ದೂರು ಸ್ವೀಕಾರ ನಿರ್ಲಕ್ಷ್ಯ: ನಾಲ್ವರು ಪೊಲೀಸ್ ಸಿಬ್ಬಂದಿ ಅಮಾನತು

ನಗರದ ಬಿಎಂ ರಸ್ತೆಯ ರೈಲ್ವೆ ಟ್ರ್ಯಾಕ್ ಬಳಿ ಜನವರಿ 20ರ  ಮದ್ಯರಾತ್ರಿ ರೈಲ್ವೆ ನೌಕರರೊಬ್ಬರ ಹತ್ತು ಸಾವಿರ ನಗದು ಹಾಗು ಮೊಬೈಲ್ ಅಪರಿಚಿತರಿಂದ ಧರೋಡೆಯಾಗಿತ್ತು.

  • TV9 Web Team
  • Published On - 18:18 PM, 27 Jan 2021
ಜಿಲ್ಲಾ ಪೊಲೀಸ್ ಕಛೇರಿ

ಹಾಸನ: ದೂರು ಸ್ವೀಕರಿಸಲು ನಿರ್ಲಕ್ಷ್ಯ ತೋರಿದ ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಹಾಸನ ಎಸ್​ಪಿ ಶ್ರೀನಿವಾಸ್ ಗೌಡ ಆದೇಶ ನೀಡಿದ್ದಾರೆ.

ನಗರದ ಬಿಎಂ ರಸ್ತೆಯ ರೈಲ್ವೆ ಟ್ರ್ಯಾಕ್ ಬಳಿ ಜನವರಿ 20ರ  ಮಧ್ಯರಾತ್ರಿ ಅಪರಿಚಿತರು ರೈಲ್ವೆ ನೌಕರರೊಬ್ಬರಿಂದ 10 ಸಾವಿರ ನಗದು ಹಾಗೂ ಮೊಬೈಲ್ ದರೋಡೆ ಮಾಡಿದ್ದರು. ಈ ಸಂಬಂಧ ಹಾಸನ ನಗರ ಠಾಣೆಗೆ ದೂರು ನೀಡಲು ರೈಲ್ವೆ ನೌಕರ ಶಾಂತಿಭೂಷಣ್ ತೆರಳಿದ್ದರು. ಆದರೆ ದೂರು ಸ್ವೀಕರಿಸದೆ  ಬಡಾವಣೆ ಠಾಣೆಗೆ ಹೋಗಿ ಎಂದು ಸೆಂಟ್ರಿ ಹಾಗು ಎಸ್ಎಚ್ಒ ಕಳುಹಿಸಿದ್ದರು. ನಂತರ ಬಡಾವಣೆ ಠಾಣೆಗೆ ದೂರು ನೀಡಲು ಹೋದರು. ಅಲ್ಲಿನ ಸೆಂಟ್ರಿ ಹಾಗು ಎಸ್ಎಚ್ಒ ಸಹ ದೂರು ಸ್ವೀಕರಿಸಿರಲಿಲ್ಲ.

ಈ ಬಗ್ಗೆ ರೈಲ್ವೆ ನೌಕರ ಶಾಂತಿಭೂಷಣ್ ಎಸ್​ಪಿಗೆ ದೂರು ನೀಡಿದ್ದು, ದೂರು ಸ್ವೀಕರಿಸದೆ ನಿರ್ಲಕ್ಷ್ಯ ತೋರಿದ ಎರಡೂ ಠಾಣೆಯ ಇಬ್ಬರು ಸೆಂಟ್ರಿ ಹಾಗೂ ಇಬ್ಬರು ಎಸ್ಎಚ್ಒ ರನ್ನು ಅಮಾನತುಗೊಳಿಸಿದ್ದಾರೆ.