ಶ್ರವಣಬೆಳಗೂಳದಲ್ಲಿ ಪ್ರಾಕೃತ ವಿಶ್ವವಿದ್ಯಾಲಯದ ನೂತನ ಕಟ್ಟಡ ಬಾಹುಬಲಿ ಪ್ರಾಕೃತ ವಿದ್ಯಾಪೀಠಕ್ಕೆ ಹಸ್ತಾಂತರ
ಎರಡು ದಶಕಗಳ ಹಿಂದೆ ಆರಂಭಗೊಂಡಿದ್ದ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದಿದೆ. ಬರೊಬ್ಬರಿ 700 ವಿದ್ಯಾರ್ಥೀಗಳು ಇಲ್ಲಿ ಕಲಿಯುತ್ತಿದ್ದು, 30 ಎಕರೆ ವಿಸ್ತೀರ್ಣದಲ್ಲಿ ವಿಶಾಲ ಕ್ಯಾಂಪಸ್ ನಿರ್ಮಾಣವಾಗಿದೆ. ಪ್ರಾಕೃತ ಅಧ್ಯಯನದ ಬಗ್ಗೆ ಸಂಶೋಧನೆ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಇದೊಂದು ಜ್ಞಾನ ದೇಗುಲವಾಗಿ ತೆರೆದುಕೊಂಡಿದೆ.
ಹಾಸನ: ದಕ್ಷಿಣ ಭಾರತದ ಹೆಮ್ಮೆಯ ಪ್ರಕೃತಿ ವಿಶ್ವವಿದ್ಯಾನಿಲಯದ ಕಟ್ಟಡಗಳನ್ನು ಇಂದು ಸರ್ಕಾರ ಜೈನಕಾಶಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದ ಬಾಹುಬಲಿ ಪ್ರಾಕೃತ ವಿದ್ಯಾಪೀಠಕ್ಕೆ ಹಸ್ತಾಂತರ ಮಾಡಿದರು. ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ಯಾದ್ವಾದ ಸಿದ್ಧಾಂತ ಚಕ್ರವರ್ತಿ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಗಳ ಮಹತ್ವಾಕಾಂಕ್ಷೆಯ ಪ್ರಾಕೃತ ವಿಶ್ವವಿದ್ಯಾಲಯ ಕನಸು ನನಸಾಗುವ ಕಾಲ ಸನಿಹಕ್ಕೆ ಬಂದಿದೆ. ಇಂದು (ಮಾರ್ಚ್ 26) ಅಧಿಕೃತವಾಗಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೊಸದಾಗಿ ನಿರ್ಮಾಣವಾಗಿದ್ದ ನೂತನ ಕಟ್ಟಡಗಳನ್ನು(Building) ಬಾಹುಬಲಿ ಪ್ರಾಕೃತ ವಿದ್ಯಾಪೀಠಕ್ಕೆ (Bahubali Prakrit Vidyapeeth) ಹಸ್ತಾಂತರ ಮಾಡಿದರು.
1993ರಲ್ಲಿ ಅಂದಿನ ರಾಷ್ಟ್ರಪತಿಗಳಾಗಿದ್ದ ಶ್ರೀಯುತ ಶಂಕರ್ ದಯಾಳ್ ಶರ್ಮಾರಿಂದ ಉದ್ಘಾಟನೆಗೊಂಡಿದ್ದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಬಾಹುಬಲಿ ಪ್ರಾಕೃತ ವಿದ್ಯಾಪೀಠ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ದೇಶದ ರಾಜಮಹಾರಾಜರ ಕಾಲದ ಬಹುತೇಕ ಶಾಸನಗಳು, ಇತಿಹಾಸ ಎಲ್ಲವೂ ಪ್ರಾಕೃತ ಭಾಷೆಯಲ್ಲಿದೆ. ಪ್ರಾಕೃತ ಅಧ್ಯಯನ ಮತ್ತು ಸಂಶೋಧನೆಗಳಿಂದ ದೇಶದ ಇತಿಹಾಸ ತಿಳಿಯಲು ಸಹಕಾರಿಯಾಗಲಿ ಎಂಬ ಕಾರಣಕ್ಕೆ ಇದೊಂದು ದೊಡ್ಡ ಯೋಜನೆಯನ್ನು ಶ್ರೀ ಜೈನ ಮಠದ ಶ್ರೀಗಳು ಹಾಕಿಕೊಂಡಿದ್ದರು. ಅದರಂತೆ ಎರಡು ದಶಕಗಳ ಹಿಂದೆ ಆರಂಭಗೊಂಡಿದ್ದ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದಿದೆ. ಬರೊಬ್ಬರಿ 700 ವಿದ್ಯಾರ್ಥೀಗಳು ಇಲ್ಲಿ ಕಲಿಯುತ್ತಿದ್ದು, 30 ಎಕರೆ ವಿಸ್ತೀರ್ಣದಲ್ಲಿ ವಿಶಾಲ ಕ್ಯಾಂಪಸ್ ನಿರ್ಮಾಣವಾಗಿದೆ. ಪ್ರಾಕೃತ ಅಧ್ಯಯನದ ಬಗ್ಗೆ ಸಂಶೋಧನೆ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಇದೊಂದು ಜ್ಞಾನ ದೇಗುಲವಾಗಿ ತೆರೆದುಕೊಂಡಿದೆ.
