ನಾಡು, ನುಡಿ, ಜನ, ಜನರ ವಿಚಾರವೇ ಜೆಡಿಎಸ್ನ ಆದ್ಯತೆ: ಮಾಜಿ ಸಚಿವ ಹೆಚ್ಡಿ ರೇವಣ್ಣ
ಕಾಂಗ್ರೆಸ್ ಯಾತ್ರೆಗೆ ಜನರು ಅವರಾಗೆ ಬಂದಿದ್ದರೆ ಪೆಟ್ರೋಲ್ ಕೂಪನ್ ಯಾಕೆ ಕೊಟ್ಟರು ಹೇಳಿ. ಕುಮಾರಣ್ಣನ ಕಾಲದ ದುಡ್ಡನ್ನು ಸ್ವಲ್ಪನಾದ್ರು ಇನ್ವೆಷ್ಟ್ ಮಾಡಬೇಕಲ್ಲಾ ಸರ್ ಹಾಗಾಗಿ ಮಾಡುತ್ತಿದ್ದಾರೆ ಎಂದು ಪಾದಯಾತ್ರೆ ಬಗ್ಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವ್ಯಂಗ್ಯ ಮಾಡಿದ್ದಾರೆ.
ಬೆಂಗಳೂರು: ನಗರಕ್ಕೆ 9 ಟಿಎಂಸಿ ನೀರು ಮೀಸಲಿಟ್ಟಿದ್ದು ಯಾರು? ಬೆಂಗಳೂರು ನಗರಕ್ಕೆ ನೀರು ಕೊಟ್ಟಿದ್ದು ಯಾರು ಸ್ಚಾಮಿ? ನಮಗೆ ಚುನಾವಣೆ ಅಧಿಕಾರ ಮುಖ್ಯ ಅಲ್ಲಾ. ನಾಡಿನ ನೆಲ ಜನ, ಜನರ ವಿಚಾರ ಮುಖ್ಯ ಎನ್ನುವುದೇ ನಮಗೆ ಆದ್ಯತೆ. ನೀವು ಪಾದಯಾತ್ರೆ (padayatra) ಮಾಡ್ಕೊಳಿ ನಮ್ಮನ್ನು ಯಾಕೆ ಮಧ್ಯ ತರ್ತೀರಾ ಎಂದು ಹಾಸನ ನಗರದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ತಿರುಗೇಟು ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು ಎಪಿಎಂಸಿ ಕಾಯ್ದೆ ಕಾಂಗ್ರೆಸ್ನವರೇ ಸಿದ್ಧಪಡಿಸಿದ ಕಾಯ್ದೆ. ಬಿಜೆಪಿಯವರು ಅದನ್ನು ಸ್ವಲ್ಪ ಬದಲಾವಣೆ ಮಾಡಿದ್ದರು. ಈಗ ಕಾಂಗ್ರೆಸ್ ಅವರು ಯಾವ ಉದ್ದೇಶಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೊ ಗೊತ್ತಿಲ್ಲ. ದೇಶದಲ್ಲಿ ಕಾಂಗ್ರೆಸ್ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕೆಲವರು ಬಿಬಿಎಂಪಿ ಚುನಾವಣೆ ಬರುತ್ತಿದೆ ಅದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಕಾಂಗ್ರೆಸ್ ಯಾತ್ರೆಗೆ ಜನರು ಅವರಾಗೆ ಬಂದಿದ್ದರೆ ಪೆಟ್ರೋಲ್ ಕೂಪನ್ ಯಾಕೆ ಕೊಟ್ಟರು ಹೇಳಿ. ಕುಮಾರಣ್ಣನ ಕಾಲದ ದುಡ್ಡನ್ನು ಸ್ವಲ್ಪನಾದ್ರು ಇನ್ವೆಷ್ಟ್ ಮಾಡಬೇಕಲ್ಲಾ ಸರ್ ಹಾಗಾಗಿ ಮಾಡುತ್ತಿದ್ದಾರೆ ಎಂದು ಪಾದಯಾತ್ರೆ ಬಗ್ಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವ್ಯಂಗ್ಯ ಮಾಡಿದ್ದಾರೆ.
ಹಾಸನ: ರಿಂಗ್ ರಸ್ತೆ ವಿಚಾರದಲ್ಲಿ ಜೆಡಿಎಸ್, ಬಿಜೆಪಿ ನಡುವೆ ಜಟಾಪಟಿ ಹಾಸನದ ರಿಂಗ್ ರಸ್ತೆಯಲ್ಲಿ ನಡೆಯುತ್ತಿರುವುದು ನನ್ನ ಅವಧಿಯ ಅನುದಾನದ ಕಾಮಗಾರಿ. ಡೇರಿ ವೃತ್ತದಿಂದ ಬೇಲೂರು ರಸ್ತೆವರೆಗೆ 25 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ನಡೆಯುತ್ತಿದೆ ಎಂದು ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಬಳಿಕ ಜೆಡಿಎಸ್ ಮುಖಂಡನಿಗೆ ಬಿಜೆಪಿ ಕಾರ್ಯಕರ್ತರಿಂದ ಧಮ್ಕಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಾಸನದಲ್ಲಿ ಪೊಲೀಸರು ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ನೋವಾದರೆ ಬೀದಿಗಿಳಿದು ಹೋರಾಡುತ್ತೇವೆ. ಕೂಡಲೆ ಜಿಲ್ಲಾಡಳಿತ ಅಗಿಲೆ ಯೋಗೇಶ್ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜೋಡೆತ್ತುಗಳಲ್ಲಿ ಒಂದು ಈಗ ಮೇಕೆದಾಟು ಕಡೆ ಹೊಂಟೈತೆ ಎಂದು ಡಿಕೆ ಶಿವಕುಮಾರ್ಗೆ ಲೇವಡಿ ಮಾಡಿದ ರೇವಣ್ಣ
ಮೇಕೆದಾಟು ಪಾದಯಾತ್ರೆ ವೇಳೆ ಪರಸ್ಪರ ತಬ್ಬಿಕೊಂಡು ಉಭಯ ಕುಶಲೋಪರಿ ವಿಚಾರಿಸಿಕೊಂಡ ಸಾಧು ಕೋಕಿಲ-ಮಧು ಬಂಗಾರಪ್ಪ
Published On - 6:44 pm, Mon, 10 January 22