AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ ಸಿದ್ದರಾಮೋತ್ಸವ ಮುಗಿಸಿ ಹಿಂದಿರುವಾಗ ಅಪಘಾತ: ಒಬ್ಬರ ಸಾವು, 8 ಜನರಿಗೆ ಗಾಯ

ನಿನ್ನೆ ಬುಧವಾರ ಕಾರ್ಯಕ್ರಮ ಮುಗಿಸಿ ವಾಪಸ್ ತೆರಳುವಾಗ ದುರ್ಘಟನೆ ಸಂಭವಿಸಿದೆ. ಲಾರಿಗೆ ಡಿಕ್ಕಿ ತಪ್ಪಿಸಲು ಹೋಗಿ ಗೂಡ್ಸ್ ವಾಹನ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಅಡಗನಹಳ್ಳಿ ಗ್ರಾಮದ ಫಸಿ ಉದ್ದೀನ್  ಮೃತಪಟ್ಟಿದ್ದಾರೆ.

ದಾವಣಗೆರೆ ಸಿದ್ದರಾಮೋತ್ಸವ ಮುಗಿಸಿ ಹಿಂದಿರುವಾಗ ಅಪಘಾತ: ಒಬ್ಬರ ಸಾವು, 8 ಜನರಿಗೆ ಗಾಯ
ದಾವಣಗೆರೆ ಸಿದ್ದರಾಮೋತ್ಸವ ಕಾರ್ಯಕ್ರಮ ಮುಗಿಸಿ ಹಿಂದಿರುವಾಗ ಅಪಘಾತ: ಒಬ್ಬರ ಸಾವು
TV9 Web
| Edited By: ಸಾಧು ಶ್ರೀನಾಥ್​|

Updated on:Aug 04, 2022 | 3:48 PM

Share

ಮೈಸೂರು/ದಾವಣಗೆರೆ: ಸಿದ್ದರಾಮಯ್ಯರ 75ನೇ ಜನ್ಮದಿನ ಹಿನ್ನೆಲೆ ದಾವಣಗೆರೆಯಲ್ಲಿ (davanagere) ನಡೆದ ಅಮೃತ ಮಹೋತ್ಸವ/ಸಿದ್ದರಾಮೋತ್ಸವ (siddaramotsava) ಕಾರ್ಯಕ್ರಮ ಮುಗಿಸಿ ಹಿಂದಿರುವಾಗ ಅಪಘಾತ ಸಂಭವಿಸಿದ್ದು, ಒಬ್ಬರು ಮೃತಪಟ್ಟಿದ್ದಾರೆ. ನಿನ್ನೆ ಬುಧವಾರ ಕಾರ್ಯಕ್ರಮ ಮುಗಿಸಿ ವಾಪಸ್ ತೆರಳುವಾಗ ದುರ್ಘಟನೆ (accident) ಸಂಭವಿಸಿದೆ. ಲಾರಿಗೆ ಡಿಕ್ಕಿ ತಪ್ಪಿಸಲು ಹೋಗಿ ಗೂಡ್ಸ್ ವಾಹನ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಅಡಗನಹಳ್ಳಿ ಗ್ರಾಮದ ಫಸಿ ಉದ್ದೀನ್ (51) ಮೃತಪಟ್ಟಿದ್ದಾರೆ. ಫಸಿ ಉದ್ದೀನ್ ಸ್ನೇಹಿತರ ಜೊತೆ ಕಾರ್ಯಕ್ರಮಕ್ಕೆ ಹೋಗಿದ್ದ. ಅಪಘಾತದಲ್ಲಿ 8 ಜನರಿಗೆ ಗಾಯಗಳಾಗಿದ್ದು, ಮೈಸೂರಿನ (Mysore) ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಸನ ಜಿಲ್ಲೆಯ (Hassan) ಅರಕಲಗೂಡು ತಾಲೂಕಿನ ಗಂಗೂರು ಹ್ಯಾಂಡ್ ಪೋಸ್ಟ್ ಬಳಿ ಅಪಘಾತ ಸಂಭವಿಸಿದೆ.

Published On - 3:46 pm, Thu, 4 August 22

Follow Us
TV9 Web
TV9 Web

TV9 Kannada

Read More