ಹಾವೇರಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಮದುಮಗಳಿಗಷ್ಟೇ ಅಲಂಕಾರ, ಮದುವೆ ಮನೆಗಿಲ್ಲ ತೋರಣ ಭಾಗ್ಯ

ಯಾಲಕ್ಕಿ ಕಂಪಿನ ನಾಡು ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತೇರು ಎಳೆಯೋಕೆ ಒಂದೂವರೆ ತಿಂಗಳಷ್ಟೆ ಬಾಕಿ ಇದೆ. ಸಮ್ಮೇಳನದ ಸ್ಥಳದಲ್ಲಿ ಸಿದ್ಧತಾ ಕಾರ್ಯಗಳು ನಡೆದಿದ್ರೆ, ನಗರದಲ್ಲಿ ಮಾತ್ರ ಅಷ್ಟಾಗಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ‌.

ಹಾವೇರಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಮದುಮಗಳಿಗಷ್ಟೇ ಅಲಂಕಾರ, ಮದುವೆ ಮನೆಗಿಲ್ಲ ತೋರಣ ಭಾಗ್ಯ
ಹಾವೇರಿ
Follow us
TV9 Web
| Updated By: ಆಯೇಷಾ ಬಾನು

Updated on:Nov 21, 2022 | 8:20 AM

ಹಾವೇರಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಕಷ್ಟು ಜನ ಸಾಹಿತಿಗಳು, ಬುದ್ದಿಜೀವಿಗಳು ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದ ಜನರ ದಂಡೇ ಬರುತ್ತೆ. ಅದರೊಂದಿಗೆ ಸಮ್ಮೇಳನ ನಡೆಸೋ ಊರು ಕೂಡ ಸಾಕಷ್ಟು ಅಭಿವೃದ್ಧಿ ಆಗುತ್ತದೆ ಅಂತಾರೆ. ಆದ್ರೆ ಯಾಲಕ್ಕಿ ಕಂಪಿನ ನಾಡು ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತೇರು ಎಳೆಯೋಕೆ ಒಂದೂವರೆ ತಿಂಗಳಷ್ಟೆ ಬಾಕಿ ಇದೆ. ಸಮ್ಮೇಳನದ ಸ್ಥಳದಲ್ಲಿ ಸಿದ್ಧತಾ ಕಾರ್ಯಗಳು ನಡೆದಿದ್ರೆ, ನಗರದಲ್ಲಿ ಮಾತ್ರ ಅಷ್ಟಾಗಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ‌.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ

ಯಾಲಕ್ಕಿ ಕಂಪಿನ ನಾಡು ಹಾವೇರಿಯಲ್ಲಿ ಜನೇವರಿ 6,7 ಮತ್ತು 8ರಂದು ಮೂರು ದಿನಗಳ ಕಾಲ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನಕ್ಕೆ ಈಗಾಗಲೇ ದಿನಾಂಕ ನಿಗದಿ ಆಗಿದ್ದು, ಹಾವೇರಿ ನಗರದ ಅಜ್ಜಯ್ಯನ ಗದ್ದುಗೆ ಬಳಿ ಸಮ್ಮೇಳನ ನಡೆಸೋಕೆ ಜಾಗೆ ಅಂತಿಮಗೊಳಿಸಲಾಗಿದೆ. ಸಮ್ಮೇಳನಕ್ಕೆ ಇನ್ನೂ ಒಂದೂವರೆ ತಿಂಗಳಷ್ಟೆ ಬಾಕಿ ಉಳಿದಿದೆ. ಸಮ್ಮೇಳನ ನಡೆಸೋ ಜಾಗದಲ್ಲಿ ಈಗಾಗಲೆ ಸಿದ್ಧತಾ ಕಾರ್ಯಗಳು ಶುರುವಾಗಿದೆ. ಸಮ್ಮೇಳನ ನಡಿತಿರೋ ಹಾವೇರಿ ಹಲವು ಅಪರೂಪಗಳಿಗೆ ಸಾಕ್ಷಿಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಹಾವೇರಿ ಜಿಲ್ಲೆಯವರೆ. ಹೀಗಾಗಿ ಸಮ್ಮೇಳನದ ಜೊತೆಜೊತೆಗೆ ಹಾವೇರಿ ಕೂಡ ಸಾಕಷ್ಟು ಅಭಿವೃದ್ಧಿ ಆಗುತ್ತದೆ ಅನ್ನೋದು ಸಾಹಿತಿಗಳು ಹಾಗೂ ಜನರ ನಿರೀಕ್ಷೆ ಆಗಿದೆ. ಸಮ್ಮೇಳನದ ಪೂರ್ವಭಾವಿಯಾಗಿ ಕೆಲವು ದಿನಗಳ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಹಾಗೂ ವಿವಿಧ ಸಂಘಟನೆಗಳ ಜೊತೆ ಸಭೆಗಳನ್ನು ನಡೆಸಲಾಗಿದೆ. ಈವರೆಗೆ ನಡೆದಿರೋ 85 ಸಮ್ಮೇಳನಗಳಿಗಿಂತಲೂ ವಿಭಿನ್ನವಾಗಿ ಮತ್ತು ವಿಶೇಷವಾಗಿ ಸಮ್ಮೇಳನ ನಡೆಸಲು ನಿರ್ಣಯಿಸಲಾಗಿದೆ.

kannada sahitya sammelana (1)

