ಅವರೆಲ್ಲ 15 ವರ್ಷಗಳಿಂದ ಅಲ್ಲಿ ದುಡಿಯುತ್ತಿದ್ದರು, ಆ ದುಡಿಮೆ ನೆಚ್ಚಿಕೊಂಡು ತಮ್ಮ ಬದುಕು ಕಟ್ಟಿಕೊಂಡಿದ್ದರು, ಆದರೆ ಇದೀಗ ಸರಕಾರ ಅವರ ಬದುಕಿಗೆ ಕೊಳ್ಳಿ ಇಡುವ ಕೆಲಸ ಮಾಡಿದೆ. ಆಸ್ಪತ್ರೆ ಎದುರು ಧರಣಿ ಕುಳಿತ ಸಿಬ್ಬಂದಿ, ರಾಜ್ಯ ಸರಕಾರದ (karnataka government) ವಿರುದ್ದ ಘೋಷಣೆ ಕೂಗುತ್ತಿರುವ ನೌಕರರು. ಹೌದು ಇದೆಲ್ಲ ಕಂಡು ಬಂದಿದ್ದು ಹಾವೇರಿ ನಗರದ ಜಿಲ್ಲಾ ಆಸ್ಪತ್ರೆ ಎದುರು. ಇವರೆಲ್ಲ ಕಳೆದ ಹದಿನೈದು ವರ್ಷಗಳಿಂದ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ 75 ಜನ ಡಿ ದರ್ಜೆ ನೌಕರರು (Corona hospital warriors in Haveri) ಕೆಲಸ ಮಾಡುತ್ತಿದ್ದರು. ಅದರಲ್ಲಿ ಹದಿನಾಲ್ಕು ಜನ ಡಿ ದರ್ಜೆ ನೌಕರರು ಸರಕಾರದಿಂದ ನೇಮಕ ಆದವರು, ಆದರೆ ಇದೀಗ ಅನುದಾನದ ಕೊರತೆ ಇಂದ ಮುವತೈದು ಜನರನ್ನ ಕೆಲಸದಿಂದ ಕಿತ್ತುಹಾಕಲಾಗಿದೆ (dismiss).
ಗುತ್ತಿಗೆದಾರನಿಗೆ ಒಂದು ಕೋಟಿ ನಲವತ್ತು ಲಕ್ಷ ಬಾಕಿ ಇದೆ. ಡಿ ದರ್ಜೆ ನೌಕರರನ್ನ ಕೆಲಸದಿಂದ ಕೈ ಬೀಡಲು ಜಿಲ್ಲಾ ಶಸ್ತ್ರಚಿಕಿತ್ಸಕರು ಸರಕಾರದ ಆದೇಶದ ಮೇರೆಗೆ ವಜಾ ಮಾಡಲು ಮುಂದಾಗಿದೆ. ಸರಕಾರಕ್ಕೆ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದಾಗ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಅವಶ್ಯಕತೆ ಗಿಂತ ಹೆಚ್ಚು ಸಿಬ್ಬಂದಿ ಇರುವದರಿಂದ ಹೆಚ್ವಿನ ಅನುದಾನ ಬಿಡುಗಡೆ ಮಾಡಲು ಸರಕಾರ ನಿರಾಕರಿಸಿದೆ.
ಏಕಾಏಕಿ ನೌಕರರನ್ನ ವಜಾ ಮಾಡಿದ್ದರಿಂದ ಮುವತೈದು ಕುಟುಂಬಗಳು ಬೀದಿಗೆ ಬರುವ ಸಂಧರ್ಭ ಬಂದೊದಗಿದೆ. ಇದೆ ಕೇಲಸವನ್ನ ನಂಬಿ ಆ ಕುಟುಂಬಗಳು ತಮ್ಮ ಜೀವನ ಸಾಗಿಸುತ್ತಿದ್ದರು. ಆದರೆ ಅಧಿಕಾರಿಗಳು ಮಾಡಿದ ಯಡವಟ್ಟಿಗೆ ಬಡ ಕುಟುಂಬಗಳು ಈಗ ಜಿಲ್ಲಾಸ್ಪತ್ರೆ ಎದರು ಧರಣಿ ಕುಳಿತಿದ್ದಾರೆ. ಆಸ್ಪತ್ರೆ ನೌಕರರು ಕೊರೊನಾ ಕಾಲದಲ್ಲಿ ದೇಶದ ಜನತೆಗೆ ದೇವರಾಗಿ ಕಂಡಿದ್ದರು. ಆದರೆ ಇಂದು ಅವರಿಗೆ ನೀಡಲು ಅನುದಾನ ಇಲ್ಲ ಎನ್ನುವ ಕಾರಣ ನೀಡಿ ವಜಾ ಮಾಡಲು ಹೊರಟಿರುವುದು ವಿಪರ್ಯಾಸವೆ ಸರಿ.
ಇದನ್ನೂ ಓದಿ: 1976 ಜಲನೀತಿ ನಿಮಯ ಉಲ್ಲಂಘನೆ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಭಾರಿ ಸದಸ್ಯ ಕಾರ್ಯದರ್ಶಿ ವಜಾ
ಜನರ ಕಷ್ಟ ಕಾಲದಲ್ಲಿ ಕೊರೊನಾ ವಾರಿಯರ್ ಅಂತೆಲ್ಲ ಕರೆದು ದೇಶದ ಜನ ಅವರಿಗೆ ಅಭಿನಂದಿಸಿದ ಕೈಗಳೆ ಇಂದು ಅವರನ್ನು ಬೀದಿಗೆ ತಳ್ಳಲು ಮುಂದಾಗಿವೆ. ಇನ್ನಾದರು ಸರಕಾರ ಅವರ ಸೇವೆಗೆ ಬೇಲೆ ಕೊಟ್ಟು ಅವರ ಕಷ್ಟಕ್ಕೆ ಸ್ಪಂದಿಸುವ ಕೇಲಸ ಆಗಬೇಕಿದೆ.
ವರದಿ: ರವಿ ಹೂಗಾರ, ಟಿವಿ 9, ಹಾವೇರಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