ಮಸೀದಿ ಬಳಿಯ ಭಗವಾ ಧ್ವಜ ತೆರವಿಗೆ ಸಂಚು; ಮಾಜಿ ಶಾಸಕ, ಅಂಜುಮನ್ ಕಮಿಟಿ ಅಧ್ಯಕ್ಷನ ವಿರುದ್ಧ FIR
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಮಸೀದಿ ಮುಂಭಾಗದಲ್ಲಿ ಭಗವಾ ಧ್ವಜ ನೆಡಲಾಗಿದೆ. ಈ ಧ್ವಜವನ್ನು ತೆರವುಗೊಳಿಸಲು ಸಂಚು ರೂಪಿಸಲಾಗಿರುವ ಆಡಿಯೋ ವೈರಲ್ ಆಗಿದೆ. ಘಟನೆ ಸಂಬಂಧ ಶಿಗ್ಗಾವಿ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹಾಗೂ ಅಂಜುಮನ್ ಕಮಿಟಿ ಅಧ್ಯಕ್ಷ ರಬ್ಬಾನಿ ಸವಣೂರ ವಿರುದ್ಧ FIR ದಾಖಲಾಗಿದೆ.
ಹಾವೇರಿ, ಮಾರ್ಚ್.03: ಜಿಲ್ಲೆಯ ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಮಸೀದಿ ಮುಂಭಾಗದಲ್ಲಿ ಇರುವ ಭಗವಾ ಧ್ವಜ (Bhagwa Flag) ತೆರವುಗೊಳಿಸಲು ಸಂಚು ರೂಪಿಸಿದ ಆರೋಪ ಕೇಳಿ ಬಂದಿದ್ದು ಭಗವಾ ಧ್ವಜ ತೆರವುಗೊಳಿಸುವ ವಿಚಾರವಾಗಿ ದೂರವಾಣಿ ಸಂಭಾಷಣೆ ನಡೆಸಿರೋ ಆಡಿಯೋ ವೈರಲ್ (Audio Viral) ಆಗಿದೆ. ಶಿಗ್ಗಾವಿ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹಾಗೂ ಅಂಜುಮನ್ ಕಮಿಟಿ ಅಧ್ಯಕ್ಷ ರಬ್ಬಾನಿ ಸವಣೂರ ನಡುವೆ ನಡೆದ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ದೂರವಾಣಿ ಸಂಭಾಷಣೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಹಾವೇರಿ ಪೊಲೀಸರು ಮಾಜಿ ಶಾಸಕ ಖಾದ್ರಿ ಹಾಗೂ ರಬ್ಬಾನಿ ಸವಣೂರು ಮೇಲೆ ಎಫ್ಐಆರ್ ದಾಖಲಾಗಿದೆ. ಹುಲಗೂರು ಠಾಣೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ರಬ್ಬಾನಿ ಸವಣೂರು ವಶಕ್ಕೆ ಪಡೆದ ಪೊಲೀಸರು ಆಡಿಯೋ ಎಫ್ಎಸ್ಎಲ್ ವರದಿಗೆ ಕಳಿಸಲು ನಿರ್ಧಾರ ಮಾಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಾರಡಗಿ ಗ್ರಾಮದ ಮಸೀದಿ ಬಳಿಯ ಭಗವಾ ಧ್ವಜ ಇರುವ ಸ್ಥಳಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎರಡು ಕೋಮುಗಳ ಮದ್ಯೆ ದ್ವೇಷ ವೈಮನಸ್ಸಿನ ಭಾವನೆ ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶದಿಂದ ಒಳಸಂಚು ರೂಪಿಸಿರುವ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ಹಾಗೂ ರಬ್ಬಾನಿ ಸವಣೂರ್ ಎಂಬುವವರ ಮೇಲೆ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಕೆರೆಗೋಡು ಹನುಮಧ್ವಜ ತೆರವು ವಿವಾದ; ವಿರೋಧ ಪಕ್ಷಗಳಿಗೆ ಟಕ್ಕರ್ ಕೊಡಲು ಬೂದನೂರು ಉತ್ಸವ ಆಚರಣೆ
ಕಾರು ಚಾಲಕನ ನಿರ್ಲಕ್ಷ್ಯ.. 18ಕುರಿಗಳ ಮಾರಣಹೋಮ
ರಸ್ತೆ ದಾಟುತ್ತಿದ್ದ ವೇಳೆ ಕುರಿಗಳ ಮೇಲೆ ಕಾರು ಹರಿದು 18 ಕುರಿಗಳ ಮಾರಣಹೋಮವಾಗಿದೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಕ್ರಾಸ್ ಬಳಿ ಘಟನೆ ನಡೆದಿದೆ. ಮುತ್ತಗಿ ಗ್ರಾಮದ ನಿವಾಸಿ ಆನಂದ ಎಂಬುವರಿಗೆ ಸೇರಿದ ಕುರಿಗಳು ಸಾವನಪ್ಪಿವೆ. ಅಪಘಾತ ಎಸಗಿದ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ.
ಜಾಗ ತನ್ನದೆಂದು ಸಾರ್ವಜನಿಕ ರಸ್ತೆ ಅಗೆದ ಭೂಪ
ಜಾಗ ತನ್ನದೆಂದು ವ್ಯಕ್ತಿಯೊಬ್ಬ ಬುಲ್ಡೋಜರ್‌ನಿಂದ ಸಾರ್ವಜನಿಕ ರಸ್ತೆಯನ್ನೇ ಅಗೆದು ಹಾಕಿದ್ದಾನೆ. ಡಾಂಬರು ಹಾಕಿದ್ದ ರಸ್ತೆಯನ್ನು ಜೆಸಿಬಿಯಿಂದ ಅಗೆದಿದ್ದಾನೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಬಿಡದಿ ಬಳಿಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ರಸ್ತೆ ಜಾಗ ತನಗೆ ಸೇರಿದ್ದೆಂದು ಈತ ಇಂತಹ ಕೃತ್ಯ ಎಸಗಿದ್ದಾನೆ. ನಂತರ ಸ್ಥಳೀಯರು ರಸ್ತೆ ಅಗೆಯೋದನ್ನು ತಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಿಡದಿ ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಬನ್ನಿಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಕ್ಕಿಪಿಕ್ಕಿ ಕಾಲೋನಿ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