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ

ಈ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಜಿಲ್ಲಾ ಮಟ್ಟದ ಬೇರೆ ಬೇರೆ ಅಧಿಕಾರಿಗಳ ನೇತೃತ್ವದಲ್ಲಿ 21 ಸಮಿತಿಗಳನ್ನು ರಚಿಸಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಹಿಂದಿನ ಸಮ್ಮೇಳನದ ಆಧಾರದ ಮೇಲೆ 25 ಸಾವಿರ ಜನರಿಗೆ ವಸತಿ ಕಲ್ಪಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಸಾರಿಗೆ, ಆರೋಗ್ಯ, ಸ್ವಚ್ಚತೆ, ಪೊಲೀಸ್ ಬಂದೂಬಸ್ತ್​ಗೆ ವಿಶೇಷ ತಂಡ ರಚಿಸಲಾಗಿದೆ. ಹಾಗೂ 3 ಲಕ್ಷ ಜನಕ್ಕೇ ಸಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಊಟದ ವ್ಯವಸ್ಥೆಗೆ ಸಿದ್ಧತೆ ನಡೆದಿದೆ. ಸಮ್ಮೇಳನ ಜಾಗದಿಂದ 21 ಕಿ.ಮೀ. ಮೈಸೂರು ದಸರಾಗಿಂತ ಅದ್ಧೂರಿಯ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾಹಿತಿ ನೀಡಿದ್ದಾರೆ.

ಮದುಮಗಳಿಗಷ್ಟೇ ಅಲಂಕಾರ, ಮದುವೆ ಮನೆಗಿಲ್ಲ ತೋರಣ ಭಾಗ್ಯ

ಸಮ್ಮೇಳನಕ್ಕೆ ಸೇರೋ ಲಕ್ಷ ಲಕ್ಷ ಜನರಿಗೆ ಊಟದ ವ್ಯವಸ್ಥೆ, ವಸತಿ ವ್ಯವಸ್ಥೆ ಸೇರಿದಂತೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಈಗಾಗಲೆ ಸಿದ್ಧತೆಗಳು ನಡೆದಿವೆ. ಆದ್ರೆ ಸಮ್ಮೇಳನ ನಡೆಯೋ ಹಾವೇರಿಯಲ್ಲಿ ಮಾತ್ರ ಈವರೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಕಿತ್ತು ಹೋಗಿರೋ ರಸ್ತೆಗಳು ಈಗಲೂ ಹಾಗೆ ಇವೆ. ನಿತ್ಯವೂ ಜನರಿಗೆ ಧೂಳಿನ ಮಜ್ಜನ ಆಗ್ತಿದೆ. ಜಿಲ್ಲಾ ಕೇಂದ್ರ ಆಗಿರೋ ಹಾವೇರಿಯ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಚರಂಡಿ ಅದು ಇದು ಅಂತಾ ಜಿಲ್ಲಾ ಕೇಂದ್ರವಾಗಿರೋ ಹಾವೇರಿಯಲ್ಲಿ ಹಲವು ಮೂಲಭೂತ ಸೌಕರ್ಯಗಳ ಕೊರತೆ ಇದೆ. 86ನೇ ಅಖಿಲ ಭಾರತ ಸಮ್ಮೇಳನ ನಡಿತಿರೋದ್ರಿಂದ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಅಂತಾ ಜನರು ನಿರೀಕ್ಷೆ ಮಾಡಿದ್ರು.

kannada sahitya sammelana (2)

ಹಾಳಾಸ ರಸ್ತೆಗಳಿಗಿಲ್ಲ ದುರಸ್ತಿ ಭಾಗ್ಯ

ನಗರದಲ್ಲಿ ರಸ್ತೆಗಳ ಡಾಂಬರೀಕರಣ, ಚರಂಡಿ ದುರಸ್ಥಿ ಕಾರ್ಯ ಸೇರಿದಂತೆ ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಇಪ್ಪತ್ತೈದು ಕೋಟಿ ರುಪಾಯಿ ವಿಶೇಷ ಅನುದಾನ ನೀಡುವಂತೆ ನಗರಸಭೆ ವತಿಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹಾವೇರಿ ಸಿಎಂ ಬಸವರಾಜ ಬೊಮ್ಮಾಯಿಯವರ ತವರುಕ್ಷೇತ್ರದ ಜಿಲ್ಲೆ ಆಗಿದ್ದರಿಂದ ನಗರದ ಅಭಿವೃದ್ಧಿಗೆ ಹೆಚ್ಚಿನ ಹಣ ಬರುತ್ತದೆ ಅಂತಾ ನಿರೀಕ್ಷೆ ಕೂಡ ಮಾಡಲಾಗಿತ್ತು. ಆದ್ರೆ ಸಮ್ಮೇಳನಕ್ಕೆ ಇನ್ನೂ ಒಂದೂವರೆ ತಿಂಗಳು ಮಾತ್ರ ಬಾಕಿ ಇದ್ರೂ ಈವರೆಗೂ ನಗರದಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದಿಂದ ಬಿಡಿಗಾಸು ಹಣ ಬಂದಿಲ್ಲ. ನಗರಸಭೆಯ ನಗರೋತ್ಥಾನದ ಹಣದಲ್ಲೇ ಕೆಲವೊಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗ್ತಿದೆ. ಸರಕಾರದಿಂದ ವಿಶೇಷ ಅನುದಾನ ಬರದೆ ನಗರದ ಸೌಂದರೀಕರಣ ಮಾಡೋದು ಹೇಗೆ ಅನ್ನೋ ಪ್ರಶ್ನೆ ನಗರಸಭೆಯನ್ನು ಕಾಡ್ತಿದೆ.

ವರದಿ: ಪ್ರಭುಗೌಡ.ಎನ್.ಪಾಟೀಲ, ಟಿವಿ9 ಹಾವೇರಿ

Published On - 8:20 am, Mon, 21 November 22