Vidya Balan: ‘ನಮ್ಮ ಕಣ್ಣುಗಳೂ ತಂಪಾಗಲಿ ಬಿಡಿ’: ರಣವೀರ್ ಬೆತ್ತಲೆ ಫೋಟೋ ಕಂಡು ವಿದ್ಯಾ ಬಾಲನ್ ಪ್ರತಿಕ್ರಿಯೆ
Vidya Balan | Ranveer Singh Viral Photo: ಮುಂಬೈನ ಕಾರ್ಯಕ್ರಮವೊಂದಕ್ಕೆ ವಿದ್ಯಾ ಬಾಲನ್ ಹಾಜರಿ ಹಾಕಿದ್ದರು. ಈ ವೇಳೆ ಅವರಿಗೆ ರಣವೀರ್ ಸಿಂಗ್ ಫೋಟೋ ಬಗ್ಗೆ ಪ್ರಶ್ನೆ ಎದುರಾಯಿತು.
ಸಿನಿಮಾಗಳಿಗಿಂತಲೂ ಹೆಚ್ಚಾಗಿ ಬೆತ್ತಲೆ ಫೋಟೋ ಕಾರಣದಿಂದ ನಟ ರಣವೀರ್ ಸಿಂಗ್ (Ranveer Singh) ಹೆಚ್ಚು ಹೈಲೈಟ್ ಆಗಿದ್ದಾರೆ. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದದ ಚರ್ಚೆ ಜೋರಾಗಿದೆ. ಪ್ರತಿಷ್ಠಿತ ‘ಪೇಪರ್’ ಮ್ಯಾಗಜಿನ್ ಸಲುವಾಗಿ ರಣವೀರ್ ಸಿಂಗ್ ಅವರು ಬೆತ್ತಲಾಗಿ ಪೋಸ್ ನೀಡಿರುವುದನ್ನು ಕೆಲವರು ಖಂಡಿಸಿದ್ದಾರೆ. ನಗ್ನ ಫೋಟೋಗಳು (Ranveer Singh Photos) ವೈರಲ್ ಆದ ಬಳಿಕ ಅವರ ಮೇಲೆ ಕೇಸ್ ಕೂಡ ದಾಖಲಾಯಿತು. ಆದರೆ ಈ ವಿಚಾರದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ (Vidya Balan) ಅವರ ವಾದವೇ ಬೇರೆ. ರಣವೀರ್ ಸಿಂಗ್ಗೆ ಅವರು ಬೆಂಬಲ ನೀಡಿದ್ದಾರೆ. ಅಷ್ಟೇ ಅಲ್ಲದೇ, ‘ನಮ್ಮ ಕಣ್ಣುಗಳು ಕೂಡ ತಂಪಾಗಲಿ ಬಿಡಿ’ ಎಂದು ಅವರು ತಮಾಷೆ ಮಾಡಿದ್ದಾರೆ. ಅವರು ಈ ರೀತಿ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.
ಸಾಮಾನ್ಯವಾಗಿ ನಟಿಯರು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಚಿಕ್ಕ ಬಟ್ಟೆ ಧರಿಸಿ ಫೋಟೋಶೂಟ್ ಮಾಡಿಸುವ ನಟಿಯರು ಹಲವರು ಇದ್ದಾರೆ. ಅದು ಅವರವರ ಆಯ್ಕೆಗೆ ಬಿಟ್ಟ ವಿಚಾರ. ಆದರೆ ರಣವೀರ್ ಸಿಂಗ್ ಅವರು ಹೀಗೆ ಬೆತ್ತಲೆ ಫೋಟೋಶೂಟ್ ಮಾಡಿರುವುದು ಅಚ್ಚರಿ ಮೂಡಿಸಿದೆ. ಮುಂಬೈನ ಕಾರ್ಯಕ್ರಮವೊಂದಕ್ಕೆ ವಿದ್ಯಾ ಬಾಲನ್ ಹಾಜರಿ ಹಾಕಿದ್ದರು. ಈ ವೇಳೆ ಅವರಿಗೆ ರಣವೀರ್ ಸಿಂಗ್ ಫೋಟೋ ಬಗ್ಗೆ ಪ್ರಶ್ನೆ ಎದುರಾಯಿತು.
‘ಇದರಲ್ಲಿ ಸಮಸ್ಯೆ ಏನಿದೆ? ಮೊದಲ ಬಾರಿಗೆ ಒಬ್ಬ ಪುರುಷ ಈ ರೀತಿ ಮಾಡಿದ್ದಾನೆ. ನಮ್ಮ ಕಣ್ಣುಗಳು ಕೂಡ ತಂಪಾಗಲಿ ಬಿಡಿ. ಕೆಲವರಿಗೆ ಮಾಡಲು ಕೆಲಸವಿಲ್ಲ. ಅಂಥವರು ಕೇಸ್ ಹಾಕಿಕೊಂಡು ಸಮಯ ಹಾಳು ಮಾಡುತ್ತಿದ್ದಾರೆ. ನಿಮಗೆ ಆ ಫೋಟೋ ಇಷ್ಟ ಆಗಿಲ್ಲ ಎಂದರೆ ಅದನ್ನು ಎಸೆಯಿರಿ. ನಿಮಗೆ ಏನು ಅನಿಸುತ್ತೋ ಅದನ್ನು ಮಾಡಿ. ಅದಕ್ಕೆಲ್ಲ ಎಫ್ಐಆರ್ ಯಾಕೆ?’ ಎಂದಿದ್ದಾರೆ ವಿದ್ಯಾ ಬಾಲನ್.
ರಣವೀರ್ ಸಿಂಗ್ ಅವರು ನೇರ ನಡೆ-ನುಡಿಯ ಕಾರಣದಿಂದ ಫೇಮಸ್ ಆಗಿದ್ದಾರೆ. ತಮಗೆ ಇಷ್ಟಬಂದ ರೀತಿಯಲ್ಲಿ ಅವರು ಬಟ್ಟೆ ಧರಿಸುತ್ತಾರೆ. ಎಷ್ಟೇ ಟ್ರೋಲ್ ಆದರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಈ ಬಾರಿ ಅವರು ಬಟ್ಟೆಯನ್ನೇ ಧರಿಸಿದೇ ಪೋಸ್ ನೀಡಿ ಸಖತ್ ಟ್ರೋಲ್ ಆಗುತ್ತಿದ್ದಾರೆ. ಈ ವಿಚಾರದ ಬಗ್ಗೆ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.