ಜೀವನಾಂಶ ಕೇಳಿದ್ದ ಪತ್ನಿಯ ಕತ್ತು ಸೀಳಿ ಹತ್ಯೆಗೈದಿದ್ದ ಪ್ರಕರಣ: ಹತ್ತು ದಿನಗಳ ಬಳಿಕ ಹಂತಕ ಪತಿ ಅರೆಸ್ಟ್
ಶಿವಗಂಗಾ ಪಾಲ್ಸ್ಗೆ ಪ್ರವಾಸಕ್ಕೆ ತೆರಳಿದ್ದ ಯುವತಿ ಕಾಲುಜಾರಿ ಬಿದ್ದು ನೀರುಪಾಲಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಿವಗಂಗಾ ಪಾಲ್ಸ್ನಲ್ಲಿ ನಡೆದಿದೆ.
ಹಾಸನ: ಜೀವನಾಂಶ ಕೇಳಿದ್ದ ಪತ್ನಿಯನ್ನು ಕುತ್ತಿಗೆ ಸೀಳಿ ಪತಿಯೇ ಹತ್ಯೆಗೈದ (murder) ಪ್ರಕರಣ ಸಂಬಂಧ ಹಂತಕ ಪತಿ ಜಗದೀಶ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊಲೆ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹಂತಕ ಪತಿ ಊರೂರು ತಿರುಗುತ್ತಿದ್ದ. ಜಿಲ್ಲೆಯ ಬೇಲೂರು ಪಟ್ಟಣದ ಪಂಪ್ ಹೌಸ್ ರಸ್ತೆಯಲ್ಲಿ ಮಹಿಳೆ ಅಶ್ವಿನಿ(36) ಕೊಲೆಯಾಗಿತ್ತು. ಜುಲೈ 20ರ ಸಂಜೆ ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಕೊಲೆಯಾಗಿರೊ ವಿಚಾರ ಬೆಳಕಿಗೆ ಬಂದಿದೆ. ಮದ್ಯಾಹ್ನ ಊಟಕ್ಕೆಂದು ತಾನೇ ಪತ್ನಿಯನ್ನು ಕರೆತಂದು ಮನೆಯಲ್ಲಿ ಇರಿದು ಕೊಂದು ಪಾಪಿ ಪತಿ ಎಸ್ಕೇಪ್ ಆಗಿದ್ದ. ಕೊಲೆ ನಡೆದ ಹತ್ತು ದಿನಗಳ ಬಳಿಕ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ: ಒಂಟಿ ಮಹಿಳೆಯರೇ ಇವರ ಟಾರ್ಗೆಟ್: ಟ್ರಾಪ್ ಮಾಡಿ ವಿಕೃತ ಮೆರೆದು ದೋಚುತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್
17 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಅಂತರ್ಜಾತಿ ವಿವಾಹ ಆಗಿದ್ದ ಜೋಡಿ, ಪತಿಯ ಕಿರುಕುಳದಿಂದ ಬೇಸತ್ತು ವಿಚ್ಚೇಧನಕ್ಕೆ ಅರ್ಜಿ ಹಾಕಿ ಪತ್ನಿ ಜೀವನಾಂಶ ಕೇಳಿದ್ದಳು. ಜೀವನಾಂಶ ಕೊಡಲಾಗದೆ ಆಕೆಯ ಮನವೊಲಿಸಲು ಯತ್ನಿಸಿ ಒಪ್ಪದಿದ್ದಾಗ ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ. ಕೊಲೆಗೂ ಮುನ್ನ ಚಿಕನ್ ಶಾಪ್ ಹಾಗೂ ಮೀನಿನ ಅಂಗಡಿಯಲ್ಲಿ ಚಾಕುವಿನಿಂದ ದೇಹ ಕತ್ತರಿಸೋ ಬಗ್ಗೆ ಪಾಪಿ ಪತಿ ರಿಹರ್ಸಲ್ ನಡೆಸಿದ್ದ ಎನ್ನಲಾಗಿದೆ. ಕಡೆಗೆ ಅಲ್ಲಿಂದಲೇ ಕದ್ದು ತಂದಿದ್ದ ಚಾಕುವಿನಿಂದ ಪತ್ನಿಯನ್ನ ಇರಿದು ಹತ್ಯೆ ಮಾಡಲಾಗಿದೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ನಡೆದಿತ್ತು.
ಇದನ್ನೂ ಓದಿ; ನಾನು ನಿಮ್ಮ ವಿದ್ಯಾರ್ಥಿ, ತಪ್ಪಾಯ್ತು ಬಿಟ್ಟು ಬಿಡಿ ಟೀಚರ್; ಶಿಕ್ಷಕಿ ಮನೆಗೆ ಕನ್ನ ಹಾಕೋಕೆ ಯತ್ನಿಸಿದ ವಿದ್ಯಾರ್ಥಿ ಅಂದರ್
ಕಾಲುಜಾರಿ ಬಿದ್ದು ಯುವತಿ ನೀರುಪಾಲು
ಕಾರವಾರ: ಶಿವಗಂಗಾ ಪಾಲ್ಸ್ಗೆ ಪ್ರವಾಸಕ್ಕೆ ತೆರಳಿದ್ದ ಯುವತಿ ಕಾಲುಜಾರಿ ಬಿದ್ದು ನೀರುಪಾಲಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಿವಗಂಗಾ ಪಾಲ್ಸ್ನಲ್ಲಿ ನಡೆದಿದೆ. ರಾಗಿ ಹೊಸಳ್ಳಿಯ ಕಸಗೆ ಗ್ರಾಮದ ತ್ರಿವೇಣಿ ಅಂಬಿಗ (20) ನೀರುಪಾಲಾದ ಯುವತಿ. ಆರು ಜನ ಸ್ನೇಹಿತರೊಂದಿಗೆ ಶಿವಗಂಗಾ ಪಾಲ್ಸ್ಗೆ ಯುವತಿ ಪ್ರವಾಸಕ್ಕೆ ತೆರಳಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನಿಂದ ಶವಕ್ಕಾಗಿ ಶೋಧ ನಡೆದಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.