ದೇವೇಗೌಡರು ಹೇಳೋದೆಲ್ಲವೂ ವೇದವಾಕ್ಯನಾ? ಆಕಸ್ಮಿಕವಾಗಿ ಪ್ರಧಾನಿಯಾಗಿದ್ರು ಅಷ್ಟೇ: ಸಿಎಂ ಸಿದ್ದರಾಮಯ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 08, 2024 | 8:11 PM

ಮುಡಾ ಟೆನ್ಷನ್, ಎಲೆಕ್ಷನ್ ಬ್ಯುಸಿ, ನಾನೇ ಸಿಎಂ ಆಗಿರ್ತೀನಿ ಅನ್ನೋ ಅಸ್ತ್ರ. ಮೂರು ಕ್ಷೇತ್ರ ಗೆಲ್ಲೋಕೆ ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ, ಶಿಗ್ಗಾಂವಿ ಸಂಡೂರಿನಲ್ಲಿ ಅಬ್ಬರದ ಪ್ರಚಾರ ಮಾಡ್ತಿದ್ದಾರೆ. ಈ ಮಧ್ಯೆ ಟಿವಿ9 ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದು, ಬಿಜೆಪಿ ನಾಯಕರು ಮಾಡ್ತಿರೋ ಆರೋಪಗಳಿಗೆ ಡಿಚ್ಚಿ ಕೊಟ್ಟಿದ್ದಾರೆ. ದೇವೇಗೌಡರ ಹೇಳಿಕೆಗಳಿಗೂ ಪಂಚ್ ಕೊಟ್ಟಿದ್ದಾರೆ.

ದೇವೇಗೌಡರು ಹೇಳೋದೆಲ್ಲವೂ ವೇದವಾಕ್ಯನಾ? ಆಕಸ್ಮಿಕವಾಗಿ ಪ್ರಧಾನಿಯಾಗಿದ್ರು ಅಷ್ಟೇ: ಸಿಎಂ ಸಿದ್ದರಾಮಯ್ಯ
ದೇವೇಗೌಡರು ಹೇಳೋದೆಲ್ಲವೂ ವೇದವಾಕ್ಯನಾ? ಆಕಸ್ಮಿಕವಾಗಿ ಪ್ರಧಾನಿಯಾಗಿದ್ರು ಅಷ್ಟೇ: ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ನವೆಂಬರ್​ 08: ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡರು (HD Deve Gowda) ಹೇಳೋದೆಲ್ಲವೂ ವೇದವಾಕ್ಯನಾ? ಆಕಸ್ಮಿಕವಾಗಿ ಪ್ರಧಾನಿಯಾಗಿದ್ರು ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಟಿವಿ9 ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೂರುವರೆ ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಮಾತಿಗೆ ದೇವೇಗೌಡರು ವ್ಯಂಗ್ಯವಾಡಿದ್ದರು. ಇದೀಗ ಆ ಮಾತಿಗೆ ಸಿಎಂ ತಿರುಗೇಟು ಕೊಟ್ಟಿದ್ದಾರೆ.

ಉಪಚುನಾವಣೆಯಲ್ಲೂ ಇವಿಎಂ ಹ್ಯಾಕ್‌ ಮಾಡಬಹುದು: ಸಿಎಂ ಸಂಶಯ 

ಇನ್ನೂ ನನ್ನ ಟಾರ್ಗೆಟ್ ಮಾಡಿದರೆ ಕಾಂಗ್ರೆಸ್ ಮುಗಿಸಬಹುದು ಅನ್ನೋದು ಬಿಜೆಪಿಗರ ಉದ್ದೇಶ. ಆದರೆ ಅವರಿಂದ ಸಾಧ್ಯವಿಲ್ಲ ಅಂತಾ ಸಿಎಂ ಗುಡುಗಿದ್ದಾರೆ. ಇನ್ನೂ ಹರಿಯಾಣದಲ್ಲಿ ಬಿಜೆಪಿಯವರು ಜನರ್ಶೀವಾದದಿಂದ ಗೆದ್ದಿಲ್ಲ. ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಉಪಚುನಾವಣೆಯಲ್ಲೂ ಇವಿಎಂ ಹ್ಯಾಕ್‌ ಮಾಡಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾನೇ ಸಿಎಂ ಎನ್ನುವ ಮೂಲಕ ಸಿಂಪಥಿ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ: ಕ್ಲೈಮ್ಯಾಕ್ಸ್​ ತಂತ್ರವೇನು ನೋಡಿ

ಹೀಗೆ ಬಿಜೆಪಿ ಮತ್ತು ಮೋದಿ ಟಾಂಗ್ ಕೊಡುತ್ತಲೇ, ಮೂರು ಕ್ಷೇತ್ರದಲ್ಲೂ ಗೆಲ್ಲುತೇವೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ ಸಿಎಂ, ಗ್ಯಾರಂಟಿ ಯೋಜನೆಗಳು ಕೈ ಹಿಡಿಯಲಿವೆ ಎಂದಿದ್ದಾರೆ.

ನಿನ್ನೆ ಸಂಡೂರಿನಲ್ಲಿ ನಾನೇ ಸಿಎಂ ಎಂದಿದ್ದ ಸಿದ್ದರಾಮಯ್ಯ, ಅಹಿಂದ ಟ್ರಂಪ್ ಕಾರ್ಡ್ ಪ್ಲೇ ಮಾಡಿದ್ದಾರೆ. ಯಾಕಂದ್ರೆ, ಸಂಡೂರಿನಲ್ಲಿ ಸಿಎಂ ಮೇಲೆ ಸಿಂಪತಿ ಕ್ರಿಯೇಟ್ ಆಗಿರುವ ಮಾಹಿತಿ ಸಿಕ್ಕಿದ್ದು, ಸಿಎಂ ಪರ ನಿಂತಿರುವ ಅಹಿಂದ ಸಮುದಾಯ ಬಿಜೆಪಿ ವಿರುದ್ಧ ತಿರುಗಿಬಿದ್ದಿದೆಯಂತೆ. ಹೀಗಾಗಿ ಮುಡಾ ವಿಚಾರಣೆಗೆ ಹಾಜರಾದ ಸಿಎಂ, ತಾನು ಏನು ತಪ್ಪು ಮಾಡಿಲ್ಲ ಎಂಬ ಕಾರ್ಡ್‌ ಪ್ಲೇ ಮಾಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರ ವ್ಯಾಪ್ತಿಯ ಬನ್ನಿಹಟ್ಟಿಯಲ್ಲಿ ಕಾಂಗ್ರೆಸ್​ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಬಿಜೆಪಿ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಅಕ್ರಮವಾಗಿ ಗಳಿಸಿದ ಹಣವನ್ನು ಈಗ ಹೊತ್ತುಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕೌಂಟರ್: ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದ ಬೆಂಬಲಿಗರು

ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ. ನನ್ನ ವಿರುದ್ಧವೂ ಬಿಜೆಪಿಯವರು ಸುಳ್ಳು ಕೇಸ್​ ಹಾಕಿದ್ದಾರೆ. ನನ್ನನ್ನು ಅಧಿಕಾರದಿಂದ ಕೆಳಗಿಳಿಸಬೇಕು ಅಂತಾ ಹುನ್ನಾರ ನಡೆಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಮುಗಿಸಬೇಕು ಅಂತಾ ಹುನ್ನಾರ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ವರದಿ: ಬ್ಯುರೋ ರಿಪೋರ್ಟ್ ಟಿವಿ9

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.