ದಕ್ಷಿಣ ಭಾರತದ ಹೆಮ್ಮಯ ಕೇಂದ್ರವಾಗಲಿದೆ ಶ್ರವಣಬೆಳಗೊಳ
ಹಾಶನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಜೈನ ಕಾಶೀ, ಶಾಂತಮೂರ್ತಿ, ಭಗವಾನ್ ಬಾಹುಬಲಿ ಸ್ವಾಮಿ ನೆಲೆಸಿರೋ ಶ್ರವಣಬೆಳಗೊಳದ ಸಮೀಪ ಇರೋ ಸುಂಡಹಳ್ಳೀ ಗ್ರಾಮದಲ್ಲಿ ಸ್ಥಾಪನೆಯಾಗಿರುವ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆ ಶೀಘ್ರವೇ ವಿಶ್ವವಿದ್ಯಾಲಯ ಕೂಡ ಆಗಲಿದೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ. ಇಂದು ಬರೊಬ್ಬರಿ 21 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಕಟ್ಟಡಗಳನ್ನು ಸರ್ಕಾರದ ಪರವಾಗಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಆಗಿರೋ ಅಬಕಾರಿ ಸಚಿವ ಕೆ. ಗೋಪಾಲಯ್ಯ ಅಧೀಕೃತವಾಗಿ ಹಸ್ತಾಂತರ ಮಾಡಿದ್ದಾರೆ.
ಕ್ಷೇತ್ರದ ಶ್ರೀಗಳಾದ ಸ್ವಸ್ತ್ರಿಶ್ರಿ ಚಾರೂಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಗಳ ಸಾನ್ನಿಧ್ಯದಲ್ಲಿ ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಹಾಗು ಜಿಪಂ ಸಿಇಓ ಕಾಂತರಾಜು ಉಪಸ್ತಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಜೊತೆಗೆ 16ನೇ ಪ್ರಾಕೃತ ಘಟಿಕೋತ್ಸವ ಕೂಡ ಜರುಗಿ ಒಟ್ಟು 406 ವಿದ್ಯಾರ್ಥೀಗಳಿಗೆ ಪದವಿ ಪ್ರದಾನ ಮಾಡಲಾಯ್ತು. ದಕ್ಷಿಣ ಭಾರತದಲ್ಲಿರೋ ಏಕೈಕ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಇದಾಗಿದ್ದು, ಬೇರೆ ಜಿಲ್ಲೆ ರಾಜ್ಯಗಳಲ್ಲಿ ಅಧ್ಯಯನ ಕೇಂದ್ರಗಳಿದ್ದರೂ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳು ಇರೋದು ದಕ್ಷಿಣ ಭಾರತದಲ್ಲಿಯೇ ಅದರಲ್ಲೂ ಈ ಶ್ರವಣಬೆಳಗೊಳದಲ್ಲಿ ಮಾತ್ರವೇ ಆಗಿದೆ.
ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ಕೇಂದ್ರ
ಇಂದಿನ ಯುವ ಪೀಳೀಗೆಗೆ ಈ ಭಾಷೆಯ ಮಹತ್ವವನ್ನು ತಿಳಿಸುವ ಕಾರಣದಿಂದ ಮಹೊನ್ನತ ಆಸೆಯಿಂದ ಎಲ್ಲಾ ವಯೋಮಾನದವರಿಗೆ ಈ ಭಾಷೆಯ ಅರಿವು ಮೂಡಿಸಲು ಕ್ಷೇತ್ರದ ಸ್ವಸ್ತ್ರಿಶ್ರಿ ಚಾರೂಕೀರ್ತಿ ಭಟ್ಟಾರಕ ಸ್ವಾಮಿಜಿಗಳು ಮಾಡಿದ ಪ್ರಯತ್ನದ ಭಾಗವಾಗಿ ಇಂದು ಸಂಸ್ಥೆಯಲ್ಲಿ 700 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. 406 ಜನರಿಗೆ ಈ ಸಾಲಿನ ಪದವಿ ಪ್ರದಾನ ಮಾಡಲಾಗಿದೆ. ಕನ್ನಡ ಮತ್ತು ಹಿಂದಿ ಎರಡು ಮಾದ್ಯಮಗಳಲ್ಲಿಯೂ ಇಲ್ಲಿ ಅಧ್ಯಯನ ಮಾಡಬಹುದಾಗಿದ್ದು, 10 ವಿಭಾಗಗಳಲ್ಲಿ ಪದವಿ ಕೋರ್ಸ್ ಸ್ನಾತಕೋತ್ತರ ಕೋರ್ಸ್ಗಳ ಜೊತೆಗೆ ಹಲವು ವಿಭಾಗಗಳಲ್ಲಿ ಡಿಪ್ಲಮೋ ಕೋರ್ಸ್ಗಳ ಮೂಲಕವೂ ಪ್ರಾಕೃತವನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಸದ್ಯ ಮೈಸೂರು ವಿವಿ ಯಿಂದ ಸಂಶೋಧನಾ ಕೇಂದ್ರವಾಗಿಯೂ ಮಾನ್ಯತೆ ಹೊಂದಿರುವ ಈ ಸಂಸ್ಥೆ ಮುಂದೆ ವಿಶ್ವವಿದ್ಯಾಲಯವೂ ಆಗಲಿದೆ ಎನ್ನುವ ಆಸೆ ಚಿಗುರೊಡೆದಿದೆ.
ಪ್ರಾಕೃತ ಭಾಷೆ ಕೇವಮ ಧಾರ್ಮಿಕ ಸಾಹಿತ್ಯವಾಗಿರದೆ ಪುರಾಣ, ಚರಿತ್ರೆ, ಕಥೆಗಳಂತೆಯೇ ಗಣಿತ, ಅರ್ಥಶಾಸ್ತ್ರ, ವ್ಯಾಕರಣ, ಶಿಲ್ಪ, ಪುರಾತತ್ವ, ಜ್ಯೋತಿಷ್ಯ ಆಯುರ್ವೇಧ, ಆಗಮ ಮೊದಲಾದ ಜನೋಪಯೋಗಿ ಸಾಹಿತ್ಯ ಕೃತಿಗಳನ್ನು ಕೂಡ ಒಳಗೊಂಡಿದ್ದು, ಈ ಎಲ್ಲಾ ಪ್ರಾಕಾರಗಳ ಅಧ್ಯಯನ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ನೆರವಾಗುತ್ತಿದೆ. ಈ ಎಲ್ಲಾ ಪ್ರಯತ್ನಗಳ ಭಾಗವಾಗಿ ಇದೀಗ ಬಾಹುಬಲಿ ಪ್ರಾಕೃತ ವಿಶ್ವವಿದ್ಯಾನಿಯಲದ ಸ್ಥಾಪನೆಯ ಸಂಕಲ್ಪ ಸಾಕಾರವಾಗೋ ಕಾಲ ಕೂಡಿ ಬಂದಿದೆ.
ಬಾಹುಬಲಿ ಪ್ರಾಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಮಾಣವಾಗಿರೋ ನೂತನ ಕಟ್ಟಡಗಳನ್ನ ಬಾಹುಬಲಿ ಪ್ರಾಕೃತ ವಿದ್ಯಾಪೀಠಕ್ಕೆ ಹಸ್ತಾಂತರ ಮಾಡಲಾಗಿದೆ. ಶ್ರವಣಬೆಳಗೊಳಕ್ಕೆ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರೋ ಪುಣ್ಯ ಭೂಮಿ ಇದು. ಅನೇಕ ಮಹನೀಯರ ಪಾದಸ್ಪರ್ಶವಾದ ನೆಲ ಇದು. ಜಗತ್ತಿನ ನಾನಾ ಭಾಗಗಳಿಂದ ಇಲ್ಲಿಗೆ ಭಕ್ತರು ಬಂದು ಹೋಗುತ್ತಾರೆ. ಇಂತಹ ನಾಡಿನಲ್ಲಿ ಸುಸಜ್ಜಿತವಾದ ಪ್ರಾಕೃತ ವಿಶ್ವವಿದ್ಯಾನಿಯ ನಿರ್ಮಾಣ ಆಗುತ್ತಿರೋದು ಖುಷಿಯ ವಿಚಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.
ವರದಿ: ಕೆ.ಬಿ. ಮಂಜುನಾಥ್
ಇದನ್ನೂ ಓದಿ:
ಅಶೋಕ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಗುಪ್ತಾ ಬ್ರದರ್ಸ್ ವಿರುದ್ಧ ವಂಚನೆ ಆರೋಪ ಹೊರಿಸಿದ ಸಿಬಿಐ
Published On - 4:12 pm, Sat, 26 March 22