ್ ಅಲ್ಲಿಂದ‌ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿ ಶಿವಕುಮಾರ್ ಬೆನ್ನಟ್ಟಿ ಹಿಡಿದು ಸಾರ್ವಜನಿಕರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಹೊಳೆನರಸೀಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರೇಮ‌ ಪ್ರಕರಣದಲ್ಲಿ ಇಬ್ಬರಿಗೆ ಚೂರಿ ಇರಿತ

ಕುಶಾಲನಗರದ ಕಾವೇರಿ ನಿಸರ್ಗ ಧಾಮದಲ್ಲಿ ಇಬ್ಬರಿಗೆ ಚಾಕು ಇರಿತವಾಗಿದೆ. ತ್ರಿಕೋನ ಪ್ರೇಮ ಪ್ರಕರದಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆಯಾಗಿದ್ದು ವಿಜಯ್ ಎಂಬಾತನಿಂದ ಇಬ್ಬರಿಗೆ ಚಾಕು ಇರಿತವಾಗಿದೆ. ಹಾಗೂ ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿ ವಿಜಯ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಬೆಂಗಳೂರಿನಲ್ಲಿ ವೃದ್ಧೆಯ ಕೈಕಾಲು ಕಟ್ಟಿಹಾಕಿ ಉಸಿರುಗಟ್ಟಿಸಿ ಕೊಲೆ

ಬೆಂಗಳೂರಿನ HSR ಲೇಔಟ್​ನ ಫುಡ್​ಡೇಸ್ ಸರ್ಕಲ್​ ಬಳಿ ಮನೆಯಲ್ಲಿ ವೃದ್ಧೆಯ ಕೈಕಾಲು ಕಟ್ಟಿಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಜಯಶ್ರೀ(60) ಎಂಬ ವೃದ್ಧೆಯನ್ನು ಕೆಲ ದುಷ್ಟರು ಕೊಲೆ ಮಾಡಿ ಪರಾರಿಯಾಗಿದ್ದಾರೆ. ನಿನ್ನೆ ತಡರಾತ್ರಿ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೆಚ್​ಎಸ್​ಆರ್​ ಲೇಔಟ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜ್ವರದಿಂದ ಸಿಲಿಕಾನ್​ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ

ಬೆಂಗಳೂರು: ಜ್ವರದಿಂದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನೀರಜ್ (8) ಕೊನೆಯುಸಿರೆಳೆದಿದ್ದಾನೆ. ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟಿದ್ದಾನೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸೂಲಿಬೆಲೆ ನಿವಾಸಿ ರವಿಕುಮಾರ್, ದಿವ್ಯಾ ದಂಪತಿ ಪುತ್ರ ನೀರಜ್​ ಮೃತಪಟ್ಟ ಬಾಲಕ. ಬಾಲಕ ನೀರಜ್ ಆಗಸ್ಟ್ 4ರಂದು ಸಿಲಿಕಾನ್​ಸಿಟಿ ಆಸ್ಪತ್ರೆಗೆ ದಾಖಲಾಗಿದ್ದ. ​ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡುವುದಾಗಿ ವೈದ್ಯರು ಹೇಳಿದ್ದರು. ಹೊಟ್ಟೆ ನೋವು ಎನ್ನುತ್ತಿದ್ದರೂ ಮೀಟಿಂಗ್​ನಿಂದ ವೈದ್ಯರು ಬಂದಿರಲಿಲ್ಲ. ವೈದ್ಯರ ನಿರ್ಲಕ್ಷ್ಯದಿಂದ ನೀರಜ್​ ಮೃತಪಟ್ಟಿರುವುದಾಗಿ ಪೋಷಕರು ಹೇಳಿದ್ದಾರೆ. ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada